ತಾಯಿ ಪ್ರೇಮಕ್ಕೆ ಸಾಟಿ ಯಾವುದೂ ಇಲ್ಲ: ಕರಡಿಯ ಬಳಿ ಹೋದ ಮಗುವನ್ನು ರಕ್ಷಿಸಲು ಈ ತಾಯಿ ಮಾಡಿದ್ದೇನು? ವೈರಲ್ ವೀಡಿಯೋ..

Entertainment Featured-Articles News Viral Video

ತಾಯಿ ಪ್ರೇಮಕ್ಕೆ ಸರಿಸಾಟಿ ಈ ಜಗತ್ತಿನಲ್ಲಿ ಇನ್ನೊಂದಿಲ್ಲ‌. ತಾಯಿ ತನ್ನ ಮಕ್ಕಳ ಮೇಲೆ ತೋರಿಸುವ ಪ್ರೀತಿ ಹಾಗೂ ಮಕ್ಕಳ ಕ್ಷೇಮಕ್ಕಾಗಿ ಪರಿತಪಿಸುವ ಪರಿಯನ್ನು ಎಷ್ಟು ಹೊಗಳಿದರೂ ಸಾಲದು. ಈಗಾಗಲೇ ನಾವು ಅನೇಕ ಬಾರಿ ತಾಯಿ ಪ್ರೇಮವನ್ನು ಬಿಂಬಿಸುವ ಘಟನೆಗಳ ಅನೇಕ ವರದಿಗಳನ್ನು, ಸುದ್ದಿಗಳನ್ನು ವಿಶ್ವದ ನಾನಾ ಮೂಲೆಗಳಿಂದ ಪಡೆದುಕೊಂಡಿದ್ದೇವೆ, ನೋಡಿದ್ದೇವೆ. ಈಗ ಮತ್ತೊಮ್ಮೆ ಅಂತಹುದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದು, ಮೆಚ್ಚುಗೆ ಪಡೆದಿದೆ.

ತನಗೆ ಬಹಳ ಇಷ್ಟವಾದ ಪ್ರಾಣಿಯನ್ನು ಕಂಡ ಮಗುವೊಂದು, ಆ ಪ್ರಾಣಿಯಿಂದ ತನಗೆ ತೊಂದರೆ ಆಗಬಹುದು ಎನ್ನುವ ಸುಳಿವು ಕೂಡಾ ಇಲ್ಲದೇ ಆ ಪ್ರಾಣಿಯ ಬಳಿಗೆ ಮಗುವೊಂದು ಖುಷಿಯಿಂದ ಹೋಗಿದೆ. ಅದನ್ನು ದೂರದಿಂದ ಗಮನಿಸಿದ ತಾಯಿ ಒಂದು ಕ್ಷಣ ಸಹಾ ತಡ ಮಾಡದೇ ಓಡಿ ಬಂದು ತನ್ನ ಮುದ್ದು ಕಂದಮ್ಮನನ್ನು ಕಾಪಾಡಿಕೊಂಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆ ಅಮೆರಿಕಾದ ವಾಷಿಂಗ್ಟನ್ ನಲ್ಲಿ ನಡೆದಿದ್ದು ಎನ್ನಲಾಗಿದೆ.

ವಾಷಿಂಗ್ಟನ್ ನಲ್ಲಿ ಒಂದು ಮನೆಯ ಹಿಂದಿನ ಗೋಡೆಯ ಮೇಲಿಂದ ಧುಮುಕಿ ಬಂದ ಕರಡಿಯೊಂದು, ಮನೆಯೊಳಗೆ ನುಗ್ಗುವ ಪ್ರಯತ್ನವನ್ನು ಮಾಡಿದೆ. ಈ ವೇಳೆ ಕರಡಿಯನ್ನು ನೋಡಿದ ಮಗು ಖುಷಿಯಿಂದ ಅದರ ಕಡೆಗೆ ಓಡಿದೆ. ಟೆಡಿ ಬೇರ್ ಗಳೊಡನೆ ಆಡುವ ಮಕ್ಕಳಿಗೆ ನಿಜವಾದ ಕರಡಿ ಕೂಡಾ ಆಟಿಕೆಯಂತೆ ಕಾಣುವುದು ಸಹಜವೇ. ಈ ಕಂದನು ಸಹಾ ಕರಡಿಯನ್ನು ಅಪ್ಪಿಕೊಳ್ಳಲು ಅದರ ಬಳಿಗೆ ಓಡಿದೆ. ಆದರೆ ಅದನ್ನು ಗಮನಿಸಿದ ಮಗುವಿನ ತಾಯಿ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ.

ಆಕೆ ತಡಮಾಡದೇ ಓಡಿ ಹೋಗಿ ಮಗುವನ್ನು ಎತ್ತಿಕೊಂಡು ಮನೆಯೊಳಗೆ ಓಡಿ ಬಂದು ಡೋರ್ ಲಾಕ್ ಮಾಡಿಕೊಂಡಿದ್ದಾರೆ. ಈ ಇಡೀ ಘಟನೆಯು ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ ದಲ್ಲಿ ರೆಕಾರ್ಡ್ ಆಗಿದೆ. ಮಿಲಿಯನ್ ಗಟ್ಟಲೆ ನೆಟ್ಟಿಗರು ಈ ವೀಡಿಯೋವನ್ನು ನೋಡಿದ್ದು, ಕಾಮೆಂಟ್ ಮಾಡುತ್ತಾ ರಿಯಲ್ ಹೀರೋ ಮಾಮ್ ಎಂದು ಆ ತಾಯಿಯನ್ನು ಹಾಡಿ ಹೊಗಳುತ್ತಿದ್ದಾರೆ.‌ ಅನಂತರ ಸಂದರ್ಶನವೊಂದರಲ್ಲಿ ಆ ತಾಯಿ ತನ್ನ ‌ಮಗಳಿಗೆ ಕರಡಿ ಎಂದರೆ ತುಂಬಾ ಇಷ್ಟ ಎನ್ನುವ ಮಾತನ್ನು ಹೇಳಿದ್ದಾರೆ.

Leave a Reply

Your email address will not be published.