ತೆಲುಗು ಸಿನಿಮಾದತ್ತ ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್: ಯಾವ ಸಿನಿಮಾದಲ್ಲಿ ನಟಿಸ್ತಿದ್ದಾರೆ?
ಸ್ಯಾಂಡಲ್ ವುಡ್ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಾಗಿಯೂ ಬಹುಮುಖ ಪ್ರತಿಭಾವಂತ ಆಗಿರುವ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮದೇ ಆದಂತಹ ಸ್ಥಾನ ಹಾಗೂ ವರ್ಚಸ್ಸನ್ನು ಪಡೆದಿರುವ ಕನ್ನಡದ ನಟ ಎನಿಸಿಕೊಂಡಿದ್ದಾರೆ. ವರ್ಷಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳು ಎಂದರೆ ದಕ್ಷಿಣ ಭಾರತದ ಇತರೆ ಭಾಷೆಗಳ ಜನರು ಕೂಡಾ ಕನ್ನಡ ಸಿನಿಮಾಗಳತ್ತ ನೋಡುವಂತೆ ಸಿನಿಮಾಗಳು ನಿರ್ಮಾಣವಾಗುತ್ತಿದ್ದವು. ಅನ್ಯಭಾಷಿಕರು ಕರ್ನಾಟಕಕ್ಕೆ ಬಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ನೋಡುತ್ತಿದ್ದರು.
ರವಿಚಂದ್ರನ್ ಅವರು ಪ್ರಸ್ತುತ ಸಿನಿಮಾ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟ. ರವಿಚಂದ್ರನ್ ಅವರಿಗೆ ಕರ್ನಾಟಕದಲ್ಲಿ ಹೇರಳವಾದ ಅವಕಾಶಗಳು ಇವೆ. ಅವರಿಗೆ ದೊಡ್ಡ ಅಭಿಮಾನ ಬಳಗ ಇದೆ. ಕನ್ನಡ ಕಿರುತೆರೆಯ ಬಹು ಜನಪ್ರಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ನ ತೀರ್ಪುಗಾರರಾಗಿ ರವಿಚಂದ್ರನ್ ಅವರು ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಹಾ ಅವರು ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.
ಈಗ ಇವೆಲ್ಲವುಗಳ ನಡುವೆಯೇ ರವಿಚಂದ್ರನ್ ಅವರು ತೆಲುಗು ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎನ್ನುವ ಹೊಸ ವಿಷಯ ಬಹಳ ಕುತೂಹಲವನ್ನು ಹುಟ್ಟಿಸಿದೆ. ಹೌದು ನಟ ರವಿಚಂದ್ರನ್ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟನಾಗಿರುವ ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಹೇಶ್ ಬಾಬು ಅವರ ಹೊಸ ಸಿನಿಮಾವನ್ನು ತೆಲುಗಿನ ಪ್ರಖ್ಯಾತ ನಿರ್ದೇಶಕ ತ್ರಿವಿಕ್ರಮ ನಿರ್ದೇಶನ ಮಾಡುವ ವಿಚಾರ ಈಗಾಗಲೇ ಅಧಿಕೃತ ಘೋಷಣೆಯಾಗಿದೆ.
ಈ ಸಿನಿಮಾದಲ್ಲಿ ಮಹೇಶ್ ಬಾಬು ಅವರ ತಂದೆಯ ಪಾತ್ರವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಮಹೇಶ್ ಬಾಬು ಅವರು ಈ ಸಿನಿಮಾಗಾಗಿ ಸಿದ್ಧತೆಗಳನ್ನು ನಡೆಸಿದ್ದು, ರವಿಚಂದ್ರನ್ ಅವರ ಜೊತೆಗೂ ಒಂದು ಸುತ್ತಿನ ಮಾತುಕತೆ ಮುಗಿದಿದೆ ಎಂದು ಹೇಳಲಾಗಿದೆ. ನಟ ಮಹೇಶ್ ಬಾಬು ಅವರಿಗಾಗಿ ರವಿಚಂದ್ರನ್ ಅವರು ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಚಿತ್ರತಂಡ ಈ ವಿಚಾರವನ್ನು ಶೀಘ್ರದಲ್ಲೇ ಅಧಿಕೃತವಾಗಿ ಘೋಷಣೆ ಮಾಡುತ್ತದೆಂದು ಸುದ್ದಿಯಾಗಿದೆ.