ತೆಲುಗು ಸೀರಿಯಲ್ ಕ್ವಿಟ್ ಮಾಡಿದ ಪಾರು ಸೀರಿಯಲ್ ಖ್ಯಾತಿಯ ನಟಿ ಮಾನ್ಸಿ ಜೋಷಿ!! ಏನಿದಕ್ಕೆ ಕಾರಣ??

Written by Soma Shekar

Published on:

---Join Our Channel---

ಕನ್ನಡದ ನಾಯಕಿ, ಪಾರು , ರಾಧಾ ರಮಣ, ಧಾರಾವಾಹಿ ಗಳ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ನಟಿ ಮಾನ್ಸಿ ಜೋಷಿ, ಪಾರು ಸೀರಿಯಲ್ ನ ಅನುಷ್ಕಾ ಪಾತ್ರದ ಮೂಲಕ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಜನಪ್ರಿಯತೆ ಪಡೆದುಕೊಂಡಿದ್ದರು. ಕನ್ನಡದಲ್ಲಿ ಮಾತ್ರವೇ ಅಲ್ಲದೇ ತೆಲುಗು ಮತ್ತು ತಮಿಳು ಸೀರಿಯಲ್ ಗಳಲ್ಲಿ ಸಹಾ ನಟಿಸುತ್ತಾ, ಒಂದಾದ ನಂತರ ಮತ್ತೊಂದು ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಮಾನ್ಸಿ ಅವರು ಒಂದು ತೆಲುಗು ಸೀರಿಯಲ್ ನಿಂದ ಹೊರ ಬಂದಿದ್ದು,‌ ಮಾದ್ಯಮವೊಂದರ ಜೊತೆಗೆ ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ.

ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಆಕಾಶಮಂತ ಸೀರಿಯಲ್ ನ ಕನ್ನಡ ರಿಮೇಕ್ ಅಣ್ಣ ತಂಗಿ ಸೀರಿಯಲ್ ಮೂಲಕ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಮಾನ್ಸಿ ಜೋಷಿ. ಮಾನ್ಸಿ ಅವರು ತಾನು ಈ ಹಿಂದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಒಂದು ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಬಯಸಿದ್ದೆ. ಈಗ ಅಂತಹ ಅವಕಾಶ ಸಿಕ್ಕಿದೆ. ಹಳ್ಳಿಯ ಅಭಿವೃದ್ಧಿಗಾಗಿ ಕೆಲಸ ಮಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಈಗ ಕಾಣಿಸಿಕೊಳ್ಳಲು ಹೊರಟಿದ್ದೇನೆ ಎನ್ನುವ ಮಾತನ್ನು ಹೇಳಿದ್ದಾರೆ ಮಾನ್ಸಿ ಅವರು.

ಈ ಸೀರಿಯಲ್ ಉದ್ದಕ್ಕೂ ನಾನು ಸೀರೆಯಲ್ಲಿ ಕಾಣಿಸಿಕೊಳ್ಳುತ್ತೇನೆ. ಸಮಾಜಕ್ಕೆ ಒಳ್ಳೆಯದು ಮಾಡುವ ಯುವಕನ ಜೊತೆಗೆ ನನಗೆ ಸೀರಿಯಲ್ ನಲ್ಲಿ ಪ್ರೀತಿಯಾಗುತ್ತದೆ ಎಂದು ಸೀರಿಯಲ್ ಬಗ್ಗೆ ಕೆಲವು ಮಾಹಿತಿಗಳನ್ನು ಅವರು ಹಂಚಿಕೊಂಡಿದ್ದಾರೆ. ಕೆಲವು ವೈಯಕ್ತಿಕ ಕಾರಣಗಳಿಂದ ಮಾನ್ಸಿ ಅವರು ಅಮೃತ ವರ್ಷಿಣಿ ಸೀರಿಯಲ್ ನಿಂದ ಹೊರ ಬಂದಿದ್ದು ಇದೀಗ ಕನ್ನಡ ಸೀರಿಯಲ್ ಕಡೆಗೆ ಹೆಚ್ಚಿನ ಗಮನವನ್ನು ನೀಡಲಿದ್ದಾರೆ ಎನ್ನಲಾಗಿದೆ. ಇನ್ನು ತಮಿಳು ಸೀರಿಯಲ್ ನಲ್ಲಿ ನಟಿಸುತ್ತಿರುವ ಅವರಿಗೆ ತಮಿಳು ಸಿನಿಮಾ ದಿಂದ ಆಫರ್ ಬರುತ್ತಿದೆ ಎಂದಿದ್ದಾರೆ.

ಆದರೆ ಸಿನಿಮಾದಿಂದ ಬಂದಿರುವ ಆಫರ್ ಗಳ ಬಗ್ಗೆ ಮಾನ್ಸಿ ಅವರು ಅಧಿಕೃತವಾಗಿ ಒಪ್ಪಿಕೊಂಡ ಮೇಲೆಯೇ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ ಮಾನ್ಸಿ. ಹುಟ್ಟು ಹಬ್ಬಕ್ಕೆ ಹೊಸ ಕಾರನ್ನು ಖರೀದಿ ಮಾಡಿರುವ ಬಗ್ಗೆ ಹೇಳಿರುವ ಮಾನ್ಸಿ ಅವರು ನನ್ನ ಪರಿಶ್ರಮಕ್ಕೆ ಸಿಕ್ಕಿರುವ ಪ್ರತಿಫಲವಿದು, ಅಪ್ಪ ಅಮ್ಮನ ಆಶೀರ್ವಾದಕ್ಕೆ ಧನ್ಯವಾದಗಳು ಎನ್ನುವ ಮಾತನ್ನು ಅವರು ಈ ವೇಳೆ ಹೇಳಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಒಂದಲ್ಲಾ ಒಂದು ಪ್ರಾಜೆಕ್ಟ್ ನಲ್ಲಿ ಮಾನ್ಸಿ ತೊಡಗಿಕೊಂಡು ಬ್ಯುಸಿಯಾಗಿರುತ್ತಾರೆ.

Leave a Comment