ತುಳಸಿಯ ಒಣಗಿದ ಎಲೆಗಳಿಂದ ಹೀಗೆ ಮಾಡಿದರೆ ನಿಮ್ಮ ಅದೃಷ್ಟ ಬದಲಾಗಿ ಯಶಸ್ಸು ಸಿಗುತ್ತದೆ.

Astrology tips Entertainment Featured-Articles News ಜೋತಿಷ್ಯ

ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವ ಇದ್ದು, ದೈವಿಕ ಸ್ಥಾನವನ್ನು ನೀಡಲಾಗಿದೆ.‌ ಅಲ್ಲದೇ ಪ್ರತಿ ನಿತ್ಯ ತುಳಸಿಯನ್ನು ಪೂಜಿಸುವುದರಿಂದ ಮಹಾಲಕ್ಷ್ಮಿಯ ಕೃಪೆ ಪ್ರಾಪ್ತವಾಗುವುದು ಎಂದು ಹೇಳಲಾಗುತ್ತದೆ. ಅಲ್ಲದೇ ತುಳಸಿಯ ಪೂಜೆಯಿಂದ ಭಗವಾನ್ ಶ್ರೀ ವಿಷ್ಣುವೂ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ತುಳಸಿ ಗಿಡ ಎಲ್ಲಿ ಇರುವುದೋ ಅಲ್ಲಿ ಸುಖ ಶಾಂತಿಗೆ ಎಂದೂ ಕೊರತೆ ಇರುವುದಿಲ್ಲ. ತುಳಸಿಯ ಆರಾಧನೆ ಮಾಡುವುದರಿಂದ, ಸರಿಯಾದ ಸಮಯದಲ್ಲಿ ಪೂಜೆಯನ್ನು ಮಾಡುವುದರಿಂದ ಮಂಗಳಕರ ಫಲಿತಾಂಶಗಳನ್ನು ಪಡೆಯುತ್ತೇವೆ. ಮನೆ ಮನೆಗಳ ಮುಂದಿನ ಅಂಗಳದಲ್ಲಿ ಸಾಮಾನ್ಯವಾಗಿಯೇ ತುಳಸಿ ಗಿಡ ನೋಡಲು ಸಿಗುತ್ತದೆ.

ಹಚ್ಚ ಹಸಿರಾದ ತುಳಸಿ ಎಲೆಗಳು ಹೆಚ್ಚು ಉಪಯುಕ್ತವೆಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ನಿಮಗೆ ತಿಳಿದಿದೆಯೋ ಇಲ್ಲವೋ, ತುಳಸಿ ಗಿಡದ ಒಣ ಎಲೆಗಳು ಸಹ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ, ತುಳಸಿ ಎಲೆಗಳು ಒಣಗಿದ ನಂತರ, ಅವುಗಳನ್ನು ನೀರಿಗೆ ಎಸೆಯಲಾಗುವುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಣ ಎಲೆಗಳನ್ನು ಸರಿಯಾಗಿ ಬಳಸಿದರೆ ಅವು ವ್ಯಕ್ತಿಯ ಅದೃಷ್ಟವನ್ನು ಬೆಳಗಿಸುತ್ತವೆ ಎಂದು ನಂಬಲಾಗಿದೆ. ಹಾಗಾದರೆ ಸಂತೋಷದ ಜೀವನಕ್ಕಾಗಿ ತುಳಸಿಯ ಎಲೆಗಳಿಂದ ಯಾವ ಪರಿಹಾರಗಳನ್ನು ಮಾಡಬೇಕೆಂದು ತಿಳಿಯೋಣ ಬನ್ನಿ.

ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಸದಾ ಒತ್ತಡದಲ್ಲಿದ್ದರೆ, ಮಾತು ಮಾತಿಗೂ ಕೋಪಗೊಂಡು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅದಕ್ಕೆ ಕಾರಣ ಆತನಲ್ಲಿರುವ ನಕಾರಾತ್ಮಕ ಶಕ್ತಿಯಿಂದ ಕೂಡ ಆಗಿರಬಹುದು. ಇಂತಹ ಪರಿಸ್ಥಿತಿಯಲ್ಲಿ ಒಣ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ತುಳಸಿ ಎಲೆಗಳು ನಿಮ್ಮ ದೇಹದಿಂದ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ನೆರವನ್ನು ನೀಡುತ್ತದೆ.

ಮನೆಯ ಸಮಸ್ಯೆಗಳನ್ನು ದೂರ ಮಾಡಲು :
ಕುಟುಂಬದ ಸದಸ್ಯರ ನಡುವೆ ಯಾವುದಾದರೊಂದು ವಿಚಾರದಲ್ಲಿ ಸಮಸ್ಯೆಗಳು ಎದುರಾಗಿದ್ದರೆ ಮತ್ತು ಕುಟುಂಬದಲ್ಲಿ ವೈ ಮನಸ್ಸು ಏರ್ಪಟ್ಟಿದ್ದರೆ, ಪರಸ್ಪರ ದೂರವು ನಿರಂತರವಾಗಿ ಹೆಚ್ಚುತ್ತಿದ್ದರೆ, ಸ್ವಲ್ಪ ಗಂಗಾಜಲವನ್ನು ತೆಗೆದುಕೊಂಡು ಅದರಲ್ಲಿ ಒಣ ತುಳಸಿ ಎಲೆಗಳನ್ನು ಹಾಕಿ. ನಂತರ, ಅದನ್ನು ಮನೆಯ ಪ್ರತಿಯೊಂದು ಮೂಲೆಯಿಂದ ಹಿಡಿದು ಹೊರ ಭಾಗದವರೆಗೆ ಸಿಂಪಡಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುವಲ್ಲಿ ನೆರವಾಗುತ್ತದೆ ಎನ್ನಲಾಗಿದೆ.

ಮಹಾವಿಷ್ಣುವಿನ ಕೃಪೆ ಪಡೆಯಲು: ಹಚ್ಚ ಹಸಿರಿನ ತುಳಸಿಯಂತೆ ಒಣ ತುಳಸಿಯೂ ಅಷ್ಟೇ ಮುಖ್ಯವಾಗಿದೆ. ನಿಮ್ಮಲ್ಲಿ ತಾಜಾ ತುಳಸಿ ಎಲೆಗಳು ಇಲ್ಲದೇ ಹೋದರೆ, ನೀವು ಭಗವಾನ್ ವಿಷ್ಣು ಅಥವಾ ವಿಷ್ಣುವಿನ ಬೇರೆ ಅವತಾರಗಳ ಆರಾಧನೆ ಮಾಡುತ್ತಾ ನೈವೇದ್ಯ ವನ್ನು ಅರ್ಪಿಸುವಾಗ ಒಣ ತುಳಸಿ ಎಲೆಗಳನ್ನು ಬಳಸಬಹುದು. ಇದರೊಂದಿಗೆ ವಿಷ್ಣುವಿನ ಕೃಪೆ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗಿದೆ.‌

ಉದ್ಯೋಗ ಮತ್ತು ವ್ಯಾಪಾರದಲ್ಲಿ ವೃದ್ಧಿಗೆ : ಉದ್ಯೋಗ ಅಥವಾ ವ್ಯಾಪಾರದಲ್ಲಿ ಬಡ್ತಿ ಪಡೆಯಲು ಒಣ ತುಳಸಿಯು ಪ್ರಯೋಜನಕಾರಿಯಾಗಿದೆ. ಒಣ ತುಳಸಿಯನ್ನು ಶ್ರೀಕೃಷ್ಣನಿಗೆ ಅರ್ಪಿಸಿ ಆರಾಧನೆ ಮಾಡಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬನ್ನಿ. ಇದಲ್ಲದೇ ಶ್ರೀ ಕೃಷ್ಣ ದೇವರಿಗೆ ಅಭಿಷೇಕ ವನ್ನು ಮಾಡುವಾಗ ನೀರಿನಲ್ಲಿ ಒಣ ತುಳಸಿಯನ್ನು ಹಾಕಿ. ಇದರಿಂದಲೂ ಶುಭ ಫಲ ಸಿಗುವುದು ಎನ್ನಲಾಗಿದೆ.

Leave a Reply

Your email address will not be published.