ಕನ್ನಡದ ಕಿಸ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದವರು ನಟಿ ಶ್ರೀಲೀಲಾ. ಅನಂತರ ಭರಾಟೆ ಸಿನಿಮಾದಲ್ಲಿ ನಟ ಶ್ರೀಮುರಳ ಅವರಿಗೆ ನಾಯಕಿಯಾಗಿ ಮಿಂಚಿದರು. ಅನಂತರ ನಟ ಧನ್ವೀರ್ ಜೊತೆ ಬೈ ಟು ಲವ್ ಸಿನಿಮಾದಲ್ಲಿ ಕಾಣಿಸಿಕೊಂಡ ಶ್ರೀಲೀಲಾ ಅವರು ನಟ ಧೃವ ಸರ್ಜಾ ಅವರ ಹೊಸ ಸಿನಿಮಾದಲ್ಲಿ ಕೂಡಾ ಶ್ರೀಲೀಲಾ ನಾಯಕಿ ಎನ್ನುವ ಸುದ್ದಿಗಳಾಗಿತ್ತು. ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ನಟಿ ಶ್ರೀಲೀಲಾ ಅನಂತರ ಪೆಳ್ಳಿ ಸಂದಡಿ ಸಿನಿಮಾ ಮೂಲಕ ತೆಲುಗು ಚಿತ್ರ ರಂಗಕ್ಕೆ ಅಡಿಯಿಟ್ಟರು. ಮೊದಲ ಸಿನಿಮಾ ಹಿಟ್ ಆಗದಿದ್ದರೂ ನಟಿಗೆ ಮಾತ್ರ ಉತ್ತಮ ಹೆಸರು ದೊರೆತಿದೆ.
ಶ್ರೀ ಲೀಲಾ ಅವರಿಗೆ ತೆಲುಗಿನಲ್ಲಿ ಉತ್ತಮ ಸಿನಿಮಾ ಅವಕಾಶಗಳು ಅರಸಿಕೊಂಡು ಬರುತ್ತಿವೆ. ತೆಲುಗಿನ ಸ್ಟಾರ್ ನಟರಾದ ಮಹೇಶ್ ಬಾಬು, ರವಿತೇಜ ಅವರ ಮುಂದಿನ ಸಿನಿಮಾಗಳಲ್ಲಿ ನಟಿ ಶ್ರೀಲೀಲಾ ನಟಿಸುತ್ತಾರೆ ಎನ್ನುವ ಸುದ್ದಿಗಳು ಸಹಾ ಸದ್ದು ಮಾಡಿದ್ದವು. ಈಗ ಅವೆಲ್ಲವುಗಳ ಬೆನ್ನಲ್ಲೇ ಮತ್ತೊಂದು ಹೊಸ ಸುದ್ದಿ ಹೊರ ಬಂದಿದೆ. ತೆಲುಗಿನಲ್ಲಿ ನಟಿ ಶ್ರೀಲೀಲಾ ಅವರಿಗೆ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ತೆರೆಯನ್ನು ಹಂಚಿಕೊಳ್ಳುವ ಅವಕಾಶ ದಕ್ಕಿದೆ.
ತೆಲುಗಿನಲ್ಲಿ ಎಫ್ ಟು, ಎಫ್ ತ್ರಿ, ಸರಿಲೇರು ನೀಕೆವ್ವರು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸ್ಟಾರ್ ಡೈರಕ್ಟರ್ ಅನಿಲ್ ರಾವಿಪೂಡಿ ಅವರು ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದು, ಈ ಸಿನಿಮಾದಲ್ಲಿ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸಿನಿಮಾದಲ್ಲಿ ನಟಿ ಶ್ರೀಲೀಲಾ ಅವರು ಒಂದು ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡಲಿದ್ದಾರೆ ಎನ್ನಲಾಗಿದ್ದು, ಇಷ್ಟಕ್ಕೂ ಶ್ರೀಲೀಲಾ ಅವರ ಪಾತ್ರ ಏನು ಎನ್ನುವುದಾದರೆ ಇಲ್ಲಿದೆ ಉತ್ತರ.
ನಂದಮೂರಿ ಬಾಲಕೃಷ್ಣ ಅವರು ನಾಯಕನಾಗಿರುವ ಹೊಸ ಸಿನಿಮಾದಲ್ಲಿ ಅವರ ಮಗಳ ಪಾತ್ರದಲ್ಲಿ ನಟಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಬಾಲಕೃಷ್ಣ ಅವರ ವೃತ್ತಿ ಜೀವನದಲ್ಲಿ ಇದೊಂದು ವಿಶೇಷವಾದ ಸಿನಿಮಾ ಆಗಲಿದ್ದು, ಅವರು ಈ ಸಿನಿಮಾದಲ್ಲಿ ವೃದ್ಧನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರ ಮಗಳಾಗಿ ನಟಿ ಶ್ರೀಲೀಲಾ ನಟಿಸಲಿದ್ದು ಸಿನಿಮಾ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗಿದೆ. ಪ್ರಸ್ತುತ ನಿರ್ದೇಶಕ ಅನಿಲ್ ರಾವಿಪೂಡಿ ಅವರು ತಮ್ಮ ಎಫ್ ತ್ರಿ ಸಿನಿಮಾದ ಬಿಡುಗಡೆ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ.