ತೆಲುಗಲ್ಲಿ ಅವಕಾಶಕ್ಕೆ ಹಿರೋಯಿನ್ ಗಳು ಅದು ಮಾಡಬೇಕು: ಸಂಚಲನ ಸೃಷ್ಟಿಸಿದ ಅನುಷ್ಕಾ ಶೆಟ್ಟಿ ಹೇಳಿಕೆ!!

Entertainment Featured-Articles News

ತೆಲುಗು ಚಿತ್ರರಂಗದ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ನಾಯಕ ನಟನಾಗಿ ನಟಿಸಿದ್ದ ಸೂಪರ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ನಟಿ ಕನ್ನಡತಿ ಅನುಷ್ಕಾ ಶೆಟ್ಟಿ. ಅವರ ಈ ಮೊದಲ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡ ಅನುಷ್ಕಾ ಶೆಟ್ಟಿ ಅಗ್ರ ನಾಯಕಿಯಾಗಿ ಸ್ಥಾನವನ್ನು ಪಡೆದುಕೊಂಡರು. ಕೇವಲ ಗ್ಲಾಮರ್ ಪಾತ್ರಗಳಿಗೆ ಅನುಷ್ಕಾ ಶೆಟ್ಟಿ ಸೀಮಿತವಾಗಿರಲಿಲ್ಲ, ಉತ್ತಮ ಪಾತ್ರಗಳಿಗಾಗಿ ತಮ್ಮ ದೇಹ ಆ ಕೃತಿಯನ್ನು ಕೂಅಡ ಬದಲಿಸಿಕೊಂಡು ದಪ್ಪಗಾದ ಉದಾಹರಣೆಗಳು ಕೂಡಾ ಉಂಟು.

ಅರುಂಧತಿ, ಬಾಹುಬಲಿ, ಸೈಜ್ ಜೀರೋ, ಭಾಗಮತಿ ಯಂತಹ ಸಿನಿಮಾಗಳಲ್ಲಿ ನಟಿಸಿ, ಆ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ವಿಶ್ಲೇಷಕ ರಿಂದ ಪ್ರಶಂಸೆಗಳನ್ನು ಪಡೆದುಕೊಂಡರು. ಬಾಹುಬಲಿ ಸಿನಿಮಾ ನಂತರ ನಟಿ ಅನುಷ್ಕಾ ಶೆಟ್ಟಿ ಸಿನಿಮಾರಂಗದಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಶೀಘ್ರದಲ್ಲೇ ಅವರು ಹೊಸ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ತನ್ನ ಅದ್ಭುತ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿ ಅಭಿಮಾನಿಗಳನ್ನು ರಂಜಿಸುತ್ತಾರೆ ಎನ್ನುವ ಸುದ್ದಿಯೊಂದು ಈಗ ಹರಿದಾಡಿದೆ.

ಕಳೆದ ಕೆಲವು ಸಮಯದಿಂದಲೂ ಸಹಾ ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಹೆಚ್ಚು ಸುದ್ದಿಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಇದೀಗ ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌ ಚ್ ಬಗ್ಗೆ ಮಾತನಾಡುವ ಮೂಲಕ ಒಂದು ಸಂಚಲನಕ್ಕೆ ಕಾರಣವಾಗಿದ್ದಾರೆ ನಟಿ ಅನುಷ್ಕಾ ಶೆಟ್ಟಿ. ಹೌದು ಸಂಚಲನ ಹೇಳಿಕೆಯೊಂದರಲ್ಲಿ ನಟಿ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌ ಚ್ ಎನ್ನುವುದು ಇದೆ ಎಂದು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ತೆಲುಗು ಇಂಡಸ್ಟ್ರಿಯಲ್ಲಿ ಸಹಾ ಅವಕಾಶಗಳನ್ನು ಕೊಡುವುದಾಗಿ ಸಿನಿಮಾ ನಾಯಕಿಯರನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಸಂಸ್ಕೃತಿ ಟಾಲಿವುಡ್ ಚಿತ್ರರಂಗದಲ್ಲೂ ಇದೆ. ನಾನು ಅಂಥವುಗಳನ್ನು ನೋಡಿದ್ದೇನೆ. ಇದು ಕೇವಲ ತೆಲುಗಿನಲ್ಲಿ ಮಾತ್ರವೇ ಅಲ್ಲದೇ ಎಲ್ಲಾ ಭಾಷೆಯ ಸಿನಿಮಾ ರಂಗಗಳಲ್ಲೂ ಕೂಡಾ ಇದೆ. ನಾನು ಸಿನಿಮಾ ರಂಗಕ್ಕೆ ಬಂದಾಗಿನಿಂದಲೂ ನೇರವಾಗಿ ಮಾತನಾಡುತ್ತೇನೆ ಹಾಗೂ ನನ್ನ ಈ ಸ್ವಭಾವದಿಂದಲೇ ಅಂತಹ ಪರಿಸ್ಥಿತಿ ಎದುರಾಗಿಲ್ಲ.

ಟಾಲಿವುಡ್ ಇಂಡಸ್ಟ್ರಿಯಲ್ಲಿ ಮಹಿಳೆಯರು ಲೈಂ ಗಿ ಕ ಕಿ ರು ಕು ಳದಿಂದ ಸಂಕಟ ಪಡುತ್ತಿದ್ದಾರೆ. ಆ ವಿಷಯವನ್ನು ನಾನು ಕೂಡಾ ಒಪ್ಪುತ್ತೇನೆ. ಆದರೆ ನನ್ನ ಮನಸ್ತತ್ವ ಎಂಥದ್ದು ಎಂದು ಎಲ್ಲರಿಗೂ ಗೊತ್ತಿರುವುದರಿಂದ, ನನ್ನ ಬಳಿ ಯಾರೂ ಎಂದೂ ಅಂತಹ ಮಾತುಗಳನ್ನು ಆಡಿಲ್ಲ ಎಂದು ಹೇಳುವ ಮೂಲಕ ನಟಿ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌ ಚ್ ಅಸ್ತಿತ್ವದಲ್ಲಿದೆ ಎಂದು ಸಂಚಲನ ಹುಟ್ಟಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಸ್ಟಾರ್ ನಟಿ ಈ ಮಾತು ಹೇಳಿರುವುದು ಸಹಜವಾಗಿಯೇ ಸಂಚಲನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *