ಥೇಟ್ ಹೀರೋ ತರ ಸ್ಟಂಟ್ ಮಾಡಿದ, ಆಮೇಲೆ ಸೀನ್ ರಿವರ್ಸ್ ಹೊಡೆದು ಆಗಿದ್ದೇನು ಗೊತ್ತಾ?

Entertainment Featured-Articles News Viral Video

ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಬೇಕು ಅನ್ನೋ ಕಾರಣಕ್ಕೆ ಕೆಲವರು ಕೆಲವೊಂದು ಸ್ಟಂಟ್ ಗಳನ್ನು ಮಾಡುತ್ತಲೇ ಇರುತ್ತಾರೆ. ಅ ಪಾ ಯ ಕಾರಿಯಾದ ಸ್ಟಂಟ್ ಗಳನ್ನು ಮಾಡಲು ಸಹಾ ಹಿಂಜರಿಯುವುದಿಲ್ಲ.‌ ಅದರಲ್ಲೂ ವಿಶೇಷವಾಗಿ ಯುವಕರು ಪ್ರಾಣವನ್ನು ಲೆಕ್ಕಿಸದೇ ಸ್ಟಂಟ್ ಗಳನ್ನು ಮಾಡಲು ಮುಂದಾಗುವುದು ಸಾಮಾನ್ಯವಾದ ಸಂಗತಿಯಾಗಿದೆ. ಇಂತಹುದೇ ಒಂದು ಸಾಹಸಕ್ಕೆ ಕೈ ಹಾಕಿ, ವಿವಿಧ ರೀತಿಯ ಸ್ಟಂಟ್ ಗಳನ್ನು ಮಾಡುತ್ತಿದ್ದ ಒಬ್ಬ ಯುವಕನನ್ನು ಹಿಡಿದು, ಜೈಲು ಕಂಬಿಗಳನ್ನು ಎಣಿಸುವಂತೆ ಮಾಡಿದ್ದಾರೆ ಪೋಲಿಸರು.

ಇಂತಹುದೊಂದು ಘಟನೆಯು ಉತ್ತರ ಪ್ರದೇಶದ ನೋಯ್ಡಾದಲ್ಲಿ ಜರುಗಿದೆ. ನೋಯ್ಡಾದ ಬುದ್ಧ ನಗರ್ ನಿವಾಸಿಯಾಗಿರುವ 21 ವರ್ಷ ವಯಸ್ಸಿನ ರಾಜೀವ್ ಎನ್ನುವ ಯುವಕ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯ ಫಾಲೋಯರ್ಸ್ ಗಳನ್ನು ಪಡೆಯುವ ಆಸೆಯನ್ನು ಹೊಂದಿದ್ದನು. ಅದಕ್ಕಾಗಿ ಆತ ಅ ಪಾ ಯ ಕಾರಿ ಸ್ಟಂಟ್ ಗಳನ್ನು ಮಾಡಲು ಮುಂದಾಗಿದ್ದಾನೆ. ಅದರ ಭಾಗವಾಗಿ ಕಾರುಗಳ ಮೇಲೆ ಮತ್ತು ಬೈಕ್ ಮೇಲೆ ಆತ ಸ್ಟಂಟ್ ಗಳನ್ನು ಮಾಡಿದ್ದಾನೆ.

ಯುವಕ ರಾಜೀವ್ SUV ಕಾರುಗಳ ಮೇಲೆ ನಿಂತು ಸಿನಿಮಾದಲ್ಲಿ ನಾಯಕ ಮಾಡಿದ ಸ್ಟಂಟ್ ಮಾಡಿದ್ದಾನೆ, ಅಲ್ಲದೇ ರಸ್ತೆಯಲ್ಲಿ ಬೈಕ್ ನಲ್ಲಿ ಒಂದು ಅಪಾಯಕಾರಿ ಸ್ಟಂಟ್ ಸಹಾ ಮಾಡಿದ್ದು, ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾನೆ. ಈ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದ ಪೋಲಿಸರು ಕೆಲವು ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿದ್ದಾರೆ. ವೀಡಿಯೋಗಳ ಆಧಾರದಲ್ಲಿ ಯುವಕನ ವಿಳಾಸ ಪತ್ತೆ ಮಾಡಿ ಬಂಧಿಸಿದ್ದಾರೆ.

ನೋಯ್ಡಾದ ಸೆಕ್ಟರ್ 116 ನ ಪೋಲಿಸ್ ಠಾಣೆಯ ಎಸ್ ಹೆಷ್ ಓ ಶರದ್ ಕಾಂತ್ ಅವರು ಈ ವಿಷಯವನ್ನು ತಿಳಿಸಿದ್ದಾರೆ. 1991 ರಲ್ಲಿ ನಟ ಅಜಯ್ ದೇವಗನ್ ನಟಿಸಿದ್ದ ಫೂಲ್ ಔರ್ ಕಾಂಟೆ ಸಿನಿಮಾದಲ್ಲಿ ನಾಯಕ ನಟ ಕಾರುಗಳ ಮೇಲೆ ನಿಂತು ಎಂಟ್ರಿ ಕೊಡುವ ದೃಶ್ಯವಿದ್ದು,‌ ಯುವಕ ರಾಜೀವ್ ಕೂಡಾ ಅದೇ ಸ್ಟಂಟನ್ನು ತಾನು ಸಹಾ ಮಾಡಿ ವೀಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದನು. ಪೋಲಿಸರು ಆತ ಬಳಸಿದ್ದ ಎರಡು ಕಾರು, ಮೋಟಾರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published.