ತಾಯಿಗಿದ್ದ ಒಳ್ಳೆ ಗುಣ ಮಗಳಿಗೆ ಏಕಿಲ್ಲ? ನಟಿ ಶ್ರೀದೇವಿ ಪುತ್ರಿ ಜಾನ್ವಿ ಮೇಲೆ ನೆಟ್ಟಿಗರು ಸಿಟ್ಟಾಗಿದ್ದು ಏಕೆ??

Written by Soma Shekar

Published on:

---Join Our Channel---

ಸ್ಟಾರ್ ನಟ ಅಥವಾ ನಟಿಯರ ಮಕ್ಕಳಿಗೆ ಸಿನಿಮಾ ರಂಗಕ್ಕೆ ಎಂಟ್ರಿ ನೀಡುವುದು ಖಂಡಿತ ಕಷ್ಟವಾದ ಕೆಲಸವೇನಲ್ಲ. ಅದರಲ್ಲೂ ಸೂಪರ್ ಸ್ಟಾರ್ ಎನಿಸಿಕೊಂಡವರ ಮಕ್ಕಳಾದರೆ, ಸ್ಟಾರ್ ಗಳ ಅಭಿಮಾನಿಗಳು ಸ್ಟಾರ್ ಗಳ ಮಕ್ಕಳನ್ನು ಸಹಾ ಅಭಿಮಾನಿಸಿ, ಅವರನ್ನು ಸಹಾವಮ ಮೂರು ಮತ್ತೊಂದು ಸಿನಿಮಾ ಮಾಡುವ ವೇಳೆಗೆ ದೊಡ್ಡ ಸ್ಟಾರ್ ಗಳನ್ನಾಗಿ ಮಾಡಿ ಬಿಡುತ್ತಾರೆ. ಹೀಗೆ ತಂದೆ ತಾಯಿಯರ ಜನಪ್ರಿಯತೆಯ ಫಲ ಎನ್ನುವಂತೆ ಸ್ಟಾರ್ ಗಳಾಗುವ ಸ್ಟಾರ್ ಕಿಡ್ ಗಳು ಕೆಲವೊಮ್ಮೆ ತಮಗೆ ಸಿಕ್ಕ ಯಶಸ್ಸಿನ ಗತ್ತಿನಿಂದ ಗರ್ವ ಪಡುವುದು ಅವರ ವರ್ತನೆಯಲ್ಲೇ ತಿಳಿದು ಬಿಡುತ್ತದೆ.

ಇದೀಗ ಇಂತಹುದೇ ಒಂದು ವರ್ತನೆಯನ್ನು ಹಿರಿಯ ನಟಿ, ದಿವಂಗತ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಸಹಾ ಮಾಡಿದ್ದಾರೆ ಎಂದು ನೆಟ್ಟಿಗರು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ನಟಿಯ ಇಂತಹುದೊಂದು ವರ್ತನೆ ಜನರ ಬೇಸರಕ್ಕೆ ಕಾರಣವಾಗಿದೆ. ಇತ್ತೀಚಿಗೆ ಜಾನ್ವಿ ಅಭಿನಯದ ಗುಡ್ ಲಕ್ ಜೆರ್ರಿ ಸಿನಿಮಾ ಓಟಿಟಿಯಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದ ಪ್ರಚಾರದ ಹಿನ್ನೆಲೆಯಲ್ಲಿ ನಟಿ ಜಾನ್ವಿ ಕಪೂರ್ ಮಾದ್ಯಮಗಳಿಗೆ ಸಂದರ್ಶನವನ್ನು ನೀಡಿದ್ದರು.

ಸಂದರ್ಶನದ ವೇಳೆ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗಳಿಗೆ ಜಾನ್ವಿ ಸರಿಯಾದ ಗಮನವನ್ನು ನೀಡಿಲ್ಲ. ಇದೇ ವಿಚಾರಕ್ಕೆ ಈಗ ನಟಿ ಟೀಕೆಗೆ ಗುರಿಯಾಗಿದ್ದಾರೆ. ಪತ್ರಕರ್ತೆಯು ಪದೇ ಪದೇ ಪ್ರಶ್ನೆ ಕೇಳಿದರೂ ಸಹಾ ಜಾನ್ವಿ ಉತ್ತರ ನೀಡದೇ ತಮ್ಮದೇ ಆದ ಲೋಕದಲ್ಲಿ ಕಳೆದು ಹೋದಂತಹ ವರ್ತನೆಯನ್ನು ಪ್ರದರ್ಶನವನ್ನು ಮಾಡಿದ್ದು ಇದು ಜನರ ಸಿಟ್ಟಿಗೆ ಕಾರಣವಾಗಿದೆ. ಜಾನ್ವಿ ಅವರ ತಾಯಿ ಶ್ರೀದೇವಿ ಭಾರತೀಯ ಸಿನಿಮಾ ರಂಗ ಕಂಡಂತಹ ಅದ್ಭುತ ನಟಿ. ಜಾನ್ವಿ ಕಪೂರ್ ಶ್ರೀ ದೇವಿ ಅವರ ಮಗಳು ಎನ್ನುವ ಕಾರಣಕ್ಕೆ ಜನರಿಂದ ಹೆಚ್ಚಿನ ಗೌರವ ಸಿಕ್ಕಿದೆ ಎನ್ನುವುದು ವಾಸ್ತವ.

ನಟಿ ಶ್ರೀದೇವಿ ಅವರು ದಕ್ಷಿಣ ಸಿನಿಮಾ ರಂಗದಿಂದ ಹಿಡಿದು ಬಾಲಿವುಡ್ ವರೆಗೂ ಸೂಪರ್ ಸ್ಟಾರ್ ಆಗಿ ಮೆರೆದ ನಟಿ, ಆದರೆ ಅವರು ಪತ್ರಕರ್ತರ ಜೊತೆ ಎಂದಿಗೂ ಈ ರೀತಿ ನಡೆದುಕೊಂಡಿರಲಿಲ್ಲ. ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಿದ್ದ ಕಾಲದಲ್ಲೂ ಸಹಾ ಅವರು ಇಂತಹ ಒಂದು ಉದ್ದಟತನ ಮೆರೆದವರಲ್ಲ. ಆದರೆ ಅವರ ಮಗಳು ಜಾನ್ವಿ ಯಾವುದೇ ಸೂಪರ್ ಹಿಟ್ ಸಿನಿಮಾ ನೀಡದೇ ಹೋದರೂ,‌ಮಾಡಿರುವ ಕೆಲವೇ ಸಿನಿಮಾಗಳಿಂದ ಇಂತಹ ಅತಿರೇಕ ತೋರುವುದು ಸರಿಯಲ್ಲ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.

Leave a Comment