ತಿರುಪತಿ ಪ್ರಸಾದ ಬೆಲೆ 500 ಕ್ಕೆ ಏರಿಕೆ: ಯಾವ ಪ್ರಸಾದದ ಬೆಲೆ ಎಷ್ಟಿದೆ ಈಗ??

Written by Soma Shekar

Published on:

---Join Our Channel---

ತಿರುಮಲ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯನ್ನು ಕಲಿಯುವ ಪ್ರತ್ಯಕ್ಷ ದೈವವೆಂದೇ ಅನಂತ ಭಕ್ತಿಕೋಟಿ ಅಪಾರ ಭಕ್ತಿ ಶ್ರದ್ಧೆಗಳಿಗಿಂದ ಆರಾಧಿಸುವುದುಂಟು. ಯಾರಾದರೂ ತಿರುಪತಿಗೆ ಹೊರಡುತ್ತಿದ್ದೇವೆ ಎಂದು ಹೇಳಿದ ಕೂಡಲೇ ಬಹಳಷ್ಟು ಜನರು ಹುಂಡಿಗೆ ಹಣ ಹಾಕಿ ಎಂದು ಹಣ ಕೊಡುವುದರ ಜೊತೆಗೆ, ತಪ್ಪದೇ ಲಾಡು ಪ್ರಸಾದವನ್ನು ತಂದು ಕೊಡಿ ಎಂದು ಸಹಾ ಹಣವನ್ನು ನೀಡುವುದುಂಟು. ತಿರುಪತಿಯ ಲಾಡು ಪ್ರಸಾದಕ್ಕೆ ಅದರದ್ದೇ ಆದ ವಿಶೇಷ ಮಹತ್ವ ಹಾಗೂ ವಿಶಿಷ್ಠವಾದ ರುಚಿ ಇದ್ದು, ತಿರುಪತಿ ಲಾಡನ್ನು ಇಷ್ಟ ಪಡದೇ ಇರುವವರು ಬಹಳ ವಿರಳ ಎಂದೇ ಹೇಳಬಹುದಾಗಿದೆ.

ತಿರುಪತಿ ಪ್ರಸಾದವು ಹೊರ ರಾಜ್ಯಗಳಿಗೂ ಸಹಾ ರವಾನೆಯಾಗುತ್ತದೆ. ಆದರೆ ತಿರುಪತಿಯಲ್ಲಿ ಲಾಡು ಪ್ರಸಾದ ಮಾತ್ರವೇ ಅಲ್ಲದೇ ಅನ್ಯ ಪ್ರಸಾದಗಳು ಸಹಾ ಸಿಗುತ್ತದೆ. ಆದರೆ ಅದರ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ ಎನ್ನುವುದು ಸಹಾ ವಾಸ್ತವ. ಇದೀಗ ತಿರುಪತಿಯಲ್ಲಿ ಪ್ರಸಾದದ ಬೆಲೆಯನ್ನು ಏರಿಕೆ ಮಾಡಲಾಗಿದೆ. ಹೌದು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಯು ಇಂತಹುದೊಂದು ಹೊಸ ನಿರ್ಧಾರವನ್ನು ಮಾಡಿದೆ ಎಂದು ಅಧಿಕೃತ ನಿರ್ಣಯ ಹೊರ ಬಂದಿದೆ.

ತಿರುಪತಿಯಲ್ಲಿ ಜನರ ನೆಚ್ಚಿನ ಪ್ರಸಾದವಾದ ಲಾಡು ಪ್ರಸಾದದ ಬೆಲೆಯ ಏರಿಕೆ ಆಗಿಲ್ಲ. ಆದರೆ ಜಿಲೇಬಿ ಪ್ರಸಾದದ ಬೆಲೆಯನ್ನು ಈಗ ಏರಿಸಲಾಗಿದೆ. ಹೌದು ಇಷ್ಟು ದಿನ 100 ರೂ. ಇದ್ದಂತಹ ಜಿಲೇಬಿ ಪ್ರಸಾದವನ್ನು ಈಗ 500 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಟಿಟಿಡಿ ಜಿಲೇಬಿ ಮತ್ತು ಥಿಂಥೋಲ ಸೆಟ್ ಪ್ರಸಾದವನ್ನು ಇಷ್ಟು ದಿನ 100 ರೂ. ಗಳಿಗೆ ಮಾರಾಟವನ್ನು ಮಾಡುತ್ತಿತ್ತು. ಆದರೆ ಇದರಲ್ಲಿ ಮದ್ಯವರ್ತಿಗಳ ಸಮಸ್ಯೆ ಎದುರಾಗಿದೆ ಎಂದು ತಿಳಿದು ಬಂದಿದೆ.

ಮದ್ಯವರ್ತಿಗಳು ಈ ಪ್ರಸಾದದ ಸೆಟ್ ಅನ್ನು ಸುಮಾರು 2000 ರೂ. ಗಳಿಗೆ ಮಾರಾಟವನ್ನು ಮಾಡುತ್ತಿದ್ದರು ಎನ್ನಲಾಗಿದೆ. ಟಿಟಿಡಿ ಗೆ ಈ ಪ್ರಸಾದದ ಸೆಟ್ ತಯಾರಿಸಲು ತಗಲುವ ವೆಚ್ಚ 147.50 ರೂ. ಆಗುತ್ತದೆ ಎನ್ನಲಾಗಿದೆ. ಆದ್ದರಿಂದ ಇದನ್ನು ತಡೆಯಲು ಟಿಟಿಡಿ ದೀರ್ಘವಾದ ಚರ್ಚೆಯನ್ನು ನಡೆಸಿದ ನಂತರ ಈ ಪ್ರಸಾದದ ಸೆಟ್ ಗೆ 500 ರೂ. ‌ನಿಗಧಿ ಮಾಡಿದ್ದು, ಟಿಟಿಡಿ ಗೆ ಇದರಿಂದ 239% ಲಾಭವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೇ ಇದರಿಂದ ಮದ್ಯವರ್ತಿಗಳ ಸಮಸ್ಯೆ ಸಹಾ ಕಡಿಮೆಯಾಗುವುದು ಎನ್ನಲಾಗಿದೆ.

ಅಲ್ಲದೇ ಜಿಲೇಬಿ ಮತ್ತು ಥಿಂಥೋಲ ಪ್ರಸಾದವನ್ನು ಭಕ್ತರಿಗೆ ತೆರೆದ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಲಾಗುವುದು ಎನ್ನಲಾಗಿದೆ. ಇದರಿಂದ ಭಕ್ತರು ಮದ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ಈ ಪ್ರಸಾದವನ್ನು ಪಡೆಯಬಹುದು ಎನ್ನುವುದು ಟಿಟಿಡಿ ಉದ್ದೇಶವಾಗಿದೆ. ಆದರೆ ಇದೇ ವೇಳೆ ಪ್ರಸಾದದ ಮೇಲೆ ಏಕಾ ಏಕೀ ಇಷ್ಟೊಂದು ಏರಿಕೆ ಮಾಡಿರುವುದು ಕೆಲವರ ಅಸಮಾಧಾನಕ್ಕೆ ಸಹಾ ಕಾರಣವಾಗಿದೆ. ಈ ಬಗ್ಗೆ ಟಿಡಿಪಿ ಶಾಸಕರೊಬ್ಬರು ಈಗಾಗಲೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

Leave a Comment