ತೆಲುಗಿನ ಜನಪ್ರಿಯ ಯುವ ನಟ ನಾಗ ಶೌರ್ಯ ಅವರಿಗೆ ಸೇರಿದ್ದ ಫಾರ್ಮ್ ಹೌಸ್ ಮೇಲೆ ಎಸ್ ಓ ಟಿ ಪೋಲಿಸರು ನಡೆಸಿದ ಧಾ ಳಿ ಯಲ್ಲಿ ಫಾರ್ಮ್ ಹೌಸ್ ನಲ್ಲಿ ಭಾರೀ ಮೊತ್ತದ ನಗದಿನ ಜೊತೆಗೆ, ಜೂಜಾಟ ಆಡುತ್ತಿದ್ದವರನ್ನು ಅರೆಸ್ಟ್ ಮಾಡಿರುವ ಬೆಳವಣಿಗೆಯೊಂದು ನಡೆದಿದೆ. ಹೌದು ಹೈದ್ರಾಬಾದ್ ನಗರದ ಶಿವಾರುವಿನಲ್ಲಿನ ನಾರ್ಸಿಂಗ್ ಪೋಲೀಸ್ ಸ್ಟೇಷನ್ ಪರಿಧಿಯಲ್ಲಿ ಯುವ ನಟ ನಾಗ ಶೌರ್ಯ ಅವರು ಒಂದು ಐಶಾರಾಮೀ ವಿಲ್ಲಾ ವನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಇದೇ ವಿಲ್ಲಾ ದ ಮೇಲೆ ಪೋಲಿಸರು ಧಾಳಿಯನ್ನು ನಡೆಸಿದ್ದು, ಈಗ ಇದು ದೊಡ್ಡ ಸುದ್ದಿಯಾಗಿದೆ.
ಎಸ್ ಓ ಟಿ ಪೋಲಿಸರು ಭಾನುವಾರ ನಾಗ ಶೌರ್ಯ ಅವರ ಈ ಫಾರ್ಮ್ ಹೌಸ್ ಮೇಲೆ ಧಾಳಿ ನಡೆಸಿದ ವೇಳೆ 30 ಜನರನ್ನು ಪೋಲಿಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಇದೇ ವೇಳೆ ಪೋಲಿಸರು 25 ಲಕ್ಷ ರೂ ನಗದು, 33 ಸೆಲ್ ಫೋನ್ ಗಳು, 3 ಕಾರುಗಳು, 2 ಕ್ಯಾಸಿನೋ ಬಾಕ್ಸ್ ಗಳು ಹಾಗೂ ಕೆಲವು ಹಣ ಎಣಿಸುವ ಯಂತ್ರಗಳನ್ನು ಸಹಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧನಕ್ಕೆ ಒಳಗಾದವರೆಲ್ಲಾ ಬಹುತೇಕ ಉದ್ಯಮಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳೇ ಅಗಿದ್ದಾರೆಂದು ತಿಳಿದು ಬಂದಿದೆ.
ಪೋಲಿಸರು ಇಲ್ಲಿ ಜೂಜಾಟ ನಡೆಸಲು ಕಾರಣನಾದ ಪ್ರಮುಖ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ವಿಜಯವಾಡ, ಕರ್ನೂಲ್, ನಿಜಾಮಾಬಾದ್ ಮತ್ತು ಮಹಬೂಬಾಬಾದ್ ಜಿಲ್ಲೆಗಳ ಪೊಲೀಸರು ಪೋಕರ್ ಆಡುತ್ತಿದ್ದ ಸುಮಾರು 25 ರಿಯಲ್ ಎಸ್ಟೇಟ್ ವ್ಯಾಪಾರಿಗಳು ಮತ್ತು ಇತರ ಐವರನ್ನು ಬಂಧಿಸಿದ್ದಾರೆ. ಇನ್ನು ಈ ವಿಲ್ಲಾ ಐಎಎಸ್ ಅಧಿಕಾರಿಯೊಬ್ಬರಿಗೆ ಸೇರಿದ್ದು, ನಟ ನಾಗ ಶೌರ್ಯ ಅದನ್ನು ಐದು ವರ್ಷಗಳ ಕಾಲ ಲೀಸ್ ಗೆ ಪಡೆದುಕೊಂಡಿದ್ದಾರೆಂದು ಪೊಲೀಸರಿಗೆ ತಿಳಿದು ಬಂದಿದೆ.
ಲೀಸ್ ಗೆ ತೆಗೆದುಕೊಂಡ ವಿಲ್ಲಾವನ್ನು ನಾಗ ಶೌರ್ಯ ವೀಕೆಂಡ್ ಗಳಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಪ್ರಮುಖ ವ್ಯಕ್ತಿಗಳಿಗೆ ಜೂಜಾಟ ಆಡಲು ನೀಡುತ್ತಿದ್ದರು ಎಂದು ಪೋಲಿಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ. ಭಾನುವಾರ ಸುಮನ್ ಎನ್ನುವ ವ್ಯಕ್ತಿಯ ಜನ್ಮದಿನದ ಪಾರ್ಟಿಗಾಗಿ ವಿಲ್ಲಾ ನಿರ್ವಾಹಕನಿಂದ ಬಾಡಿಗೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಸುಮನ್ ಚೌಧರಿ ಹೆಸರಿನ ವ್ಯಕ್ತಿ ಇಲ್ಲಿ ಆಗಾಗ ಜೂಜಾಟದ ಕ್ಲಬ್ ನಡೆಸುತ್ತಿದ್ದರು ಎನ್ನಲಾಗಿದೆ. ಇದರ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆನ್ನುವುದು ತನಿಖೆಯಿಂದ ತಿಳಿದು ಬರಲಿದೆ ಎನ್ನಲಾಗಿದೆ.