ದಕ್ಷಿಣ ಸಿನಿಮಾ ಅಬ್ಬರಕ್ಕೆ ಬಾಲಿವುಡ್ ಮಂಕಾಯ್ತಾ? ನಾವು ಇಂತಹ ಸಿನಿಮಾ ಮಾಡಬೇಕು: ಸಲ್ಮಾನ್ ಖಾನ್

Entertainment Featured-Articles News

ಕೆಜಿಎಫ್, ಬಾಹುಬಲಿ, ತ್ರಿಬಲ್ ಈ ಎಲ್ಲಾ ಸಿನಿಮಾಗಳು ಒಂದಾದ ನಂತರ ಮತ್ತೊಂದು ದೊಡ್ಡ ಯಶಸ್ಸನ್ನು ಪಡೆಯುವ ಮೂಲಕ ಭಾರತೀಯ ಚಿತ್ರರಂಗ ಎಂದರೆ ಅದು ಬಾಲಿವುಡ್ ಎನ್ನುವ ಪೂರ್ವಾಗ್ರಹಕ್ಕೆ ಒಂದು ಪೂರ್ಣ ವಿರಾಮವನ್ನು ಹಾಕಿ, ಸಿನಿಮಾ ಜಗತ್ತು ದಕ್ಷಿಣದ ಸಿನಿಮಾ ರಂಗದ ಕಡೆಗೆ ನೋಡುವಂತಹ ಅದ್ಭುತ ಸಿನಿಮಾಗಳು ನಮ್ಮ ದಕ್ಷಿಣ ಸಿನಿಮಾ ರಂಗದಲ್ಲಿ ನಿರ್ಮಾಣವಾಗುತ್ತಿದೆ.‌ ಹಿಂದಿ ಸಿನಿಮಾಗಳು ಸದ್ದು ಮಾಡುವ ಕಡೆಗಳಲ್ಲೂ ದಕ್ಷಿಣದ ಸಿನಿಮಾಗಳು ಅಬ್ಬರಿಸುತ್ತಿರುವುದು ದಕ್ಷಿಣ ಸಿನಿಮಾ ರಂಗದ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದೆ.

ಈಗ ದಕ್ಷಿಣದಲ್ಲಿ ಅದ್ಭುತ ಸಿನಿಮಾಗಳು ನಿರ್ಮಾಣವಾಗುತ್ತಿವೆ ಎನ್ನುವುದನ್ನು ಬಾಲಿವುಡ್ ನ ಭಾಯ್ ಜಾನ್ ಖ್ಯಾತಿಯ ಸ್ಟಾರ್ ನಟ ಸಲ್ಮಾನ್ ಖಾನ್ ಸಹಾ ಒಪ್ಪಿಕೊಂಡಿದ್ದಾರೆ. ಹೌದು, ನಟ ಸಲ್ಮಾನ್ ಖಾನ್ ಇದೇ ಮೊದಲ ಬಾರಿಗೆ ದಕ್ಷಿಣದ ಸಿನಿಮಾವೊಂದರಲ್ಲಿ ಅತಿಥಿ ಪಾತ್ರವನ್ನು ಮಾಡುತ್ತಿದ್ದಾರೆ. ಟಾಲಿವುಡ್ ನ ಸ್ಟಾರ್ ನಟ, ಮೆಗಾಸ್ಟಾರ್ ಚಿರಂಜೀವಿ ಅವರ ಗಾಡ್ ಫಾದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾದ ಚಿತ್ರೀಕರಣದಲ್ಲಿ ಸಹಾ ಸಲ್ಲು ಭಾಯ್ ಭಾಗವಹಿಸಿದ್ದಾರೆ. ನಟ ಚಿರಂಜೀವಿ ಅವರು ಸಲ್ಮಾನ್ ಖಾನ್ ಜೊತೆಗಿನ ಫೋಟೋವನ್ನು ಸಹಾ ಹಂಚಿಕೊಂಡಿದ್ದರು. ಇನ್ನು ಇತ್ತೀಚಿನ ಒಂದು ಸುದ್ದಿ ಗೋಷ್ಠಿಯ ವೇಳೆ ನಟ ಸಲ್ಮಾನ್ ಖಾನ್ ಮಾತನಾಡುತ್ತಾ, ದಕ್ಷಿಣ ಭಾರತ ಸಿನಿಮಾ ರಂಗದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರ ಮಾತುಗಳು ಈಗ ಎಲ್ಲರ ಗಮನವನ್ನು ಸೆಳೆದಿದ್ದು, ಬಾಲಿವುಡ್ ಕೂಡಾ ನಮ್ಮ ಸಿನಿಮಾಗಳ ಸಾಮರ್ಥ್ಯ ಅರಿಯುವ ಕಾಲ ಬಂದಿದೆ ಎನ್ನುತ್ತಿದ್ದಾರೆ.‌

ಸಲ್ಮಾನ್ ಮಾತನಾಡುತ್ತಾ, ಚಿರಂಜೀವಿ ಅವರ ಮಗ ರಾಮ್ ಚರಣ್ ನನಗೆ ಒಳ್ಳೆಯ ಸ್ನೇಹಿತ. ತ್ರಿಬಲ್ ಆರ್ ನಲ್ಲಿ ಅವರು ಬಹಳ ಅದ್ಭುತವಾದಂತಹ ಕೆಲಸವನ್ನು ಮಾಡಿದ್ದಾರೆ. ಸಿನಿಮಾ ಯಶಸ್ಸನ್ನು ಪಡೆದಿದ್ದು ನಾನು ಅವರಿಗೆ ಶುಭ ಹಾರೈಸಿದ್ದು, ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದೇನೆ. ಇನ್ನು ದಕ್ಷಿಣದಲ್ಲಿ ನಮ್ಮ ಸಿನಿಮಾಗಳು ಒಳ್ಳೆ ಪರ್ಫಾರ್ಮ್ ಮಾಡುತ್ತಿಲ್ಲ. ಆದರೆ ದಕ್ಷಿಣದ ಸಿನಿಮಾಗಳು ಹಿಂದಿಯಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು ಅದು ನನಗೆ ಅಚ್ಚರಿಯನ್ನು ಮೂಡಿಸುತ್ತಿದೆ.

ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಯಿಸಂ ಅನ್ನು ನಂಬಲಾಗುತ್ತದೆ. ಆದರೆ ಬಾಲಿವುಡ್ ನಲ್ಲಿ ಇಂತಹ ಸಿನಿಮಾಗಳು ಕೆಲವೇ ಕೆಲವು ನಿರ್ಮಾಣವಾಗುತ್ತಿದೆ. ಬಾಲಿವುಡ್ ನಲ್ಲಿ ಸಹಾ ಇಂತಹ ಸಿನಿಮಾಗಳ ನಿರ್ಮಾಣ ಆಗಬೇಕಿದೆ. ಇಲ್ಲಿ ಸ್ಟಾರ್ ಗಳಿಗೆ ದೊಡ್ಡ ಅಭಿಮಾನಿಗಳ ಬಳಗ ಇದೆ. ಚಿರಂಜೀವಿ ಅವರ ಜೊತೆ ಕೆಲಸ ಮಾಡುವುದು ಖುಷಿ ನೀಡಿದೆ. ಅವರು ವಿಭಿನ್ನವಾದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲೂ ಜನ ಮೆಚ್ಚುವ ಸಿನಿಮಾಗಳನ್ನು ಮಾಡಬೇಕಿದೆ ಎಂದಿದ್ದಾರೆ ಸಲ್ಮಾನ್ ಖಾನ್.

Leave a Reply

Your email address will not be published.