ದಕ್ಷಿಣ ಸಿನಿಮಾ ಗಳ ಹೀರೋಗಳಲ್ಲಿ ಅಲ್ಲು ಅರ್ಜುನ್ ನಂ.1, ಯಶ್ ನಂ.5:ಯಾವುದು ಈ ಹೊಸ ಲೆಕ್ಕಾಚಾರ??

0 3

ಟಾಲಿವುಡ್ ನಲ್ಲಿ ನಟ ಅಲ್ಲು ಅರ್ಜುನ್ ಸ್ಟೈಲಿಶ್ ಸ್ಟಾರ್ ಎಂದೇ ಹೆಸರನ್ನು ಪಡೆದುಕೊಂಡಿರುವ ನಟ. ವರ್ಷಗಳು ಉರುಳಿದ ಹಾಗೆ ಅಲ್ಲು ಅರ್ಜುನ್ ಅವರ ಚಾರ್ಮ್ ಹೆಚ್ಚುತ್ತಿದೆಯೇನೋ ಎನ್ನುವಂತೆ ಅವರ ಬೇಡಿಕೆ ಸಹಾ ಹೆಚ್ಚಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಪರ್ವ ಪ್ರಾರಂಭವಾದ ಮೇಲಂತೂ ಅಲ್ಲು ಅರ್ಜುನ್ ಕೂಡಾ ತೆಲುಗು ಸಿನಿ ರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ ಎನ್ನುವುದು ಸತ್ಯ. ದಕ್ಷಿಣದ ಬಹುತೇಕ ಸ್ಟಾರ್ ನಟರೆಲ್ಲಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಹೊರ ಹೊಮ್ಮಿದ್ದಾರೆ. ಪ್ರಸ್ತುತ ನಟ ಅಲ್ಲು ಅರ್ಜುನ್ ಅವರು ಅವರ ಬಹುನಿರೀಕ್ಷಿತ ಸಿನಿಮಾ ಪುಷ್ಪ ಸಿನಿಮಾದ ಕೊನೆಯ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಈ ವೇಳೆ ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಏರುತ್ತಲೇ ಇದೆ. ಸೋಶಿಯಲ್ ಮೀಡಿಯಾಗಳ ದಿಗ್ಗಜರಲ್ಲಿ ಒಂದಾದ ಇನ್ಸ್ಟಾಗ್ರಾಂ ನಲ್ಲಿ ಇದೀಗ ಅಲ್ಲು ಅರ್ಜುನ್ ಹೊಸದೊಂದು ಸಾಧನೆಯನ್ನು ಮಾಡಿದ್ದಾರೆ.

ಹೌದು ಇನ್ಸ್ಟಾಗ್ರಾಂ ನಲ್ಲಿ ಇದೀಗ ಅಲ್ಲು ಅರ್ಜುನ್ ಅವರ ಹಿಂಬಾಲಕರ ಸಂಖ್ಯೆಯ 13 M ಅಂದರೆ 1.3 ಕೋಟೆಯನ್ನು ತಲುಪಿದೆ. ಇಷ್ಟೊಂದು ಫಾಲೋಯರ್ಸ್ ಹೊಂದುವ ಮೂಲಕ ಇಂತಹ ಒಂದು ಸಾಧನೆಯನ್ನು ಮಾಡಿದಂತಹ ದಕ್ಷಿಣ ಭಾರತ ಸಿನಿ ರಂಗದ ಮೊದಲ ನಟ ಎನಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ಈ ಮೂಲಕ ಅಲ್ಲು ಅರ್ಜುನ್ ಅವರು ದಕ್ಷಿಣದ ಸ್ಟಾರ್ ಗಳಲ್ಲಿ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಟ ಎನಿಸಿಕೊಂಡರೆ, ಎರಡನೇ ಸ್ಥಾನವನ್ನು 12.9 ಮಿಲಿಯನ್ ಫಾಲೋಯರ್ಸ್ ಮೂಲಕ ವಿಜಯ್ ದೇವರಕೊಂಡ ತನ್ನದಾಗಿಸಿಕೊಂಡಿದ್ದಾರೆ.

71 ಲಕ್ಷ ಫಾಲೋಯರ್ಸ್ ನೊಂದಿಗೆ ಮಹೇಶ್ ಬಾಬು ಮೂರನೇ ಸ್ಥಾನವನ್ನು, 69 ಲಕ್ಷ ಫಾಲೋಯರ್ಸ್ ಮೂಲಕ ಪ್ರಭಾಸ್ ನಾಲ್ಕನೇ ಸ್ಥಾನದಲ್ಲಿ ಮತ್ತು 50 ಲಕ್ಷ ಹಿಂಬಾಲಕರನ್ನು ಪಡೆದು ರಾಕಿಂಗ್ ಸ್ಟಾರ್ ಯಶ್ ಅವರು ಐದನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ವಿಜಯ್ ಸೇತುಪತಿ ಮತ್ತು ರಾಮ್ ಚರಣ್ ತೇಜಾ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರ ಅಭಿನಯದ ಅಲಾ ವೈಕುಂಠ ಪುರಮುಲೋ ಸಿನಿಮಾದ ದೊಡ್ಡ ಹಿಟ್ ನ ನಂತರ ಅವರ ಅಭಿಮಾನಿಗಳ ಸಂಖ್ಯೆ ಕೂಡಾ‌ ಹೆಚ್ಚಿದೆ. ಪ್ರಸ್ತುತ ಅಭಿಮಾನಿಗಳು ಪುಷ್ಪ ಸಿನಿಮಾಕ್ಕೆ ಕಾಯುತ್ತಿದ್ದಾರೆ.

Leave A Reply

Your email address will not be published.