ತಾಯಿಗಿಂತ ಹೆಚ್ಚು ಕೇರ್ ಮಾಡಿದ್ದೇನೆಂದು, ರಾಕೇಶ್ ಗೆ ವಿಶೇಷ ಉಡುಗೊರೆ ನೀಡಿ, ಮತ್ತೊಬ್ಬರಲ್ಲಿ ಕ್ಷಮೆ ಕೇಳಿದ ಸೋನು

0 1

ಬಿಗ್ ಬಾಸ್ ಕನ್ನಡ ಓಟಿಟಿಯಲ್ಲಿ ಸೋನು ಶ್ರೀನಿವಾಸಗೌಡ ಹೆಚ್ಚು ಆತ್ಮೀಯ ವಾಗಿರುವುದು ರಾಕೇಶ್ ಆಡಿಗ ಜೊತೆಯಲ್ಲಿ ಮಾತ್ರ. ಅಲ್ಲದೇ ಸೋನು ರಾಕೇಶ್ ಬಗ್ಗೆ ಹೆಚ್ಚು ಪೊಸೆಸಿವ್ ಆಗಿರುವುದು ಕೂಡಾ ಈಗಾಗಲೇ ಸಾಕಷ್ಟು ಬಾರಿ ಎಲ್ಲರಿಗೂ ತಿಳಿದಿದೆ. ರಾಕೇಶ್ ಏನಾದರೂ ಹೇಳಿದರೆ ಸೋನು ಸಹಿಸಿಕೊಳ್ಳುವುದಿಲ್ಲ. ಆದರೂ ಇಬ್ಬರ ನಡುವೆ ಒಂದು ಆತ್ಮೀಯತೆ ಬೆಳೆದಿದೆ. ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್ ಈಗ ಕೊನೆಯ ಹಂತವನ್ನು ತಲುಪಿದ್ದು, ಇನ್ನೆರಡು ದಿನಗಳಲ್ಲಿ ಬಿಗ್ ಬಾಸ್ ಓಟಿಟಿ ಮೊದಲನೇ ಸೀಸನ್ ಮುಕ್ತಾಯವಾಗಲಿದೆ. ಕೊನೆಯ ವಾರದಲ್ಲಿ ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್ ನಲ್ಲಿ ಸೋನು ರಾಕೇಶ್ ಗೆ ಬಹಳ ವಿಶೇಷ ಎನಿಸುವಂತಹ ಉಡುಗೊರೆಯನ್ನು ನೀಡಿದ್ದಾರೆ.‌

ಬಿಗ್ ಬಾಸ್ ಮನೆಯಿಂದ ಮೊದಲನೇ ವಾರದಲ್ಲಿ ಕಾಲು ನೋವಿನ ಕಾರಣದಿಂದ ಹೊರಗೆ ಹೋಗಿದ್ದ ಲೋಕೇಶ್ ಅವರು ಫಿನಾಲೆಗೆ ಮುನ್ನ ಮತ್ತೊಮ್ಮೆ ಮನೆಗೆ ಎಂಟ್ರಿ ನೀಡಿದ್ದಾರೆ. ಅವರ ಎಂಟ್ರಿಯ ಜೊತೆಗೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಹೊಸ ಟಾಸ್ಕ್ ಕೂಡಾ ನೀಡಿದ್ದಾರೆ. ಈ ಟಾಸ್ಕ್ ನ ಪ್ರಕಾರ ಮನೆಯ ಸದಸ್ಯರು ತಮ್ಮ ಬಿಗ್ ಬಾಸ್ ನ ಜರ್ನಿಯಲ್ಲಿ, ಈ ಮನೆಯಲ್ಲಿ ತಮ್ಮ ಜೊತೆಗಿದ್ದ ಅನ್ಯ ಸದಸ್ಯರಲ್ಲಿ ಒಬ್ಬರಿಗೆ ಧನ್ಯವಾದ, ಒಬ್ಬರಿಗೆ ಕ್ಷಮಾಪಣೆ ಹಾಗೂ ಒಬ್ಬರಿಗೆ ಉಡುಗೊರೆಯನ್ನು ನೀಡುವ ಅವಕಾಶವನ್ನು ನೀಡಿದರು. ಈ ವೇಳೆ ಸೋನು ಶ್ರೀನಿವಾಸಗೌಡ ರಾಕೇಶ್ ಅಡಿಗ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ತಾಯಿ-ಮಗುವನ್ನು ಎಷ್ಟು ಕೇರ್ ಮಾಡುತ್ತಾಳೋ, ಅದಕ್ಕಿಂತ ಜಾಸ್ತಿ ಕೇರ್ ನಾನು ರಾಕೇಶ್ ಗೆ ಕೊಟ್ಟಿದ್ದೇನೆ. ನಮ್ಮಿಬ್ಬರದು ಸ್ಪೆಷಲ್ ಕನೆಕ್ಷನ್ ಮತ್ತು ಬಾಂಡಿಂಗ್. ನನ್ನ ಜೀವನದಲ್ಲಿ ರಾಕೇಶ್ ಬೇಜಾನ್ ಕಲಿಸಿಕೊಟ್ಟಿದ್ದಾನೆ. ನನ್ನ ಲೈಫ್ ನಲ್ಲಿ ನಾನು ಗಿಫ್ಟ್ ಕೊಟ್ಟರೆ ಅದು ನನ್ನ ಸ್ವಂತ ದುಡ್ಡಿಂದ ಆಗಿರಬೇಕು ಎಂದು ನನಗೆ ಅನಿಸೋದು. ನಾನು ನನ್ನ ಸ್ವಂತ ದುಡ್ಡಿನಿಂದ ತೆಗೆದುಕೊಂಡಿದ್ದು ಈ ಗೋಲ್ಡ್ ಪೆಂಡೆಂಟ್. ಇದನ್ನು ನಾನು ರಾಕೇಶ್ ಗೆ ಕೊಡುತ್ತಿದ್ದೇನೆ. ಇದು ರೌಂಡ್ ಆಗಿದೆ, ಭೂಮಿ ಕೂಡಾ ರೌಂಡ್ ಆಗಿದೆ. ಎಲ್ಲೇ ಹೋದರು ನಾನು ಅವನ ಹಿಂದೆ ಸುತ್ತುತ್ತಲೇ ಇರುತ್ತೇನೆ. ದಯವಿಟ್ಟು ಇದನ್ನು ಹಾಕಿಕೊಂಡು ನನ್ನನ್ನು ಯಾವಾಗಲೂ ನೆನಪಿಸಿಕೋ ಎಂದು ಹೇಳುತ್ತಾ ಸೋನು ಶ್ರೀನಿವಾಸಗೌಡ ರಾಕೇಶ್ ಗೆ ಬಂಗಾರದ ಪೆಂಡೆಂಟ್ ಗಿಫ್ಟ್ ನೀಡಿದ್ದಾರೆ.

ಇನ್ನು ಸೋನು ಮನೆಯ ಯಾವ ಸದಸ್ಯರಿಗೆ ಧನ್ಯವಾದ ಮತ್ತು ಕ್ಷಮೆ ಕೇಳಿದರು ಎನ್ನುವ ವಿಚಾರಕ್ಕೆ ಬರುವುದಾದರೆ, ನನ್ನಿಂದ ಬಹಳ ಜನರಿಗೆ ನೋವಾಗಿದೆ. ನನ್ನ ದಡ್ಡತನದಿಂದ ಏನೇನೋ ಮಾತನಾಡುತ್ತೇನೆ. ನನಗೆ ಗೊತ್ತಿಲ್ಲದೇ ನಾನು ಗುರೂಜಿ ಒಂದು ಮಾತು ಹೇಳಿದ್ದೆ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಿಮ್ಮ ಮಗಳೆಂದು ಕೊಂಡರು ನನ್ನ ಕ್ಷಮಿಸಿಬಿಡಿ ಎಂದು ಆರ್ಯವರ್ಧನ ಗುರೂಜಿಯವರ ಬಳಿ ಕ್ಷಮಾಪಣೆ ಕೇಳಿದ್ದಾರೆ ಸೋನು. ನಂತರ, ಒಂಟಿತನ ಕಾಡುತ್ತದೆ ಅಂತಿರ್ತಾರೆ, ಆದರೂ ನನ್ನ ಜೊತೆ ಮಾತನಾಡುತ್ತಾರೆ. ಇಲ್ಲಿ ಅವರು ನನ್ನ ತಾಯಿಯ ಸ್ಥಾನವನ್ನು ತುಂಬಿದ್ದಾರೆ. ಹೀಗಾಗಿ ಸೋಮಣ್ಣಗೆ ಥಾಂಕ್ಸ್ ಎಂದು ಸೋಮಣ್ಣ ಮಾಚಿಮಾಡ ಅವರಿಗೆ ಸೋನು ಧನ್ಯವಾದಗಳನ್ನು ಹೇಳಿದ್ದಾರೆ.

Leave A Reply

Your email address will not be published.