ತಾಯಿ ವಿಚಾರದಲ್ಲಿ ವೈದ್ಯರ ಮಾತೇ ಸುಳ್ಳಾಯ್ತು:ರವಿಚಂದ್ರನ್ ಅವರ ತಾಯಿಗೆ ಶ್ರೀ ರಕ್ಷೆಯಾದ ಔಷಧ ಯಾವುದು??

0 2

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕನ್ನಡ ಚಿತ್ರರಂಗ ಕಂಡಂತಹ ಅಸಲಿ ಕನಸುಗಾರ. ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಅದ್ದೂರಿತನವನ್ನು ತೆರೆದಿಟ್ಟು ಪರಭಾಷೆಗಳಿಗಿಂತ ಕನ್ನಡ ಸಿನಿಮಾಗಳು ಕಡಿಮೆಯೇನಿಲ್ಲ ಎಂದು ತೋರಿಸಿದವರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಅವರ ತಂದೆ ಮತ್ತು ತಾಯಿ ಎಂದು ಅಪಾರವಾದ ಪ್ರೀತಿ, ವಾತ್ಸಲ್ಯ ಗಳು ಇದೆ. ರವಿಚಂದ್ರನ್ ಅವರ ತಾಯಿ ಪಟ್ಟಾಮ್ಮಾಳ್ ಕಳೆದ ಹಲವು ವರ್ಷಗಳಿಂದ ಸಹಾ ಆರೋಗ್ಯ ಸಮಸ್ಯೆಯೊಂದ ಕಾಡುತ್ತಿದೆ. ಹತ್ತು ವರ್ಷಗಳ ಹಿಂದೆ ವೈದ್ಯರು ಅವರ ಆರೋಗ್ಯದ ಕುರಿತಾಗಿ ಒಂದು ಮಾತನ್ನು ಹೇಳಿದ್ದರು.

ಹೌದು ಹತ್ತು ವರ್ಷಗಳ ಹಿಂದೆ ರವಿಚಂದ್ರನ್ ಅವರಿಗೆ ಆಸ್ಪತ್ರೆಯಲ್ಲಿ ವೈದ್ಯರು ಅವರಿಗೆ ಒಂದು ನೋ ವಿ ನ ವಿಷಯವನ್ನು ಹೇಳಿದ್ದರು‌. ಅದೇನೆಂದರೆ ರವಿಚಂದ್ರನ್ ಅವರ ತಾಯಿ ಹೆಚ್ಚೆಂದರೆ ಇನ್ನು ಒಂದು ವರ್ಷ ಮಾತ್ರ ಬದುಕಿರುತ್ತಾರೆ ಎನ್ನುವ ಮಾತನ್ನು ಹೇಳಿದ್ದರಂತೆ. ಆದರೆ ಆ ಮಾತು ಹೇಳಿ ಈಗಾಗಲೇ ಹತ್ತು ವರ್ಷಗಳು ಕಳೆದಿವೆ. ಆದರೆ ದೇವರ ಕೃಪೆ ಎನ್ನುವಂತೆ ರವಿಚಂದ್ರನ್ ಅವರ ತಾಯಿ ಇಂದಿಗೂ ಅವರ ಜೊತೆಗೆ ಇದ್ದಾರೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.

ಒಂದು ವರ್ಷವಲ್ಲ ಹತ್ತು ವರ್ಷಗಳು ಕಳೆದಿದೆ. ಪಟ್ಟಮ್ಮಾಳ್ ಅವರು ತಮ್ಮ ಮಗ, ಸೊಸೆ ಹಾಗೂ ಮೊಮ್ಮಕ್ಕಳ ಜೊತೆಗೆ ಕಾಲವನ್ನು ಕಳೆಯುತ್ತಿದ್ದಾರೆ. ರವಿಚಂದ್ರನ್ ಅವರ ತಾಯಿಯವರಿಗೆ ಅಲ್ಜಮೈರ್ ಆಗಿದೆ. ಅವರು ಆಗಾಗ ಎಲ್ಲರನ್ನೂ ಸಹಾ ಮರೆತು ಬಿಡುತ್ತಾರೆ. ಆದರೆ ಯಾರನ್ನೇ ಮರೆತರೂ ಸಹಾ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಮರೆತಿಲ್ಲ ಎನ್ನುವ ಮಾತನ್ನು ರವಿಚಂದ್ರನ್ ಅವರು ಹೇಳಿರುವ ವಿಚಾರವನ್ನು ಮಾದ್ಯಮವೊಂದು ತಿಳಿಸಿದೆ.

ರವಿಚಂದ್ರನ್ ಅವರು ಇದೇ ವೇಳೆಯಲ್ಲಿ ತಮ್ಮ ತಾಯಿ ಇಂದಿನವರೆಗೂ ಜೀವಂತವಾಗಿ ತಮ್ಮ ಜೊತೆಯಲ್ಲಿ ಇದ್ದಾರೆ ಎಂದರೆ ಅದಕ್ಕೆ ಕಾರಣ ಅದು ನಮ್ಮ ಮನೆಯವರ ಪ್ರೀತಿ ಎಂದು ಹೇಳಿದ್ದಾರೆ. ನನ್ನ ಹೆಂಡತಿಯೇ ಅವರನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು ಎನ್ನುವ ಮಾತನ್ನು ಸಹಾ ಅವರು ಈ ವೇಳೆ ಹೇಳಿದ್ದಾರೆ. ಅವಳಿಗೆ ಹ್ಯಾಟ್ಸಾಫ್ ಹೇಳಬೇಕೆಂದು ಹೆಂಡತಿ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಆಡಿದ್ದಾರೆ.

ತಾಯಿಯ ಪರಿಸ್ಥಿತಿ ಬಗ್ಗೆ ಹೇಳುತ್ತಾ ಎಲ್ಲವನ್ನೂ ಹಾಸಿಗೆಯಲ್ಲೇ ಮಾಡಿಕೊಳ್ಳುವ ಅಮ್ಮನ ಕಾಳಜಿ ವಹಿಸಿ, ಅವರನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲ. ಆದರೆ ತಮ್ಮ ಹೆಂಡತಿ ಒಂದು ದಿನಕ್ಕೂ ಬೇಸರವನ್ನು ಪಟ್ಟುಕೊಳ್ಳದೇ ಅಮ್ಮನ ಆರೈಕೆಯನ್ನು ಮಾಡುವ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ವಯಸ್ಸಾದ ತಂದೆ ತಾಯಿಯನ್ನು ವಯಸ್ಸಾದ ಕೂಡಲೇ ವೃದ್ಧಾಶ್ರಮಕ್ಕೆ ಹೂಡುವ ಮಕ್ಕಳ ನಡುವೆ ರವಿಚಂದ್ರನ್ ನಿಜಕ್ಕೂ ಗ್ರೇಟ್ ಅನಿಸುತ್ತೆ.

Leave A Reply

Your email address will not be published.