ತೆಲುಗಿಗೆ ಭರ್ಜರಿ ಎಂಟ್ರಿ ನೀಡಿದ ಗಟ್ಟಿಮೇಳ ಸೀರಿಯಲ್ ನ ಅಮೂಲ್ಯ: ಯಾವ ಸೀರಿಯಲ್???

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ ಹೆಸರು, ಜನಪ್ರಿಯತೆ ಪಡೆದ ಅನೇಕ ನಟಿಯರು ಇತ್ತೀಚಿನ ದಿನಗಳಲ್ಲಿ ತೆಲುಗಿನ ಸೀರಿಯಲ್ ಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ಅಲ್ಲಿ ಮಿಂಚುತ್ತಿದ್ದಾರೆ. ನವ ನಟಿಯರು ಸಹಾ ಒಂದು ಸೀರಿಯಲ್ ಮುಗಿಯೋ ವೇಳೆಗೆ ತೆಲುಗಲ್ಲಿ ಅವಕಾಶವನ್ನು ಪಡೆಯೋದು ವಿಶೇಷ. ಈಗಾಗಲೇ ಸಾಲು ಸಾಲು ನಟಿಯರು ತೆಲುಗಿನ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಹೆಸರುಗಳನ್ನು ಹೇಳುತ್ತಾ ಹೋದರೆ ಕನ್ನಡ ನಟ, ನಟಿಯರ ದೊಡ್ಡ ದಂಡು ತೆಲುಗು ಭಾಷೆಯ ಕಿರುತೆರೆಯಲ್ಲಿ ಸಕ್ರಿಯವಾಗಿದೆ ಎಂದು ಆಶ್ಚರ್ಯ ಆಗಬಹುದು. ಏಕೆಂದರೆ ಬಹುತೇಕ ತೆಲುಗಿನ ಹಿಟ್ ಸೀರಿಯಲ್ ಗಳಲ್ಲಿ ಕನ್ನಡದ ನಟಿಯರೇ ನಾಯಕಿಯರಾಗಿ ಹಾಗೂ ನೆಗಟಿವ್ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.

ಇದೀಗ ತೆಲುಗು ಕಿರುತೆರೆಯನ್ನು ಪ್ರವೇಶಿಸುವ ಕನ್ನಡ ನಟಿಯರ ಸಾಲಿಗೆ ಮತ್ತೊಬ್ಬ ಜನಪ್ರಿಯ ನಟಿ ಸಹಾ ಸೇರಿದ್ದಾರೆ. ಹೌದು, ಕನ್ನಡ ಕಿರುತೆರೆಯ ಒಂದು ಸೂಪರ್ ಹಿಟ್ ಎನಿಸುವ ಯಶಸ್ವಿ ಸೀರಿಯಲ್ ನ ನಾಯಕಿ ಎನಿಸಿಕೊಂಡಿರುವ ನಟಿ ನಿಶಾ ಅವರು ಇದೀಗ ತೆಲುಗಿಗೆ ಎಂಟ್ರಿ ನೀಡುತ್ತಿದ್ದಾರೆ. ಬಹುಶಃ ನಿಶಾ ಎಂದಾಗ ಯಾರಿವರು ? ಎನ್ನುವ ಪ್ರಶ್ನೆ ಮೂಡಬಹುದು. ಹಾಗಿದ್ದರೆ ಇಲ್ಲಿದೆ ಉತ್ತರ. ಕನ್ನಡ ಕಿರುತೆರೆಯ ಲೋಕದ ಜನಪ್ರಿಯ ಹಾಗೂ ಟಾಪ್ ಐದು ಸೀರಿಯಲ್ ಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿರುವ ಧಾರಾವಾಹಿ ಗಟ್ಟಿಮೇಳದಲ್ಲಿ ಅಮೂಲ್ಯ ಪಾತ್ರವನ್ನು ನಿರ್ವಹಿಸುತ್ತಿರುವ ನಟಿಯೇ ನಿಶಾ ಅವರು.

ಗಟ್ಟಿಮೇಳದ ಅಮೂಲ್ಯ ಪಾತ್ರದ ಮೂಲಕ ರೌಡಿ ಬೇಬಿ ಯಾಗಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ ನಿಶಾ ಅವರು. ಈ ಸೀರಿಯಲ್ ನಲ್ಲಿ ಬಿಂದಾಸ್ ಹುಡುಗಿಯಾಗಿ ಕಾಣಿಸಿಕೊಂಡು ಜನರ ಮನಸ್ಸಿಗೆ ಲಗ್ಗೆ ಇಟ್ಟಿರುವ ನಿಶಾ ಅವರು ಇದೀಗ ತೆಲುಗಿಗೆ ಎಂಟ್ರಿ ನೀಡಿದ್ದಾರೆ. ತೆಲುಗು ಝೀ ವಾಹಿನಿಯಲ್ಲಿ ಮುತ್ಯಮಂತಾ ಮುದ್ದು ಎನ್ನುವ ಹೊಸ ಧಾರಾವಾಹಿ ಆರಂಭವಾಗಲಿದ್ದು ಈ ಸೀರಿಯಲ್ ನಲ್ಲಿ ನಿಶಾ ಅವರು ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದಾರೆ. ಈ ಸೀರಿಯಲ್ ಮೂಲಕ ನಿಶಾ ಅವರು ತೆಲುಗು ಕಿರುತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ವಾಹಿನಿಯು ಈಗಾಗಲೇ ಈ ಹೊಸ ಸೀರಿಯಲ್ ನ ಪ್ರೊಮೋ ಸಹಾ ಬಿಡುಗಡೆ ಮಾಡಿದೆ. ಈ ಸೀರಿಯಲ್ ನ ಮೊದಲ ಎಪಿಸೋಡ್ ನಲ್ಲಿ ತೆಲುಗಿನ ಸೂಪರ್ ಡೂಪರ್ ಹಿಟ್ ಸಿನಿಮಾ ಎನಿಸಿಕೊಂಡಿರುವ ಉಪ್ಪೆನಾ ಸಿನಿಮಾದ ನಾಯಕಿ ಕೃತಿ ಶೆಟ್ಟಿ ಅವರು ಕಾಣಿಸಿಕೊಳ್ಳಲಿದ್ದಾರೆ. ಪ್ರೊಮೋದಲ್ಲಿ ಕೃರಿ ಶೆಟ್ಟಿ ಅವರನ್ನು ನೋಡಬಹುದಾಗಿದೆ. ಧಾರಾವಾಹಿ ಆರಂಭ ಕೃತಿ ಶೆಟ್ಟಿ ಅವರಿಂದ ಆಗಲಿದೆ. ಒಟ್ಟಾರೆ ಕನ್ನಡದಿಂದ ತೆಲುಗು ಕಿರುತೆರೆಯ ಕಡೆಗೆ ಹೋದ ನಟಿಯರ ಸಾಲಿಗೆ ಇದೀಗ ನಿಶಾ ಅವರು ಸೇರ್ಪಡೆಯಾಗಿದ್ದಾರೆ.‌

Leave a Comment