ದಕ್ಷಿಣ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ತತ್ತರಿಸಿದೆ ಎಂದು ಕಾರಣ ವಿವರಿಸಿದ ನೀಡಿದ ಬಾಲಿವುಡ್ ನಟ

Written by Soma Shekar

Published on:

---Join Our Channel---

ಬಾಲಿವುಡ್ ನವರಿಗೆ ದಕ್ಷಿಣದ ಸಿನಿಮಾಗಳು ಪಡೆಯುತ್ತಿರುವಂತಹ ಅಭೂತಪೂರ್ವ ಯಶಸ್ಸನ್ನು ಅರಗಿಸಿಕೊಳ್ಳುವುದು ಅದೇಕೋ ಸಾಧ್ಯವಾಗುತ್ತಿಲ್ಲ ಎನ್ನುವಂತಾಗಿದೆ. ಒಬ್ಬರ ನಂತರ ಮತ್ತೊಬ್ಬರು ಎನ್ನುವಂತೆ ಪ್ರತ್ಯಕ್ಷ ಹಾಗೂ ಪರೋಕ್ಷ ಹೇಳಿಕೆಗಳ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುವ ಕಾಯಕದಲ್ಲಿ ತೊಡಗಿಕೊಂಡಿದ್ದು, ದಕ್ಷಿಣದ ಸಿನಿ ಪ್ರೇಮಿಗಳ ಸಿಟ್ಟು, ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಒಂದರ್ಥದಲ್ಲಿ ಪುಷ್ಪ, ತ್ರಿಬಲ್ ಆರ್ ಮತ್ತು ಕೆಜಿಎಫ್-2 ಗಳ ವಿಜಯ ಬಾಲಿವುಡ್ ವಲಯದಲ್ಲಿ ಒಂದು ಭ ಯ, ಆ ತಂ ಕವನ್ನು ಹುಟ್ಟು ಹಾಕಿದೆ.

ಈಗ ಇವೆಲ್ಲವುಗಳ ನಡುವೆ ಬಾಲಿವುಡ್ ನ ನಟ ದಿ ಫ್ಯಾಮಿಲಿ ಮ್ಯಾನ್ ಖ್ಯಾತಿಯ ನಟ ಮನೋಜ್ ಬಾಜಪೇಯಿ ದಕ್ಷಿಣದ ಸಿನಿಮಾಗಳ ಬಗ್ಗೆ ಒಂದಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರು ಮಾತನಾಡುತ್ತಾ, ದಕ್ಷಿಣ ಭಾರತದಲ್ಲಿ ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳಿವೆ. ಬಾಲಿವುಡ್ ನಿರ್ಮಾಪಕರು ಇದನ್ನು ನೋಡಿ ತತ್ತರಿಸಿದ್ದಾರೆ. ಅವರಿಗೀಗ ಎಲ್ಲಿ ನೋಡುವುದು, ಏನು ಮಾಡುವುದು ಎನ್ನುವುದು ಕೂಡಾ ಗೊತ್ತಾಗದಂತಹ ಗೊಂದಲದ ಪರಿಸ್ಥಿತಿ ಎದುರಾಗಿದೆ ಎ‌ಂದಿದ್ದಾರೆ ಮನೋಜ್ ಬಾಜಪೇಯಿ ಅವರು.

ದಕ್ಷಿಣದ ಸಿನಿಮಾಗಳಲ್ಲಿ ಒಂದೊಂದು ದೃಶ್ಯವನ್ನು ಸಹಾ ಬಹಳ ಒಲವಿನಿಂದ ಮಾಡುತ್ತಾರೆ. ಸಿನಿಮಾ ಕಡೆ ಅವರ ಒಲವು ಬಹಳ ಹೆಚ್ಚಾಗಿದ್ದು, ಪ್ರೇಕ್ಷಕರ ನಾಡಿ ಬಡಿತವನ್ನು ಅವರು ಅರ್ಥ ಮಾಡಿಕೊಂಡಿದ್ದಾರೆ. ರಾಜಮೌಳಿ ಅವರ ತ್ರಿಬಲ್ ಆರ್, ಯಶ್ ಪ್ರಶಾಂತ್ ನೀಲ್ ಅವರ ಕೆಜಿಎಫ್-2, ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರಗಳಲ್ಲಿನ ದೃಶ್ಯಗಳಲ್ಲಿ ನಮಗೆ ಸಾ ವು, ಬದುಕಿನ ಹೋರಾಟ ಕಾಣುತ್ತದೆ. ಇದರಲ್ಲಿ ಬಾಲಿವುಡ್ ಹಿಂದೆ ಬಿದ್ದಿದೆ. ನಮ್ಮ ಆಲೋಚನೆಗಳು ಹಣ, ಬಾಕ್ಸಾಫೀಸ್ ಬಗ್ಗೆ ಆಲೋಚಿಸುತ್ತೇವೆ.

ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುತ್ತಿಲ್ಲ ಆದರೆ ಅದನ್ನೇ ವೈಶಿಷ್ಟ್ಯತೆ ಎಂದು ಕರೆಯುತ್ತಿದ್ದೇವೆ. ಇದು ನಮಗೆ ಪಾಠವಾಗಿದೆ. ಆದರೆ ಮುಂಬೈನ ನಿರ್ಮಾಪಕರು ಇದನ್ನು ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎನ್ನುವ ಮಾತುಗಳನ್ನು ಮನೋಜ್ ಬಾಜಪೇಯಿ ಅವರು ಹಂಚಿಕೊಂಡಿದ್ದಾರೆ. ನಟ ಮನೋಜ್ ಬಾಜಪೇಯಿ ಬಾಲಿವುಡ್ ನಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದು, ಅತ್ಯುತ್ತಮ ನಟನೆಗೆ ಹೆಸರಾಗಿದ್ದು, ಸೀರಿಯಲ್ ನಿಂದ ಸಿನಿಮಾಕ್ಕೆ ಬಂದ ಇವರು ದಕ್ಷಿಣದ ಸಿನಿಮಾಗಳಲ್ಲೂ ನಟಿಸಿದ್ದಾರೆ.

Leave a Comment