ತಾಯಿ ಆಗ್ತಿರೋ ಖುಷಿಗೆ ಮತ್ತೊಮ್ಮೆ ಈ ನಟಿ ಮಾಡಿದ ಕೆಲಸಕ್ಕೆ ಅಭಿಮಾನಿಗಳಿಂದ ಹರಿದು ಬರ್ತಿದೆ ಮೆಚ್ಚುಗೆಗಳು

Entertainment Featured-Articles Movies News

ಬಾಲಿವುಡ್ ನಟಿ ಬಿಪಾಶ ಬಸು ಮೊದಲನೇ ಮಗುವಿನ ನಿರೀಕ್ಷೆಯಲ್ಲಿ ಇದ್ದು, ಅವರು ತಾಯಿಯಾಗುತ್ತಿರುವ ಖುಷಿಯನ್ನು ಬಹಳ ಸಂಭ್ರಮಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಪತಿಯೊಡನೆ ಕೆಲವು ಆಕರ್ಷಕ ಫೋಟೋ ಗಳನ್ನು ಶೇರ್ ಮಾಡಿಕೊಂಡು ಅಭಿಮಾನಿಗಳಿಗ ತಾವು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ನೀಡಿದ್ದರು. ಇನ್ನು ಸೆಲೆಬ್ರಿಟಿಗಳು ಇತ್ತೀಚಿನ ದಿನಗಳಲ್ಲಿ ತಮ್ಮ ಗರ್ಭಾವಸ್ಥೆಯ ಪ್ರತಿಯೊಂದು ಕ್ಷಣವನ್ನು ಸಹಾ ಸುಂದರವನ್ನಾಗಿ ಮಾಡಲು, ಆ ಸ್ಮರಣೆ ಗಳನ್ನು ಫೋಟೋ ಮತ್ತು ವೀಡಿಯೋ ಗಳಲ್ಲಿ ಸೆರೆ ಹಿಡಿಯಲು ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ನಟಿ ಬಿಪಾಶ ಬಸು ಸಹಾ ಈಗ ಅವರಿಗಿಂತ ಹೊರತಾಗಿಯೇನು ಇಲ್ಲ. ನಟಿಯು ಈಗ ಮತ್ತೊಂದು ಬೇಬಿ ಬಂಪ್ ನ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ಕಳೆದ ಬಾರಿ ಬಿಳಿಯ ಬಣ್ಣದ ಉಡುಗೆಯಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದ ನಟಿಯು ಈ ಬಾರಿ ಕಪ್ಪು ಬಣ್ಣದ ವಸ್ತ್ರ ತೊಟ್ಟು ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ. ನಟಿ ಬಿಪಾಶ ಅವರ ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ಇರುವ ಸುಂದರ ಫೋಟೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಬಿಪಾಶಾ ಮತ್ತು ಕರಣ್ ಸಿಂಗ್ ಗ್ರೋವರ್ ಪರಸ್ಪರ ಪ್ರೀತಿಸಿ ಮದುವೆಯಾದ ಜೋಡಿ. 2016 ರಲ್ಲಿ ಇವರು ಹಸೆ ಮಣೆ ಏರಿ ಸತಿ ಪತಿಯಾಗಿದ್ದಾರೆ. ಕರಣ್ ಅವರಿಗೆ ಬಿಪಾಶ ಎರಡನೇ ಪತ್ನಿ. ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡಿದ ನಂತರ ಬಿಪಾಶ ಅವರ ಬದುಕಲ್ಲಿ ಬಂದಿದ್ದಾರೆ.

ಬಿಪಾಶ ಬ್ಲಾಕ್ ಕಲರ್ ಟ್ರಾನ್ಸ್ಪರೆಂಟ್ ಉಡುಗೆ ತೊಟ್ಟು ಬಹಳ ಬೋಲ್ಡಾಗಿ ತಮ್ಮ ಬೇಬಿ ಬಂಪ್ ನ ಹೊಸ ಫೋಟೋ‌ ಶೂಟ್ ಮಾಡಿಸಿದ್ದಾರೆ. ಬೇಬಿ ಬಂಪ್ ನಲ್ಲಿ ನಟಿಯ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಕಾಮೆಂಟ್ ಮಾಡಿ ನಟಿಗೆ ಶುಭ ಹಾರೈಸುತ್ತಿದ್ದಾರೆ. ನಟಿ ಬಿಪಾಶ ಬಸು ತಮ್ಮ ಪೋಸ್ಟ್‌ ಶೇರ್ ಮಾಡಿಕೊಂಡ ನಂತರ ಅವರ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಮೆಚ್ಚುಗೆಗಳನ್ನು ನೀಡುತ್ತಾ ಸಾಗಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಹಳ ಸಂಭ್ರಮದಿಂದ ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ಗಳನ್ನು ನೀಡಿದ್ದಾರೆ ನಟಿ ಬಿಪಾಶಾ ಬಸು.

Leave a Reply

Your email address will not be published.