ತೈಲ ಬೆಲೆಯಲ್ಲಿ ಭಾರೀ ಏರಿಕೆ, ಹಿಂ ಸಾ ಚಾರಕ್ಕೆ ಇಳಿದ ಜನ: ಕಜಕಿಸ್ತಾನದಲ್ಲಿ ಸರ್ಕಾರ ಪತನ
ತೈಲ ಬೆಲೆ ಏರಿಕೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಅನೇಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಇಂತಹುದೇ ಇಂದು ತೈಲ ಬೆಲೆಯ ಏರಿಕೆಯನ್ನು ವಿ ರೋ ಧಿಸಿ ನಡೆಸುತ್ತಿರುವ ಪ್ರ ತಿ ಭ ಟನೆಯೊಂದು ಹಿಂ ಸಾ ಚಾ ರಕ್ಕೆ ತಿರುಗಿದ ಘಟನೆಯೊಂದು ಕಜಕಿಸ್ತಾನದಲ್ಲಿ ನಡೆದಿದೆ. ತೈಲ ಉತ್ಪಾದನೆಯ ಮಧ್ಯ ಏಷ್ಯಾದಲ್ಲಿ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹೀಗೆ ತೈಲದ ಬೆಲೆಯಲ್ಲಿ ಏರಿಕೆಯಾಗಿದ್ದನ್ನು ಕಂಡು ಅಲ್ಲಿನ ಜನರು ಇದನ್ನು ಖಂ ಡಿಸಿ ತೀವ್ರವಾದ ಹೋರಾಟವನ್ನು ಮಾಡಲು ಮುಂದಾಗಿದ್ದಾರೆ. ಈ ಪ್ರ ತಿ ಭ ಟನೆಯು ಹಿಂ ಸಾ ಚಾರದ ರೂಪಕ್ಕೆ ಪರಿವರ್ತನೆಯಾಗಿದೆ.
ಹಿಂ ಸಾ ಚಾರದ ವೇಳೆ ನೂರಕ್ಕೂ ಹೆಚ್ಚು ಮಂದಿ ಪೋಲಿಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಲಾಗದೇ ಹೋದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರವು ತುರ್ತು ಪರಿಸ್ಥಿತಿಯ ಘೋಷಣೆಯನ್ನು ಮಾಡಿತ್ತು. ಆದರೆ ಜನ ಅದಕ್ಕೂ ಬಗ್ಗದೇ ತಮ್ಮ ಪ್ರ ತಿ ಭಟ ನೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ಅಲ್ಲಿನ ಸರ್ಕಾರ ರಾಜೀನಾಮೆಯನ್ನು ನೀಡಿದೆ. ಅಧ್ಯಕ್ಷ ಕಸ್ಸೀಮ್ ಜೊಮಾರ್ಟ್ ಟೊಕಾಯೆವ್ ಸರ್ಕಾರದ ರಾಜೀನಾಮೆಯನ್ನು ಸ್ವೀಕಾರ ಮಾಡಿದ್ದಾರೆ.
ಸರ್ಕಾರವು ಬುಧವಾರ ರಾಜೀನಾಮೆಯನ್ನು ನೀಡಿದರೂ ಸಹಾ ಜನರ ಘ ರ್ಷ ಣೆ ಮಾತ್ರ ನಿಂತಿಲ್ಲ. ಭದ್ರತಾ ಪಡೆಗಳು ಪ್ರ ತಿ ಭ ಟನಾ ಕಾರರನ್ನು ಚದುರಿಸಲು ಅಶ್ರವಾಯು ಪ್ರಯೋಗವನ್ನು ಮಾಡಿದೆ. ಆದರೆ ಜನರು ರೊಚ್ಚಿಗೆದ್ದ ಕಾರಣ ಈಗಾಗಲೇ ಅಂಗಡಿ ಮುಗ್ಗಟ್ಟುಗಳು, ರೆಸ್ಟೋರೆಂಟ್ ಹಾಗೂ ಸಾರ್ವಜನಿಕ ಕಟ್ಟಡಗಳ ಮೇಲೆ ಸಹಾ ದಾಳಿ ನಡೆದಿದೆ ಎನ್ನಲಾಗಿದೆ. ಕಜಕಿಸ್ತಾನದಲ್ಲಿ ಈ ವರ್ಷದ ಆರಂಭದಲ್ಲಿ ಎಲ್ ಪಿ ಜಿ ಬೆಲೆ ಹೆಚ್ಚಿಸಿದ ನಂತರ ಇಂತಹ ಪ್ರ ತಿ ಭ ಟನೆಯೊಂದು ಆರಂಭವಾಗಿತ್ತು ಎನ್ನಲಾಗಿದೆ.
2021 ರಲ್ಲಿ ಎಲ್ ಪಿ ಜಿ ಬೆಲೆ 1 ಲೀ. ಗೆ 50 ಟೆಂಗೆ ( ಅಂದಾಜು 8.53 ರೂ) ಇತ್ತು. ಈ ಬೆಲೆಯು ವರ್ಷಾಂತ್ಯದ ವೇಳೆಗೆ 79-80 ಟೆಂಗೆಗೆ ಏರಿಕೆಯಾಗಿದೆ. ( ಅಂದರೆ ಅಂದಾಜು 13.64 ರೂ) ಈ ಬೆಲೆ 2022 ರ ನೂತನ ವರ್ಷದ ಆರಂಭದಲ್ಲೇ ಏಕಾಏಕೀ 120 ಟೆಂಗೆ ಗೆ ( ಅಂದಾಜು 20.47 ರೂ ) ಏರಿಕೆಯಾಗಿದ್ದು,ಇಂತಹ ಒಂದು ಏಕಾಏಕೀ ಏರಿಕೆಯಿಂದ ಜನರು ಆ ಕ್ರೋ ಶಕ್ಕೆ ಒಳಗಾಗಿ ಪ್ರ ತಿ ಭ ಟನೆಯನ್ನು ತೀವ್ರಗೊಳಿಸಿದ್ದಾರೆ.