ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ವಿಷಾದ: ರೆಬೆಲ್ ಸ್ಟಾರ್ ಖ್ಯಾತಿಯ ಹಿರಿಯ ನಟ ಇನ್ನಿಲ್ಲ, ಮೌನದಲ್ಲಿ ಟಾಲಿವುಡ್

Entertainment Featured-Articles Movies News

ತೆಲುಗು ಚಿತ್ರರಂಗದಲ್ಲಿ ಒಂದು ದು ರಂ ತ ಅಥವಾ ವಿಶಾದದ ಘಟನೆ ನಡೆದಿದೆ. ತೆಲುಗು ಸಿನಿಮಾ ರ.ಗದ ಹಿರಿಯ ನಟ, ರೆಬೆಲ್ ಸ್ಟಾರ್ ಖ್ಯಾತಿಯ ನಟ ಕೃಷ್ಣಂ ರಾಜು (83) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. 1940 ರ ಜನವರಿ 20 ರಂದು ಜನಿಸಿದ ಕೃಷ್ಣರಾಜು ಅವರ ಹುಟ್ಟೂರು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತೂರು. ಕೃಷ್ಣಂ ರಾಜು ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಅವರು 183 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಅಂದರೆ ಭಾನುವಾರ ಬೆಳಗಿನ ಜಾವ 3:25 ಕ್ಕೆ ನಿಧನರಾದರು ಎನ್ನಲಾಗಿದೆ.

ಚಿತ್ರರಂಗಕ್ಕೆ ಸಿನಿಮಾದಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟು ಖಳನಟನಾಗಿಯೂ ಅವರು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕೃಷ್ಣಂರಾಜ್ ದಶಕಗಳ ಕಾಲ ಟಾಲಿವುಡ್ ನ ಸ್ಟಾರ್ ನಟನಾಗಿ ಮೆರೆದಿದ್ದಾರೆ. ಅವರ ಸಾವಿನಿಂದ ಟಾಲಿವುಡ್ ಕಂಬನಿ ಮಿಡಿದಿದೆ. ಅವರ ಅಂತ್ಯಕ್ರಿಯೆ ಸೋಮವಾರದಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಅವರ ನಿಧನದಿಂದ ಟಾಲಿವುಡ್ ದುಃಖದಲ್ಲಿ ಮುಳುಗಿದೆ. 1977 ಮತ್ತು 1984 ರಲ್ಲಿ ನಂದಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ನಟ ಕೃಷ್ಣಂ ರಾಜು. 1988 ರಲ್ಲಿ ಅವರು ‘ತಾಂಡ್ರ ಪಾಪರಾಯುಡು’ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದರು.

ಕೃಷ್ಣಂರಾಜು ಅವರ ನಿಜವಾದ ಹೆಸರು ಉಪ್ಪಲಪಾಟಿ ವೆಂಕಟ ಕೃಷ್ಣಮರಾಜು. ತೆಲುಗು ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕನಾಗಿ, ಅನಂತರ ಒಬ್ಬ ಸಕ್ರಿಯ ರಾಜಕಾರಣಿಯಾಗಿ ಮಿಂಚಿದ್ದ ಕೃಷ್ಣಂ ರಾಜು ಅವರ ನಿಧನ ಚಿತ್ರರಂಗದಲ್ಲಿ ದು ರಂ ತ ವಾಗಿದೆ. ಈ ವಿಷಯ ತಿಳಿದ ಪ್ರಭಾಸ್ ತಕ್ಷಣ ಎಐಜಿ ಆಸ್ಪತ್ರೆಗೆ ತಲುಪಿದ್ದಾರೆ. ನಟ ಪ್ರಭಾಸ್ ಕೃಷ್ಣಂ ರಾಜು ಅವರ ಸಹೋದರನ ಪುತ್ರನಾಗಿದ್ದಾರೆ. ತೆಲುಗು ಸಿನಿಮಾ ರಂಗದಲ್ಲಿ ತನಗಾಗಿ ಒಂದು ವಿಶೇಷ ಸ್ಥಾನವನ್ನು ಪಡೆದಿರುವ ಕೃಷ್ಣಂ ರಾಜು ಅವರು ತೆಲುಗು ಇಂಡಸ್ಟ್ರಿಯಲ್ಲಿ ರೆಬೆಲ್ ಸ್ಟಾರ್ ಎಂದೇ ಹೆಸರನ್ನು ಪಡೆದ ನಟನಾಗಿದ್ದಾರೆ.‌

Leave a Reply

Your email address will not be published.