ತೆಲುಗಿನಲ್ಲಿ ಶ್ರೀಲೀಲಾಗೆ ಅವಕಾಶಗಳ ಜಾಕ್ ಪಾಟ್: ರಶ್ಮಿಕಾಗೆ ಶುರುವಾಯ್ತು ಟೆನ್ಷನ್ ??

Entertainment Featured-Articles News
93 Views

ಸಿನಿಮಾರಂಗದಲ್ಲಿ ಕಲಾವಿದರಿಗೆ ಅದೃಷ್ಟ ಎನ್ನುವುದು ಯಾವಾಗ ಬೇಕಾದರೂ ಬರಬಹುದು. ಅದೃಷ್ಟ ಬಂದಾಗ ಅದನ್ನು ಸಮರ್ಪಕವಾಗಿ ಬಳಸಿಕೊಂಡವರು ಸಿನಿಮಾ ರಂಗದಲ್ಲಿ ಸ್ಟಾರ್ ಗಳಾಗಿ ಬೆಳೆಯುತ್ತಾರೆ. ಇಲ್ಲದೇ ಹೋದರೆ ಯಾವ ವೇಗದಲ್ಲಿ ಮಿಂಚುತ್ತಾರೆಯೋ ಅದೇ ವೇಗದಲ್ಲಿ ಬಹು ಬೇಗ ಕಣ್ಮರೆ ಕೂಡಾ ಆಗಿಬಿಡುತ್ತಾರೆ. ಈಗ ತೆಲುಗು ಚಿತ್ರರಂಗದಲ್ಲಿ ಕನ್ನಡದ ನಟಿ ಶ್ರೀಲೀಲಾ ಅವರಿಗೆ ಭರ್ಜರಿ ಅದೃಷ್ಟ ಖುಲಾಯಿಸಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಕಿಸ್ ಸಿನಿಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಶ್ರೀಲೀಲಾ, ಅನಂತರ ಶ್ರೀ ಮುರಳಿ ಅವರ ಭರಾಟೆ ಸಿನಿಮಾದಲ್ಲಿ ಮಿಂಚಿದ್ದಾರೆ. ಧೃವ ಸರ್ಜಾ ಅವರ ದುಬಾರಿ ಸಿನಿಮಾ ಹಾಗೂ ಧನ್ವೀರ್ ಜೊತೆ ಬೈ ಟು ಲವ್ ನಲ್ಲೂ ನಾಯಕಿಯಾಗಿದ್ದಾರೆ.

ಇವೆಲ್ಲವುಗಳ ನಡುವೆಯೇ ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾ ಅವರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಶ್ರೀಲೀಲಾ ತೆಲುಗಿನಲ್ಲಿ ನಟಿಸಿದ ಅವರ ಮೊದಲ ಸಿನಿಮಾ ಪೆಳ್ಳಿ ಸಂದಡಿ ನಿರೀಕ್ಷಿತ ಮಟ್ಟದ ಗೆಲುವನ್ನು ಸಾಧಿಸಲು ವಿಫಲವಾಗಿದೆ. ಸಿನಿಮಾದ ಸೋಲು ಇಡೀ ಚಿತ್ರ ತಂಡಕ್ಕೆ ಬೇಸರವನ್ನು ಉಂಟು ಮಾಡಿದೆ. ಆದರೆ ಸಿನಿಮಾ ಸೋತರೂ ಕೂಡಾ ನಟಿ ಶ್ರೀಲೀಲಾ ಗೆ ಅವಕಾಶಗಳು ಮಾತ್ರ ಭರ್ಜರಿಯಾಗಿ ಸೃಷ್ಟಿಯಾಗಿದೆ. ಈಗಾಗಲೇ ಟಾಲಿವುಡ್ ಮಾಸ್ ಮಹಾರಾಜ ಖ್ಯಾತಿಯ ರವಿತೇಜಾ ಅವರ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳ ಹಿಂದೆಯೇ ಸದ್ದು ಮಾಡಿದೆ.

ಅದರ ಬೆನ್ನಲ್ಲೇ ಮತ್ತೊಂದು ಹೊಸ ವಿಷಯ ಹೊರಬಂದಿದ್ದು, ಮೊದಲ ಸಿನಿಮಾದ ನಂತರ ಶ್ರೀಲೀಲಾ ನಟನೆ ಹಾಗೂ ಡ್ಯಾನ್ಸ್ ಕುರಿತಾಗಿ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ ಎನ್ನಲಾಗಿದೆ. ಪೆಳ್ಳಿ ಸಂದಡಿ ಸಿನಿಮಾದಲ್ಲಿ ನಟಿಯ ಗ್ಲಾಮರ್, ಡಾನ್ಸ್, ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಶ್ರೀಲೀಲಾ ಕುರಿತಾಗಿ ಚರ್ಚೆಗಳು ಪ್ರಾರಂಭವಾಗಿದೆ. ಹಲವು ಚಿತ್ರತಂಡಗಳು ಅವರನ್ನು ತಮ್ಮ ಸಿನಿಮಾದಲ್ಲಿ ನಾಯಕಿಯನ್ನಾಗಿ ಮಾಡಿಕೊಳ್ಳಲು ಮಾತುಕತೆಯನ್ನು ನಡೆಸುತ್ತಿವೆ ಎನ್ನಲಾಗಿದೆ.

ಇನ್ನು ತೆಲುಗು ಸಿನಿಮಾ ರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಸಂಸ್ಥೆ ಈಗ ನಟಿ ಶ್ರೀಲೀಲಾ ಕಡೆಗೆ ತನ್ನ ದೃಷ್ಟಿಯನ್ನು ಹರಿಸಿದೆ. ನಿರ್ಮಾಪಕ ಅಲ್ಲು ಅರವಿಂದ್ ಬ್ಯಾಕ್ ಟು ಬ್ಯಾಕ್ ತಮ್ಮ ಮೂರು ಸಿನಿಮಾಗಳಲ್ಲಿ ಶ್ರೀಲೀಲಾ ಅವರನ್ನು ನಾಯಕಿಯನ್ನಾಗಿ ಮಾಡಿಕೊಳ್ಳಲು, ಆಕೆಯ ಕಾಲ್ ಶೀಟ್ ಪಡೆಯಲು ನಿರ್ಧಾರವನ್ನು ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ತಮ್ಮ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗಲಿರುವ ಸ್ಟಾರ್ ನಟರ ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾದರೆ ಚೆನ್ನಾಗಿರುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಈಗ ಹರಡಿರುವ ಈ ಸುದ್ದಿ ನಿಜವೇ ಆದರೆ ಮುಂಬರುವ ಕೆಲವೇ ದಿನಗಳಲ್ಲಿ ಶ್ರೀಲೀಲಾ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾದರೂ ಅದರಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಅವರ ಈ ಬೆಳವಣಿಗೆ ಈಗಾಗಲೇ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ಕನ್ನಡ ಮೂಲದ ಮತ್ತೋರ್ವ ನಟಿ ರಶ್ಮಿಕಾ ಮಂದಣ್ಣಾಗೆ ಭರ್ಜರಿ ಸ್ಪರ್ಧೆಯನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಸಹಜವಾಗಿಯೇ ರಶ್ಮಿಕಾಗೆ ಶ್ರೀಲೀಲಾ ಸ್ಪರ್ಧೆ ಆಗುತ್ತಾರೆ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

ಆದರೆ ಅದೇ ವೇಳೆ ಮತ್ತೊಂದೆಡೆ ರಶ್ಮಿಕಾ ಮಂದಣ್ಣ ಕೇವಲ ತೆಲುಗು ಸಿನಿಮಾಗಳನ್ನು ಮಾತ್ರವೇ ನಂಬಿ ಕೂತಿಲ್ಲ ಎನ್ನುವುದು ಕೂಡಾ ನಿಜವಾಗಿದೆ. ರಶ್ಮಿಕಾ ಈಗಾಗಲೇ ತಮಿಳಿಗೆ ಎಂಟ್ರಿ ನೀಡಿಯಾಗಿದೆ ಹಾಗೂ ಹಿಂದಿಯ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂದೆ ಕೂಡಾ ಬಾಲಿವುಡ್ ನಲ್ಲಿ ಅವರಿಗೆ ಹೊಸ ಅವಕಾಶಗಳು ದೊರೆಯುವ ಎಲ್ಲಾ ಸಾಧ್ಯತೆಗಳು ಇವೆ. ಆದರೆ ತೆಲುಗು ಸಿನಿ ರಂಗದಲ್ಲಿ ಕನ್ನಡದ ನಟಿಯರು ಮಿಂಚುತ್ತಿದ್ದಾರೆ ಎನ್ನುವುದು ಕೂಡಾ ವಾಸ್ತವವಾದ ವಿಚಾರವಾಗಿದೆ.

Leave a Reply

Your email address will not be published. Required fields are marked *