ತೆರೆಯ ಮೇಲಷ್ಟೇ ಕಪ್ಪು ವರ್ಣ:ರಿಯಲ್ ಲೈಫ್ ನಲ್ಲಿ ಲಕ್ಷಣ ಸೀರಿಯಲ್ ನ ಈ ನಟಿ ಸುರಸುಂದರಿ

0 4

ಇತ್ತೀಚಿನ ದಿನಗಳಲ್ಲಿ ಕನ್ನಡ ಸೀರಿಯಲ್ ಗಳಲ್ಲಿ ಕಪ್ಪು ವರ್ಣದ ಹುಡುಗಿಯರ ಕಥೆಗಳಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ ಎನ್ನುವಂತೆ ಕಾಣುತ್ತಿದೆ. ಕಿರುತೆರೆ ವಾಹಿನಿಗಳಲ್ಲಿ ಮುದ್ದು ಲಕ್ಷ್ಮೀ, ಕೃಷ್ಣ ಸುಂದರಿ, ಸುಂದರಿ ಹೀಗೆ ಸಾಲು ಸಾಲಾಗಿ ಕಪ್ಪು ಬಣ್ಣದ ಹೆಣ್ಣು ಮಕ್ಕಳು ಪಡುವ ಕಷ್ಟ, ಅವರು ಅದನ್ನು ಎದುರಿಸಿ ಮುನ್ನಡೆಯುವ ಕಥೆಗಳನ್ನು ಆಧರಿಸಿ ಸೀರಿಯಲ್ ಗಳು ಈಗಾಗಲೇ ಜನರ ಮೆಚ್ಚುಗೆಯನ್ನು ಪಡೆದು ಮುಂದೆ ಸಾಗಿವೆ. ಈಗ ಅವುಗಳ ಸಾಲಿಗೆ ಇನ್ನೊಂದು ಹೊಸ ಧಾರಾವಾಹಿ ಸೇರ್ಪಡೆಯಾಗಿದೆ.

ಹೌದು ಕನ್ನಡ ಖಾಸಗಿ ವಾಹಿನಿಯಲ್ಲಿ ಲಕ್ಷಣ ಹೆಸರಿನಲ್ಲಿ ಹೊಸ ಧಾರಾವಾಹಿ ಆರಂಭವಾಗಿದ್ದು, ಈ ಧಾರಾವಾಹಿಯ ನಾಯಕಿಯ ಪಾತ್ರವು ಸಹಾ ಕಪ್ಪು ವರ್ಣದ ಹುಡುಗಿಯ ಕಥೆಯನ್ನು ಒಳಗೊಂಡಿದ್ದು, ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗಿದ್ದು, ನಾಯಕಿಯ ಪಾತ್ರವಾದ ನಕ್ಷತ್ರಳಾಗಿ ನಟಿಸುತ್ತಿರುವ ನಟಿಯನ್ನು ನೋಡಿದವರು ಇವರು ನಿಜ ಜೀವನದಲ್ಲಿ ಹೇಗಿರಬಹುದು? ಅವರು ನಿಜವಾಗಿಯೂ ಕಪ್ಪಾಗಿದ್ದಾರಾ? ಎಂದು ಪ್ರಶ್ನೆಗಳನ್ನು ಮಾದ್ಯಮಗಳ ಮೂಲಕ ಹೊರ ಹಾಕಿದ್ದಾರೆ.

ಲಕ್ಷಣ ಸೀರಿಯಲ್ ನಲ್ಲಿ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬಂದಿರುವ ಆ ಯುವ ನಟಿಯ ಹೆಸರು ವಿಜಯಲಕ್ಷ್ಮಿ ಕೃಷ್ಣನ್ . ಇವರು ಮೂಲತಃ ಕೋಲಾರ ಜಿಲ್ಲೆಯವರು ಎನ್ನಲಾಗಿದ್ದು, ಲಕ್ಷಣ ಸೀರಿಯಲ್ ನ ಮೂಲಕ ಅವರು ಕಿರುತೆರೆ ಲೋಕಕ್ಕೆ ಕಾಲಿರಿಸಿ ನಟನೆಯನ್ನು ಪ್ರಾರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಪದವಿ ಶಿಕ್ಷಣವನ್ನು ಮುಗಿಸಿರುವ ಅವರು ಲಕ್ಷಣ ಸೀರಿಯಲ್ ಗಾಗಿ ಆಡಿಷನ್ ನೀಡಿ ಆ ಮೂಲಕ ಪಾತ್ರಕ್ಕೆ ಆಯ್ಕೆಯಾದರು ಎನ್ನಲಾಗಿದೆ.

ಕೆಲವು ಸುದ್ದಿಗಳ ಪ್ರಕಾರ ವಿಜಯಲಕ್ಷ್ಮಿ ಅವರು ನಟನೆಗೆ ಬರುವಾಗ ಅವರ ಮನೆಯವರ ಬೆಂಬಲ ದೊರಕಿರಲಿಲ್ಲ ಎನ್ನಲಾಗಿದ್ದು, ಅನಂತರ ಅವರು ಒಂದು ವರ್ಚ ಅವಕಾಶ ನೀಡಿ, ಯಶಸ್ಸು ಸಿಗದೇ ಹೋದರೆ ಬೇರೆ ವೃತ್ತಿ ಯ ಕಡೆ ಗಮನ ನೀಡುವುದಾಗಿ ತಮ್ಮ ಮನೆಯವರನ್ನು ಒಪ್ಪಿಸಿದ್ದರು ಎನ್ನಲಾಗಿದೆ. ಅನಂತರ ಅವರು ಲಕ್ಷಣ ಸೀರಿಯಲ್ ಮೂಲಕ ಕಿರುತೆರೆಯ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಲಕ್ಷಣ ಸೀರಿಯಲ್ ನ ತಮ್ಮ ಪಾತ್ರದ ಮೂಲಕ ಉತ್ತಮ ನಟನೆಯಿಂದ ವಿಜಯಲಕ್ಷ್ಮಿ ಅವರು ಜನರ ಮೆಚ್ಚುಗೆಯನ್ನು ಪಡೆದಿದ್ದು, ಅವರು ಇನ್ನಷ್ಟು ಹೆಸರನ್ನು ಪಡೆಯಲಿ, ಕಿರುತೆರೆಯ ಲೋಕದಲ್ಲಿ ಅವರು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಳ್ಳಲಿ ಎಂದು ನಾವು ಸಹಾ ಹಾರೈಸೋಣ. ಅವರು ಕಿರುತೆರೆಯ ಪಯಣ ಸುಗಮವಾಗಿರಲೆಂದು ಆಶಿಸೋಣ.

Leave A Reply

Your email address will not be published.