ತೆಲುಗು ಸಿನಿಮಾ ಯುವ ನಟನ ತಂದೆ ಬಂಧನ: ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾದ ನಟ

Written by Soma Shekar

Published on:

---Join Our Channel---

ತೆಲುಗಿನ ಪ್ರಖ್ಯಾತ ಯುವನಟ ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಅವರನ್ನು ಹೈದರಾಬಾದ್ ಪೋಲಿಸರು ಬುಧವಾರ ಬಂಧಿಸಿದ್ದರು. ಇತ್ತೀಚಿಗಷ್ಟೇ ನಟ ನಾಗ ಚೈತನ್ಯ ಅವರ ತೋಟದ ಮನೆಯಲ್ಲಿ ಜೂಜಾಟ ನಡೆಯುವಾಗ ಎಸ್ಒಟಿ ಪೋಲಿಸರು ಧಾಳಿ ನಡೆಸಿ ಒಂದಷ್ಟು ಜನ ಉದ್ಯಮಿಗಳನ್ನು ಅರೆಸ್ಟ್ ಮಾಡಿ ತನಿಖೆಯನ್ನು ಮುಂದುವರೆಸಿದ್ದಾರೆ. ಇದೇ ಪ್ರಕರಣದ ಹಿನ್ನೆಲೆಯಲ್ಲಿ ಪೋಲಿಸರು ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಅವರನ್ನು ಬಂ ಧಿ ಸಿ ದ್ದಾರೆ. ನಟ ನಾಗ ಚೈತನ್ಯ ಈ ವಿಚಾರವಾಗಿ ಮಾದ್ಯಮಗಳ ಮುಂದೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.

ನಾಗ ಶೌರ್ಯ ಅವರ ತಂದೆ ಶಿವಲಿಂಗ ಪ್ರಸಾದ್ ಹಾಗೂ ಪ್ರಮುಖ ಆ ರೋ ಪಿ ಎನಿಸಿಕೊಂಡಿರುವ ಗುತ್ತಾ ಸುಮನ್ ಚೌಧರಿ ಇಬ್ಬರೂ ಹೈದ್ರಾಬಾದ್ ನ ಬಳಿ ಮಂಚಿರೇವುಲಾ ದಲ್ಲಿ ಪಾರ್ಮ್ ಹೌಸ್ ಅನ್ನು ಭೋಗ್ಯಕ್ಕೆ ಪಡೆದಿದ್ದರು ಎನ್ನಲಾಗಿದೆ. ಈ ಫಾರ್ಮ್ ಹೌಸ್ ನಲ್ಲಿ ಜೂಜಾಟ ನಡೆಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಎಸ್ಒಟಿ ಪೋಲಿಸರು ಧಾ ಳಿ ಯನ್ನು ನಡೆಸಿದ್ದರು. ಈಗಾಗಲೇ ಪೊಲಿಸರು ಒಂದಷ್ಟು ಜನರನ್ನು ಈ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇನ್ನು ಪ್ರಾಥಮಿಕ ತನಿಖೆಯಲ್ಲಿ ಶಿವಲಿಂಗ ಪ್ರಸಾದ್ ಮತ್ತು ಕಿಂಗ್ ಪಿನ್ ಗುತ್ತಾ ಸುಮನ್ ಚೌಧರಿ ಬಗ್ಗೆ ಹಲವು ವಿಚಾರಗಳು ತಿಳಿದು ಬಂದಿವೆ ಎನ್ನಲಾಗಿದೆ.

ಶಿವಲಿಂಗ ಪ್ರಸಾದ್ ಅವರು ಗುತ್ತಾ ಸುಮನ್ ಚೌಧರಿ ಜೊತೆಗೆ ಸೇರಿ ಅಕ್ರಮವಾಗಿ ಜೂ ಜು ದಂ ಧೆ ಯನ್ನು ನಡೆಸುತ್ತಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ ಎಂದಿರುವ ಪೋಲಿಸರು ಇದೇ ಹಿನ್ನಲೆಯಲ್ಲಿ ನಟನ ತಂದೆಯನ್ನು ಬಂ ಧಿ ಸಿ ಉಪ್ಪರಪಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಶಿವಲಿಂಗ ಪ್ರಸಾದ್ ಅವರ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು ಎನ್ನಲಾಗಿದ್ದು, ಶಿವಲಿಂಗ ಪ್ರಸಾದ್ ಅವರಿಗೆ ಜಾಮೀನು ದೊರೆತಿದೆ ಎಂದು ಹೇಳಲಾಗಿದೆ.

Leave a Comment