ತೈಲ ಸಾಮ್ರಾಜ್ಯದ ರಾಣಿಯಾಗಲು ನಟಿ ನಯನತಾರಾ ಸಜ್ಜು: ಹೊಸ ಬ್ಯುಸಿನೆಸ್ ಗೆ ನಟಿ ಎಂಟ್ರಿ
ಒಂದು ಕಾಲದಲ್ಲಿ ಸಿನಿಮಾ ಕಲಾವಿದರಿಗೆ ಸಿನಿಮಾ ಮಾತ್ರವೇ ಅವರ ಜೀವನಾಧಾರ ಎನ್ನುವಂತೆ ಇತ್ತು. ಸಿನಿಮಾ ಅವಕಾಶ ಕಡಿಮೆಯಾಗುತ್ತಲೇ ಅವರ ಜೀವನ ಸಹಾ ದು ರ್ಬ ರ ಆಗಿ ಬಿಡುತ್ತಿತ್ತು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಸಿನಿಮಾ ತಾರೆಯರು ಸಿನಿಮಾಗಳ ಜೊತೆ ಜೊತೆಗೆ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಬ್ಯುಸಿನೆಸ್ ಗಳ ಕಡೆಗೆ ಗಮನವನ್ನು ನೀಡಿದ್ದಾರೆ. ನಟರು ಮಾತ್ರವೇ ಅಲ್ಲದೇ ನಟಿಯರು ಸಹಾ ಬ್ಯುಸಿನೆಸ್ ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗಂತೂ ನಟಿಯರು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ.
ನಟಿ ನಯನತಾರಾ ದಕ್ಷಿಣ ಸಿನಿಮಾ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಆದರೂ ನಯನತಾರಾ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಗೆಳೆಯ ವಿಘ್ನೇಶ್ ಜೊತೆಗಿನ ವಿಷಯಗಳಿಗಿಂತ ಹೆಚ್ಚು ಸುದ್ದಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ನಯನತಾರಾ ತಮ್ಮ ಗೆಳೆಯ ವಿಘ್ನೇಶ್ ಜೊತೆಗೆ ರೌಡಿ ಪಿಕ್ಚರ್ಸ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ.
ಈಗ ಈ ಜೋಡಿ ಹೊಸದೊಂದು ಇಂಟರ್ನ್ಯಾಷನಲ್ ಬ್ಯುಸಿನೆಸ್ ಗೆ ಕೈ ಹಾಕಲು ದುಬೈಗೆ ಹಾರಿದ್ದಾರೆ ಎನ್ನಲಾಗಿದೆ. ದೊರೆತಿರುವ ಮಾಹಿತಿಗಳ ಪ್ರಕಾರ ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ದುಬೈನ ಒಂದು ತೈಲ ಕಂಪನಿಯೊಂದರಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ದುಬೈನ ತೈಲ ಕಂಪನಿಯಲ್ಲಿ ಇಬ್ಬರೂ 100 ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಲಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಇಬ್ಬರೂ ಕಳೆದ ತಿಂಗಳು ದುಬೈ ಪ್ರವಾಸಕ್ಕೆ ಹೋಗಿದ್ದರೆನ್ನಲಾಗಿದೆ.
ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಸ್ಟಾರ್ ನಟರ ಸಿನಿಮಾಗಳಲ್ಲಿ ನಯನತಾರಾ ಬ್ಯುಸಿಯಾಗಿದ್ದಾರೆ. ಅಲ್ಲದೇ ಆ್ಯಟ್ಲಿ ನಿರ್ದೇಶನದ ಬಾಲಿವುಡ್ ಸಿನಿಮಾದಲ್ಲಿ ಶಾರೂಖ್ ಶಾನ್ ಜೊತೆಗೆ ನಯನತಾರಾ ನಾಯಕಿಯಾಗಿ ತೆರೆ ಹಂಚಿಕೊಳ್ಳುವ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಪಟ್ಟು, ಗಾಡ್ ಫಾದರ್, ಲಯನ್, ಆಟೋ ಜಾನಿ, ಇನ್ನೂ ಮುಂತಾದ ಸಿನಿಮಾಗಳಲ್ಲಿ ನಯನತಾರಾ ತೊಡಗಿಕೊಂಡಿದ್ದಾರೆ.