ತಿನ್ನೋದಂದ್ರೆ ಇಷ್ಟೊಂದು ಕ್ರೇಜಾ??ಬಿರಿಯಾನಿ ಗಾಗಿ ಡಯಟ್ ಮರೆತ ಬಾಲಿವುಡ್ ಬೆಡಗಿ

Entertainment Featured-Articles News Viral Video

ಬಾಲಿವುಡ್ ಬ್ಯೂಟಿ ನಟಿ ಕರೀನಾ ಕಪೂರ್ ತನ್ನ ಸೌಂದರ್ಯ ಹಾಗೂ ದೈಹಿಕ ಫಿಟ್ನೆಸ್ ಗೆ ಬಹಳ ಪ್ರಾಮುಖ್ಯತೆಯನ್ನು ನೀಡುವಂತಹ ನಟಿಯಾಗಿದ್ದಾರೆ. ಈ ನಟಿ ತನ್ನ ಜೀರೋ ಸೈಜ್ ನಿಂದಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡಿದ್ದರು. ಮದುವೆಯ ನಂತರ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಬಿಟ್ಟರೆ ಉಳಿದಂತೆ ಕರೀನಾ ತಮ್ಮ ಫಿಟ್ನೆಸ್ ನಲ್ಲಿ ಎಂದೂ ಸಹಾ ಕಾಂಪ್ರಮೈಸ್ ಮಾಡಿಕೊಂಡಿದ್ದಿಲ್ಲ. ಬಾಲಿವುಡ್ ನಲ್ಲಿ ಅಂದ ಹಾಗೂ ನಟನೆಯ ಮೂಲಕ ತನ್ನದೇ ಆದ ವಿಶೇಷವಾದ ವರ್ಚಸ್ಸು ಹಾಗೂ ಸ್ಥಾನವನ್ನು ಪಡೆದುಕೊಂಡಿದ್ದಾರೆ ಕರೀನಾ ಕಪೂರ್.

ಕರೀನಾ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದಿದ್ದರೂ ಅವರ ಜನಪ್ರಿಯತೆ ಮಾತ್ರ ಕುಗ್ಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಕರೀನಾ ಆಗಾಗ ವಿಶೇಷ ಫೋಟೋಗಳನ್ನು, ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಕರೀನಾ ತಮ್ಮ ಅಭಿಮಾನಿಗಳಿಗೆ ಖುಷಿಯನ್ನು ನೀಡುತ್ತಾರೆ. ತನ್ನ ಡಯಟ್ ಬಗ್ಗೆ ಬಜಳ ಕಾಳಜಿ ವಹಿಸುವ ಕರೀನಾ, ತನ್ನ ಮುಂದೆ ರುಚಿಯಾದ ಆಹಾರ ಕಾಣಿಸಿದರೆ ಮಾತ್ರ ಡಯಟ್ ಮರೆತು ಅದನ್ನು ತಿನ್ನಲು ಮುಂದಾಗಿ ಬಿಡುತ್ತಾರೆ.‌

ಇತ್ತೀಚಿಗಷ್ಟೇ ನಟಿ ಕರೀನಾ ತಮ್ಮ ಅಕ್ಕ ಕರಿಷ್ಮಾ ಹಾಗೂ ತಮ್ಮ ಮತ್ತು ಅಕ್ಕನ ಮಕ್ಕಳು ಎಲ್ಲರೂ ಮಾಲ್ಡೀವ್ಸ್ ನಲ್ಲಿ ರಜಾದಿನಗಳನ್ನು ಕಳೆದು ಮರಳಿದ್ದಾರೆ.‌ ರಜಾ ಮುಗಿಸಿ ಬಂದ ಮೇಲೆ ಕರೀನಾ ಮತ್ತೊಮ್ಮೆ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ. ಕರೀನಾ ಆಗಾಗ ತಾನೊಬ್ಬ ಆಹಾರ ಪ್ರಿಯೆ ( ಫುಡೀ ) ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರ ಫಿಟ್ನೆಸ್ ನೋಡಿದವರಿಗೆ ಕರೀನಾ ಸುಳ್ಳು ಹೇಳುತ್ತಾರೆ ಎನ್ನುವ ಭಾವನೆಯು ಸಹಾ ಬರುವುದು ಸಹಜವೇ ಆಗಿದೆ.

ಇನ್ನು ಈಗ ಕರೀನಾ ತಮ್ಮ ಅಭಿಮಾನಿಗಳು ಹಾಗೂ ಫಾಲೋಯರ್ಸ್ ಗಾಗಿ ಹೊಸ ವೀಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.‌ ಇದರಲ್ಲಿ ನಟಿ ಬಿರಿಯಾನಿ ನೋಡಿದ ಕೂಡಲೇ ಖುಷಿಯಾಗಿ ಅದನ್ನು ತಿನ್ನುತ್ತಿರುವ, ರುಚಿಯನ್ನು ಎಂಜಾಯ್ ಮಾಡುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡು, ಬಿರಿಯಾನಿ ರುಚಿ ಸೂಪರ್ ಎನ್ನುವ ಎಕ್ಸ್ ಪ್ರೆಶನ್ ಗಳನ್ನು ನೀಡಿದ್ದಾರೆ. ಅವರ ಜೊತೆ ಅವರ ಇಡೀ ಟೀಂ ಇದ್ದು ಎಲ್ಲರೂ ಬಿರಿಯಾನಿ ರುಚಿಗೆ ಮನ ಸೋತಿದ್ದಾರೆ.

ವೃತ್ತಿಯ ವಿಷಯಕ್ಕೆ ಬಂದರೆ ಕೆಲವೇ ದಿನಗಳ ಹಿಂದೆ ಕರೀನಾ ಅವರ ಹೊಸ ಪ್ರಾಜೆಕ್ಟ್ ಘೋಷಣೆ ಆಗಿದೆ. ಪ್ರಸ್ತುತ ಕರೀನಾ ನೆಟ್ ಫ್ಲಿಕ್ಸ್ ಗಾಗಿ ಹೊಸ ಸಿನಿಮಾ ಒಂದನ್ನು ಮಾಡುತ್ತಿದ್ದಾರೆ. ಇದಲ್ಲದೇ ಕರೀನಾ ಅಮೀರ್ ಖಾನ್ ಜೊತೆಗೆ ನಟಿಸಿರುವ ಬಹು ನಿರೀಕ್ಷಿತ ಲಾಲ್ ಸಿಂಗ್ ಚಡ್ಡಾ ಸಿನಿಮಾ ಇನ್ನೂ ಬಿಡುಗಡೆ ಆಗಬೇಕಿದೆ. ಈ ಸಿನಿಮಾ ಏಪ್ರಿಲ್ 14 ಕ್ಕೆ ತೆರೆಗೆ ಬರಲಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *