ತೆಲುಗು ಕಿರುತೆರೆಗೆ ಭರ್ಜರಿ ಎಂಟ್ರಿ ನೀಡಿದ ಗಟ್ಟಿಮೇಳ ಸೀರಿಯಲ್ ನಟಿ: ವಿಶಿಷ್ಟ ಪಾತ್ರದಲ್ಲಿ ಪ್ರಿಯಾ ಆಚಾರ್

Written by Soma Shekar

Published on:

---Join Our Channel---

ಇತ್ತೀಚಿನ‌ ದಿನಗಳಲ್ಲಿ ಕನ್ನಡ ಕಲಾವಿದರು ತೆಲುಗು, ‌ತಮಿಳು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ಬಹುತೇಕ ಎಲ್ಲಾ ಸೀರಿಯಲ್ ಗಳಲ್ಲೂ ಸಹಾ ಕನ್ನಡದ ಕಲಾವಿದರೇ ಭರ್ಜರಿಯಾಗಿ ಮಿಂಚುತ್ತಿದ್ದು,‌ ದಿನಕಳೆದಂತೆ ಅನ್ಯ ತೆಲುಗು ಕಿರುತೆರೆ ಪ್ರವೇಶ ಮಾಡುವ ಕಲಾವಿದರ ಸಂಖ್ಯೆ ಏರುತ್ತಲೇ ಇದೆ. ಈಗ ಈ ಸಾಲಿಗೆ ಮತ್ತೊಬ್ಬ ಕನ್ನಡ ಕಿರುತೆರೆಯ ಜನಪ್ರಿಯ ನಟಿಯ ಸೇರ್ಪಡೆಯಾಗಿದೆ. ಹೌದು ಕನ್ನಡ ಕಿರುತೆರೆಯ ಜನಪ್ರಿಯ‌ ಸೀರಿಯಲ್ ಗಟ್ಟಿಮೇಳದ ನಟಿ ಪ್ರಿಯಾ ಆಚಾರ್ ತೆಲುಗಿನ‌ ಕಿರುತೆರೆಯನ್ನು ಪ್ರವೇಶ ಮಾಡಿದ್ದಾರೆ. ಪ್ರಿಯಾ ಅವರ ಹೊಸ ಸೀರಿಯಲ್ ಪ್ರೋಮೋಗಳು ಸದ್ದು ಮಾಡಿದೆ.

ಪ್ರಿಯಾ ಆಚಾರ್ ಗಟ್ಟಿಮೇಳ ಸೀರಿಯಲ್ ನಲ್ಲಿ ನಾಯಕಿ ಅಮೂಲ್ಯ ಸಹೋದರಿ ಅದಿತಿ ಪಾತ್ರದಲ್ಲಿ ನಾಡಿನ ಮನೆ ಮಾತಾಗಿದ್ದಾರೆ. ಅದಿತಿಯಾಗಿ ಜನ ಮೆಚ್ಚುಗೆ ಪಡೆದಿರುವ ಪ್ರಿಯಾ ಇದೀಗ “ಆನಂದರಾಗಂ” ಎನ್ನುವ ಸೀರಿಯಲ್ ಮೂಲಕ ತೆಲುಗು ಕಿರುತೆರೆಗೆ ಅಡಿಯಿಟ್ಟಿದ್ದಾರೆ. ಆನಂದರಾಗಂ ಸೀರಿಯಲ್ ಒಂದು ನೂತನ ಕಥಾನಕವಾಗಿದ್ದು ಪ್ರೊಮೋ ಈಗಾಗಲೇ ಜೆಮಿನಿ ಟಿವಿ ಯಲ್ಲಿ ಪ್ರಸಾರವಾಗಿ ಸಖತ್ ಸದ್ದು ಮಾಡುತ್ತಿದೆ. ಪ್ರಿಯಾ ಆಚಾರ್ ಈ ಸೀರಿಯಲ್ ಮೂಲಕ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಆನಂದರಾಗಂ ನಲ್ಲಿ ಮಂಗಳ ಮುಖಿ ಹಾಗೂ ಆಕೆ ಸಾಕಿ ಬೆಳೆಸಿದ ಅನಾಥ ಹುಡುಗಿಯ ಕಥೆಯ ಸಾರವನ್ನು ಒಳಗೊಂಡಿದ್ದು, ಮನ ಮಿಡಿಯುವ ಕಥಾ ಹಂದರವನ್ನು ಇದು ಒಳಗೊಂಡಿದೆ. ಇದರಲ್ಲಿ ಮಂಗಳ ಮುಖಿಯ ಸಾಕು ಮಗಳ ಪಾತ್ರದಲ್ಲಿ ಪ್ರಿಯಾ ಅಭಿನಯಿಸುತ್ತಿದ್ದಾರೆ. ಇನ್ನು ತೆಲುಗಿನ ಜನಪ್ರಿಯ ನಟ ಇಂದ್ರನೀಲ್ ಇದೇ ಮೊದಲ ಬಾರಿಗೆ ಒಂದು ವಿಭಿನ್ನ ಪಾತ್ರದ ಮೂಲಕ ಅಂದರೆ ಮಂಗಳ ಮುಖಿಯಾಗಿ ಪ್ರೇಕ್ಷಕರ ಮುಂದೆ‌ ಬರುತ್ತಿದ್ದಾರೆ. ಪ್ರೇಕ್ಷಕರಲ್ಲಿ ಈಗಾಗಲೇ ಆನಂದರಾಗಂ ಕುತೂಹಲ ಮೂಡಿಸಿದೆ.

ಗಟ್ಟಿಮೇಳದ ಮೂಲಕ ಕಿರುತೆರೆ ಪ್ರವೇಶ ಮಾಡಿದ ಪ್ರಿಯಾ ಆಚಾರ್ ಸೀರಿಯಲ್ ಗಳ ಜೊತೆಗೆ ತಮ್ಮ ವಿದ್ಯಾಭ್ಯಾಸವನ್ನು ಸಹಾ ಮುಂದುವರೆಸಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಪ್ರಿಯಾ ಅವರು ಬಿ.ಎಸ್ಸಿ. ಪದವಿಯನ್ನು ಪಡೆದುಕೊಂಡಿದ್ದು, ಸೀರಿಯಲ್ ಗಳು ಹಾಗೂ ಶಿಕ್ಷಣ ಎರಡನ್ನೂ ಸಹಾ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದು, ತೆಲುಗಿನ ಅವರ ಜರ್ನಿ ಕೂಡಾ ದೊಡ್ಡ ಯಶಸ್ಸನ್ನು, ‌ಕೀರ್ತಿಯನ್ನು ನೀಡಲೆಂದು ನಾವು ಸಹಾ ಹಾರೈಸೋಣ.

Leave a Comment