ತುಂಬಿದ ಸಭೆಯಲ್ಲಿ ಹೃತಿಕ್ ರೋಷನ್ ನನ್ನು ಚುಂಬಿಸಿದ್ದ ನಟಿ ರೇಖ: ಆದ್ರೆ ನಂತರ ಆಗಿದ್ದು ಮಾತ್ರ..? ಅನಿರೀಕ್ಷಿತ

Entertainment Featured-Articles News

ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಗಳಾಗಿ ಕೆಲವೇ ಕೆಲವು ನಟಿಯರು ಗುರ್ತಿಸಿಕೊಂಡಿದ್ದು, ಅದರಲ್ಲಿ ಅಗ್ರ ಸ್ಥಾನ ಪಡೆದಿರುವುದು ಯಾರು ಎಂದಾಗ ಕೇಳಿ ಬರುವುದು ನಟಿ ರೇಖಾ ಹೆಸರು. ನಟಿ ರೇಖ ಅವರ ಸೌಂದರ್ಯ ಮತ್ತು ನಟನೆಗೆ ಹುಚ್ಚು ಅಭಿಮಾನಿಗಳ ಸಂಖ್ಯೆ ತುಂಬಾ ದೊಡ್ಡದಾಗಿಯೇ ಇದೆ. ಒಂದು ಕಾಲದ ಸೂಪರ್ ಸ್ಟಾರ್ ಆಗಿದ್ದ ನಟಿ ರೇಖ ಇಂದು ತೆರೆಯ ಮೇಲೆ ಅಪರೂಪಕ್ಕೊಮ್ಮೆ ಕಂಡರೂ ಸಹಾ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಮಾಸದ ಅಂದದ ಒಡತಿ ಎನಿಸಿರುವ ರೇಖ ಅವರನ್ನು ಅಭಿಮಾನಿಸುವ ದೊಡ್ಡ ಬಳಗ ಇಂದಿಗೂ ಸಹಾ ಇದೆ.

67 ವಯಸ್ಸಿನ ನಟಿ ರೇಖ ಇಂದಿಗೂ ಹಲವು ಟಿವಿ ಶೋ ಗಳು ಮತ್ತು ಸಿನಿಮಾ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗಿಯಾಗುತ್ತಾರೆ. ರೇಖ ಸಮಾರಂಭಗಳಿಗೆ ಅಲಂಕರಿಸಿಕೊಂಡು ಬರುವ ಪರಿಗೆ ಎಲ್ಲರ ಕಣ್ಣು ಸಹಾ ರೇಖ ಅವರ ಕಡೆಗೆ ಹೋಗುತ್ತದೆ. ರೇಖ ಅವರ ಅಂದ ಸಮಾರಂಭಗಳ ಕೇಂದ್ರ ಬಿಂದುವಾಗಿರುತ್ತದೆ. ರೇಖ ಅವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಸಹಾ ದೊಡ್ಡ ಫಾಲೋಯಿಂಗ್ ಇದೆ. ನಟಿಯು ಅಧಿಕೃತ ಖಾತೆ ಹೊಂದಿಲ್ಲವಾದರೂ ಕೂಡಾ, ಅವರ ಫ್ಯಾನ್ ಪೇಜ್ ಗಳು ಮಾತ್ರ ಹಲವು ಇದ್ದು, ಅವರ ಜನಪ್ರಿಯತೆಗಿದು ಸಾಕ್ಷಿಯಾಗಿದೆ.

ಈಗ ಇವೆಲ್ಲವುಗಳ ನಡುವೆ ರೇಖ ಅವರ ಹಳೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈಗ ವೈರಲ್ ಆಗಿರುವ ಈ ಹಳೆಯ ಫೋಟೋದಲ್ಲಿ ನಟಿ ರೇಖ ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಶನ್ ಜೊತೆ ಕಾಣಿಸಿಕೊಂಡಿದ್ದಾರೆ. ಹಳೆಯ ಫೋಟೋ, ಇಬ್ಬರೂ ಜೊತೆಗಿರುವ ಫೋಟೋ ದಲ್ಲಿ ವೈರಲ್ ಆಗೋಂತಹ ವಿಶೇಷ ಏನಿದೆ ಎನ್ನುವ ಪ್ರಶ್ನೆ ಮೂಡಬಹುದು. ಹೌದು, ಖಂಡಿತ ಇದಕ್ಕೊಂದು ಕಾರಣವಿದೆ. ಬನ್ನಿ ಅದೇನೆಂದು ನಾವು ತಿಳಿಯೋಣ.

ಈ ಹಳೆಯ ಫೋಟೋವನ್ನು ಸರಿಯಾಗಿ ನೋಡಿದಾಗ ಇದರಲ್ಲಿ ರೇಖಾ ಹಾಗೂ ನಟ ಹೃತಿಕ್ ರೋಶನ್ ಚುಂಬಿಸುತ್ತಿರುವಂತೆ ( ಕಿಸ್ ) ಕಾಣುತ್ತಿದೆ. ರೇಖ ಹೃತಿಕ್ ಅವರ ಕೆಳ ತುಟಿಯನ್ನು ಚುಂಬಿಸುತ್ತಿರುವಂತೆ ಕಾಣುವ ಈ ಫೋಟೋ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ನಟಿ ರೇಖ ಇತರರ ಮೇಲಿನ ತಮ್ಮ ಪ್ರೀತಿಯನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

ಈ ಫೋಟೋ ವೈರಲ್ ಆದಾಗ ಒಂದಷ್ಟು ಗಾಸಿಪ್ ಗಳಿಗೆ ಇದು ಕಾರಣವಾಗಿತ್ತು. ಅನಂತರ ಅದು ಸಾಮಾನ್ಯ ವಿಷಯವಾಗಿ ಬದಲಾಯಿತು. ಇನ್ನು ರೇಖ ಹೃತಿಕ್ ಗೆ ಕೋಯಿ ಮಿಲ್ ಗಯಾ ಸಿನಿಮಾದಲ್ಲಿ ತಾಯಿಯಾಗಿ, ಕ್ರಿಶ್ ಸಿನಿಮಾದಲ್ಲಿ ಅಜ್ಜಿಯಾಗಿ ನಟಿಸಿದ್ದರು. ಇವರ ನಡುವಿನ ಬಾಂಡಿಂಗ್ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಅಪಾರವಾದ ಮೆಚ್ಚುಗೆಗಳು ಹರಿದು ಬಂದಿದ್ದವು. ಆ ವಿಷಯ ಮುನ್ನೆಲೆಗೆ ಬಂದ ಮೇಲೆ ಈ ಕಿಸ್ಸಿಂಗ್ ಫೋಟೋ ವಿಷಯವು ಎಲ್ಲೋ ಕಳೆದು ಹೋಗಿತ್ತು. ಆದರೆ ಈಗ ಮತ್ತೊಮ್ಮೆ ಸದ್ದಾಗಿದೆ.

Leave a Reply

Your email address will not be published.