ತಾಯಿಯಾಗಲು ನಯನತಾರಾ ನಿರ್ಧಾರ: ಆದ್ರೆ ಮಗುವಿಗೆ ಜನ್ಮ ನೀಡೋಕೆ ಮಾತ್ರ ಬೇಕಂತೆ ಬಾಡಿಗೆ ತಾಯಿ

Entertainment Featured-Articles News

ದಕ್ಷಿಣ ಸಿನಿಮಾ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ನಟಿ ನಯನತಾರಾ. ದಕ್ಷಿಣ ಸಿನಿಮಾ ರಂಗದಲ್ಲಿ ಬಹುಬೇಡಿಕೆಯನ್ನು ಉಳಿಸಿಕೊಂಡಿರುವ ಈ ನಟಿ ಸಾಲು ಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ದಿನದಿಂದ ದಿನಕ್ಕೆ ಮತ್ತಷ್ಟು ಹೆಸರನ್ನು ಪಡೆದುಕೊಂಡು ಮಿಂಚುತ್ತಿದ್ದಾರೆ. ನಯನತಾರಾ ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳ ಬಳಗವೇ ಇದೆ. ನಯನತಾರಾ ಸಿನಿಮಾ ವಿಷಯಗಳಿಗೆ ಮಾತ್ರವೇ ಅಲ್ಲದೇ ಆಗಾಗ ಅವರ ವೈಯಕ್ತಿಕ ಜೀವನದ ವಿಷವಾಗಿಯೂ ಸುದ್ದಿಯಾಗುತ್ತಲೇ ಇರುತ್ತಾರೆ.

ದಕ್ಷಿಣದ ನಾಲ್ಕು ಭಾಷೆಗಳ ಸಿನಿಮಾಗಳ ಸ್ಟಾರ್ ಗಳ ಜೊತೆಗೆ ನಟಿಸಿರುವ ನಯನ ತಾರಾ ಹೆಚ್ಚು ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ.‌ ನಟಿ ನಯನತಾರಾ ಅವರ ಸಿನಿಮಾ ಜೀವನವು ಯಶಸ್ಸಿನ ಉತ್ತುಂಗದ ಕಡೆಗೆ ಸಾಗಿರಬಹುದು. ಆದರೆ ಅವರ ವೈಯಕ್ತಿಕ ಜೀವನದಲ್ಲಿ ಮಾತ್ರ ಅನೇಕ ಏಳು ಬೀಳುಗಳು ಕಂಡಿವೆ. ನಯನ ತಾರಾ ಹೆಸರು ಸಿನಿ ರಂಗದಲ್ಲಿ ಈ ಹಿಂದೆ ತಮಿಳು ನಟ ಶಿಂಬು, ಅನಂತರ ನಟ, ನಿರ್ಮಾಪಕ, ನಿರ್ದೇಶಕ ಪ್ರಭುದೇವ ಜೊತೆಗೆ ತಳಕು ಹಾಕಿಕೊಂಡಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ನಯನತಾರಾ ದೂರಾದರು.

ನಯನತಾರಾ ಪ್ರಭುದೇವ ಅವರಿಂದ ದೂರಾದ ಮೇಲೆ ಸಿನಿ ರಂಗದಲ್ಲಿ ತಮ್ಮ ಕಮ್ ಬ್ಯಾಕ್ ಮಾಡಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತನ್ನದಾಗಿಸಿಕೊಂಡು ಸ್ಟಾರ್ ನಟಿಯಾಗಿ ಮಿಂಚುತ್ತಿದ್ದು, ನಟಿ ಸಿನಿಮಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ಅಲ್ಲದೇ ಇವರಿಗೆ ಈಗಾಗಲೇ ಮದುವೆ ಕೂಡಾ ಆಗಿದೆ ಎನ್ನುವ ಸುದ್ದಿಗಳು ಸಹಾ ಆಗಾಗ ಹರಿದಾಡುತ್ತಲೇ ಇದ್ದರೂ, ಈ ವಿವಾಹದ ಬಗ್ಗೆ ಅಧಿಕೃತವಾಗಿ ನಟಿ ನಯನತಾರಾ ಅಥವಾ ವಿಘ್ನೇಶ್ ಶಿವನ್ ಯಾವುದೇ ಘೋಷಣೆ ಮಾಡಿಲ್ಲ.

ಈಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮಾಡಿದ್ದಾರೆನ್ನಲಾಗುತ್ತಿರುವ ಒಂದು ಹೊಸ ನಿರ್ಧಾರದ ಕುರಿತಾಗಿ ಮಾದ್ಯಮಗಳಲ್ಲಿ ಸುದ್ದಿಯಾಗಿದ್ದು, ಎಲ್ಲರ ಗಮನವನ್ನು ಸೆಳೆದಿದೆ. ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2021 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ನಂತರ ಇತ್ತೀಚಿಗೆ ಈ ಜೋಡಿ ಕಲಿಗಂಬಾಲ್ ದೇಗುಲದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ವೀಡಿಯೋ ವೈರಲ್ ಆದಾಗ, ಇಬ್ಬರೂ ಸೀಕ್ರೆಟ್ ಆಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ಹರಡಿವೆ.

ಈಗ ಇವೆಲ್ಲವುಗಳ ಬೆನ್ನಲ್ಲೇ ನಯನತಾರಾ ಮತ್ತು ವಿಘ್ನೇಶ್ ಜೋಡಿಯು ಮಗುವೊಂದನ್ನು ಪಡೆಯಲು ನಿರ್ಧಾರವನ್ನು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಜೋಡಿಯು ಇದಕ್ಕಾಗಿ ಬಾಡಿಗೆ ತಾಯಿಯನ್ನು ಆಶ್ರಯಿಸಲಿದ್ದಾರೆ ಎನ್ನಲಾಗಿದೆ. ಹೌದು ನಯನತಾರಾ ಅವರು ಸರೋಗಸಿ ಮೂಲಕ ಮಗುವನ್ನು ಪಡೆದುಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ. ನಯನತಾರಾ ತಾಯಿಯಾಗಲು ಬಯಸಿದ್ದು, ಬಾಡಿಗೆ ತಾಯಿ ಮೂಲಕ ಮಗು ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿವೆ.

Leave a Reply

Your email address will not be published.