ತೆಲುಗು ಸಿನಿಮಾಗಳಲ್ಲಿ ಭರ್ಜರಿ ಅವಕಾಶಗಳಿಗೆ, ಹೊಸ ಸಿನಿಮಾಗಳಿಗೆ “ನೋ, ನೋ” ಅಂದ ಶ್ರೀಲೀಲಾ!! ಇಂತಹ ಅವಕಾಶ ಬಿಟ್ಟಿದ್ಯಾಕೆ??

Written by Soma Shekar

Published on:

---Join Our Channel---

ಕನ್ನಡದ ಕಿಸ್ ಸಿನಿಮಾ ಮೂಲಕ ಪಡ್ಡೆಗಳ ಎದೆಯಲ್ಲಿ ತಲ್ಲಣ ಹುಟ್ಟಿಸಿದ ಸುಂದರಿ ಶ್ರೀಲೀಲಾ ಗೆ ತೆಲುಗಿನಲ್ಲಿ ಈಗ ಸಖತ್ ಬೇಡಿಕೆ ಇದೆ. ಶ್ರೀಲೀಲಾ ಮೊದಲ ಸಿನಿಮಾ ಅಷ್ಟೇನೂ ದೊಡ್ಡ ಸಕ್ಸಸ್ ಪಡೆಯಲಿಲ್ಲ. ಹೌದು ಶ್ರೀಲೀಲಾ ಆಭಿನಯದ ಹಿರಿಯ ನಟ ಶ್ರೀಕಾಂತ್ ಪುತ್ರ ನಾಯಕನಾಗಿದ್ದ ಪೆಳ್ಳಿ ಸಂದಡಿ ಸಿನಿಮಾ ಮೂಲಕ ಶ್ರೀಲೀಲಾ ಟಾಲಿವುಡ್ ಗೆ ಎಂಟ್ರಿ ನೀಡಿದ್ದಾರೆ. ಸಿನಿಮಾ ಯಶಸ್ಸು ಕಾಣದೇ ಹೋದರೂ ಶ್ರೀಲೀಲಾ ಅವರ ನಟನೆ, ಗ್ಲಾಮರ್ ಮತ್ತು ಅಂದ ಅಲ್ಲಿನ ಜನರ ಗಮನವನ್ನು ಸೆಳೆದಿದೆ. ಟಾಲಿವುಡ್ ನಿರ್ಮಾಪಕರ ಗಮನ ಶ್ರೀಲೀಲಾ ಕಡೆ ಬಿದ್ದಿದೆ.

ಹೌದು, ನಟಿ ಶ್ರೀಲೀಲಾ ಈಗಾಗಲೇ ಮಾಸ್ ಮಹಾರಾಜ ಖ್ಯಾತಿಯ ರವಿ ತೇಜ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವುದು ಈಗಾಗಲೇ ತಿಳಿದಿರುವ ವಿಷಯ. ಅಲ್ಲದೇ ಟಾಲಿವುಡ್ ನ ಜನಪ್ರಿಯ ನಿರ್ಮಾಣ ಸಂಸ್ಥೆ ಗೀತಾ ಆರ್ಟ್ಸ್ ನ ಅಲ್ಲು ಅರವಿಂದ್ ಅವರು ಶ್ರೀಲೀಲಾ ಕಡೆಗೆ ಗಮನ ಹರಿಸಿದ್ದಾರೆ. ಅವರು ತಮ್ಮ ಮುಂದಿನ ನಿರ್ಮಾಣದ ಸಿನಿಮಾಗಳಿಗೆ ಶ್ರೀಲೀಲಾ ರನ್ನು ನಾಯಕಿಯಾಗಿಸುವ ಆಲೋಚನೆ ಹೊಂದಿದ್ದಾರೆ ಎನ್ನಲಾಗಿದೆ.

ಹೀಗೆ ಟಾಲಿವುಡ್ ನಿರ್ಮಾಪಕರು, ನಿರ್ದೇಶಕರ ದೃಷ್ಟಿ ಶ್ರೀಲೀಲಾ ಕಡೆ ಹರಿದಿರುವಾಗಲೇ, ಭರ್ಜರಿ ಅವಕಾಶಗಳ ಹೊರತಾಗಿ ನಟಿ ಶ್ರೀಲೀಲಾ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಇದೇನಿದು?? ಅವಕಾಶಗಳು ಅರಸಿ ಬರುವಾಗ ಇದೆಂತ ‌ನಿರ್ಧಾರ ಎಂದು ನಿಮಗೆ ಅನಿಸಬಹುದು. ಆದರೆ ಈ ನಿರ್ಧಾರದ ಹಿಂದೆ ಕಾರಣವೊಂದಿದೆ. ಅದು ನಿಜಕ್ಕೂ ಒಳ್ಳೆಯ ಕಾರಣವೆಂದೇ ಹೇಳಬಹುದಾಗಿದೆ. ಹಾಗಾದರೆ ಅದೇನು ಅನ್ನೋದಕ್ಕೆ ಇಲ್ಲಿದೆ ಉತ್ತರ.

ನಟಿ ಶ್ರೀಲೀಲಾ ತಮ್ಮ ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಿದ್ದಾರೆ. ಈಗಾಗಲೇ ಮುಂಬೈನಲ್ಲಿ ಅವರು ಅದಕ್ಕಾಗಿ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ‌. ಹೊಸ ಸಿನಿಮಾಗಳು ಏನೇ ಇದ್ರೂ ಕೂಡಾ ಅದೆಲ್ಲಾ ಶಿಕ್ಷಣ, ಪರೀಕ್ಷೆ ಮುಗಿದ ನಂತರ ಅನ್ನೋ ನಿರ್ಧಾರವನ್ನು ನಟಿ ಮಾಡಿರೋದ್ರಿಂದ ಅವರು ಸಿನಿಮಾಗಳಿಂದ ಸದ್ಯಕ್ಕೆ ದೂರ ಉಳಿಯೋ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಪರೀಕ್ಷೆ ನಂತರ ಮತ್ತೆ ಅವರು ಸಿನಿಮಾಗಳಲ್ಲಿ ಸಕ್ರಿಯ ಆಗೋದು ಗ್ಯಾರಂಟಿ.

Leave a Comment