ತಿರುಮಲದ ಕಾಲ್ನಡಿಗೆ ಹಾದಿಯಲ್ಲಿ ನುಗ್ಗಿ ಬಂದ ಸರ್ಪ: ಹೆಡೆ ಬಿಚ್ಚಿದ ಸರ್ಪ ಕಂಡು ಬೆದರಿದ ಭಕ್ತರು

Entertainment Featured-Articles News

ತಿರುಮಲ ತಿರುಪತಿಗೆ ಹೋಗುವ ಭಕ್ತರಲ್ಲಿ ಅನೇಕರು ತಿರುಪತಿಯಿಂದ ಶ್ರೀ ವೆಂಕಟೇಶ್ವರನ ಸನ್ನಿಧಾನಕ್ಕೆ ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ ಹೋಗುತ್ತಾರೆ. ತಿರುಮಲಕ್ಕೆ ಹೋಗಲು ಜನರು ಹೆಚ್ಚಾಗಿ ಬಳಸುವುದು ಅಲಿಪಿರಿ ಕಾಲು ನಡಿಗೆಯ ಮಾರ್ಗವಾಗಿದೆ. ಶ್ರೀ ವಾರಿ ಮೆಟ್ಟಿಲು ಮಾರ್ಗದಿಂದ ಭಕ್ತರು ಬೆಟ್ಟ ಹತ್ತುವರಾದರೂ ಅಲ್ಲಿಂದ ಬೆಟ್ಟ ಹತ್ತುವ ಭಕ್ತರ ಸಂಖ್ಯೆ ಸ್ವಲ್ಪ ಕಡಿಮೆ ಎಂದೇ ಹೇಳಬಹುದು. ಇನ್ನು ಇಂದು ಅಲಿಪಿರಿಯಿಂದ ತಿರುಮಲಕ್ಕೆ ಕಾಲು ನಡಿಗೆಯಲ್ಲಿ ಹೊರಟ ಭಕ್ತರಿಗೆ ದಾರಿಯಲ್ಲೊಂದು ಅವಕ್ಕಾದ ಘಟನೆ ನಡೆದಿದೆ.

ತಿರುಮಲಕ್ಕೆ ಹೋಗುವುದು ಬೆಟ್ಟಗಳ ಹಾದಿಯಾದ ಕಾರಣ, ಅದು ಅರಣ್ಯದಂತಹ ಪ್ರದೇಶದ ಮಧ್ಯದಲ್ಲಿ ಹಾದು ಹೋಗುತ್ತದೆ. ಇಂದು ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಹೋಗುವಾಗ ಮಾರ್ಗ ಮಧ್ಯೆ ಅಡವಿಯೊಳಗಿಂದ ಬಂದ ನಾಗರಹಾವೊಂದು ಮೆಟ್ಟಿಲುಗಳ ಮೇಲೆ ಬಂದು ಹೆಡೆ ಎತ್ತಿ ಬುಸುಗುಟ್ಟಿದೆ. ಸುಮಾರು ಆರು ಅಡಿ ಇದ್ದ ಹಾವು ಇದ್ದಕ್ಕಿದ್ದಂತೆ ಬಂದಿದ್ದು ನೋಡಿ ಬೆಟ್ಟ ಹತ್ತುತ್ತಿದ್ದ ಭಕ್ತರು ಸ್ವಲ್ಪ ಕಾಲ ಕಂಗಾಲಾಗಿದ್ದಾರೆ. ಅನಿರೀಕ್ಷಿತ ಘಟನೆಯನ್ನು ಕಂಡು ಅಚ್ಚರಿ ಪಟ್ಟಿದ್ದಾರೆ.

ಮೆಟ್ಟಿಲು ಏರಿ ಬರುತ್ತಿದ್ದ ಭಕ್ತರು ಆರು ಅಡಿ ಉದ್ದದ ಸರ್ಪವು ಬಂದಿದ್ದನ್ನು ನೋಡಿ ಭಯ ಭ್ರಾಂತರಾಗಿ ಕಿರುಚಿಕೊಂಡು ದೂರ ಓಡಿದ್ದಾರೆ. ಜನರ ಅರಚಾಡ ಕೇಳಿದ ಕೂಡಲೇ ಟಿಟಿಡಿಯ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅನಂತರ ಈಗಾಗಲೇ ಸಾಕಷ್ಟು ಹಾವುಗಳನ್ನು ಹಿಡಿದಿರುವ ಭಾಸ್ಕರ್ ನಾಯ್ಡು ಅವರಿಗೆ ಭದ್ರತಾ ಸಿಬ್ಬಂದಿ ಸಂದೇಶವನ್ನು ನೀಡಿದ್ದರು. ಅನಂತರ ಸ್ಥಳಕ್ಕೆ ಆಗಮಿಸಿದ ಭಾಸ್ಕರ್ ನಾಯ್ಡು ಅವರು ಶ್ರಮ ವಹಿಸಿ ಆ ಆರು ಅಡಿಯ ನಾಗರಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published.