ತಾನು RRR ಸಿನಿಮಾ ಪೋಸ್ಟ್ ಡಿಲೀಟ್ ಮಾಡಿದ್ದಕ್ಕೆ ಕೊನೆಗೂ ಸ್ಪಷ್ಟನೆ ಕೊಟ್ಟ ಆಲಿಯಾ ಭಟ್!!

Entertainment Featured-Articles News

ತ್ರಿಬಲ್ ಆರ್ ಸಿನಿಮಾ ಬಿಡುಗಡೆಯ ನಂತರ ಸಿನಿಮಾದ ಯಶಸ್ಸು, ಸಿನಿಮಾದ ಗಳಿಕೆಯ ಬಗ್ಗೆ ಒಂದೆಡೆ ಸುದ್ದಿಯಾಗುವಾಗಲೇ, ಇನ್ನೊಂದು ಕಡೆ ಈ ಸಿನಿಮಾ ವಿಚಾರದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್ ಅಸಮಾಧಾನಗೊಂಡಿರುವ ಹಾಗೂ ರಾಜಮೌಳಿ ಅವರ ಬಗ್ಗೆ ಆಲಿಯಾ ಭಟ್ ಸಿ ಟ್ಟಾ ಗಿದ್ದಾರೆ ಎನ್ನುವ ಸುದ್ದಿಯೊಂದು ನಿನ್ನೆ, ಮೊನ್ನೆಯಿಂದ ಸಾಕಷ್ಟು ಸದ್ದನ್ನು ಮಾಡುತ್ತಿದೆ. ಆಲಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಆರ್ ಆರ್ ಆರ್ ಸಿನಿಮಾದ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದನ್ನು ಕಂಡು ಇಂತಹ ಅನುಮಾನಗಳು ಸಹಜವಾಗಿಯೇ ಹುಟ್ಟಿಕೊಂಡಿದ್ದವು.

ಅದು ಸಾಲದೆಂಬಂತೆ ತ್ರಿಬಲ್ ಆರ್ ಸಿನಿಮಾದ ಬಿಡುಗಡೆಗೆ ಮುನ್ನ ನಡೆದಂತಹ ಕೆಲವು ಭರ್ಜರಿ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಸಹಾ ಆಲಿಯಾ ಗೈರು ಹಾಜರಿ ಇದಕ್ಕೆ ಪುಷ್ಠಿ ನೀಡುವಂತಾಗಿತ್ತು. ಸಿನಿಮಾದಲ್ಲಿ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ರಾಮ್ ಚರಣ್ ಹಾಗೂ ಎನ್ ಟಿ ಆರ್ ಗೆ ದಕ್ಕಿದ್ದು, ಆಲಿಯಾ ತಮ್ಮ ಸ್ಕ್ರೀನ್ ಟೈಮ್ ಹಾಗೂ ಪಾತ್ರದ ಬಗ್ಗೆ ಅಪ್ಸೆಟ್ ಆಗಿದ್ದಾರೆನ್ನುವ ಸುದ್ದಿಗಳು ಹರಿದಾಡಿದ್ದವು. ಇದಾದ ನಂತರ ಆಲಿಯಾ ಇದಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡುತ್ತಾ, ಹರಿದಾಡಿರುವ ಸುದ್ದಿಗಳಿಗೆ ಸ್ಪಷ್ಟನೆ ಮಾಡಿದ್ದಾರೆ.

ಆಲಿಯಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ವಿವರಣೆಯನ್ನು ನೀಡುವ ಮೂಲಕ ತಾನು ಸೋಶಿಯಲ್ ಮೀಡಿಯಾ ಖಾತೆಯಿಂದ ಆರ್ ಆರ್ ಆರ್ ಸಿನಿಮಾದ ಪೋಸ್ಟ್ ಗಳನ್ನು ಡಿಲೀಟ್ ಮಾಡಿದ್ದೇಕೆ ಎನ್ನುವುದಕ್ಕೆ ಕಾರಣವನ್ನು ವಿವರಿಸಿದ್ದಾರೆ. ಅಲ್ಲದೇ ಆಲಿಯಾ ಎದ್ದಿರುವ ಸುದ್ದಿಗಳಲ್ಲಿ ಯಾವುದೇ ಸತ್ಯ ಇಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಹಾಗಾದರೆ ಆಲಿಯಾ ಭಟ್ ತಮ್ಮ ಪೋಸ್ಟ್ ನಲ್ಲಿ ನೀಡಿದ ಸ್ಪಷ್ಟನೆ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಆಲಿಯಾ ತಮ್ಮ ಪೋಸ್ಟ್ ನಲ್ಲಿ, ನಾನು ಆರ್ ಆರ್ ಆರ್ ಸಿನಿಮಾ ತಂಡದಿಂದ ಬೇಸರಗೊಂಡಿದ್ದೇನೆ ಎಂದು ಇಂದು ಯಾದೃಚ್ಛಿಕವಾಗಿ ಕೇಳಲ್ಪಟ್ಟೆ. ಇನ್ಸ್ಟಾಗ್ರಾಂ ಗ್ರಿಡ್ ನಲ್ಲಿನ ಪೋಸ್ಟ್ ಗಳನ್ನು ನೋಡಿ ಆತುರವಾಗಿ ಏನನ್ನೋ ಊಹೆ ಮಾಡಿಕೊಳ್ಳಬೇಡಿ. ನಾನು ನನ್ನ ಇನ್ಸ್ಟಾಗ್ರಾಂ ಪೇಜ್ ಅನ್ನು ಆಗಾಗ ಹೊಸದಾಗಿ ಕಾಣುವಂತೆ ಮಾಡಲು ಪೋಸ್ಟ್ ಗಳನ್ನು ರೀಅಲೈನ್ ಮಾಡುತ್ತೇನೆ. ಅದೇ ಕಾರಣದಿಂದಲೇ ನಾನು ಆರ್ ಆರ್ ಆರ್ ನ ಕೆಲವು ಪೋಸ್ಟ್ ಗಳನ್ನು ಬಿಟ್ಟು ಉಳಿದವುಗಳನ್ನು ಡಿಲೀಟ್ ಮಾಡಿದ್ದೇನೆ.

ಆರ್ ಆರ್ ಆರ್ ಜಗತ್ತಿನಲ್ಲೊಂದು ಭಾಗವಾಗಿದ್ದಕ್ಕೆ ನಾನು ಬಹಳ ಕೃತಜ್ಞಳಾಗಿದ್ದೇನೆ. ನಾನು ಸೀತಾ ಪಾತ್ರವನ್ನು ಪ್ರೀತಿಸುತ್ತೇ‌ನೆ, ರಾಜಮೌಳಿ ನಿರ್ದೇಶಕ, ರಾಮ್ ಚರಣ್ ಮತ್ತು ತಾರಕ್ ಜೊತೆ ಕೆಲಸ ಮಾಡಿದ್ದು ಬಹಳ ಖುಷಿ ನೀಡಿದೆ. ಸಿನಿಮಾದೊಂದಿಗಿನ ನನ್ನ ಪ್ರತಿಯೊಂದು ಅನುಭವವೂ ಕೂಡಾ ನನಗೆ ಬಹಳ ಖುಷಿಯನ್ನು ನೀಡಿದೆ. ಇಂದು ನಾನು ಈ ಸ್ಪಷ್ಟನೆ ನೀಡಲು ಒಂದೇ ಒಂದು ಪ್ರಮುಖ ಕಾರಣವಿದೆ.

ರಾಜಮೌಳಿ ಅವರು ಹಾಗೂ ಸಿನಿಮಾ ತಂಡ ಈ ಸುಂದರವಾದ ಚಿತ್ರಕ್ಕೆ ಜೀವವನ್ನು ನೀಡಲು ವರ್ಷಗಳ ಕಾಲ ತಮ್ಮ ಶ್ರಮ ಮತ್ತು ಶಕ್ತಿಯನ್ನು ಹರಿಸಿದ್ದಾರೆ. ಆದ್ದರಿಂದಲೇ ಈ ಸಿನಿಮಾದ ಸುತ್ತ ಯಾವುದೇ ರೀತಿಯ ತಪ್ಪು ಮಾಹಿತಿಗಳು ಹರಿದಾಡುವುದಕ್ಕೆ ಬಿಡುವುದಿಲ್ಲ ಎಂದು ಬರೆದುಕೊಂಡು, ಎದ್ದಿದ್ದ ಎಲ್ಲಾ ಅನುಮಾನಗಳು, ಪ್ರಶ್ನೆಗಳು ಹಾಗೂ ಗಾಸಿಪ್ ಗಳಿಗೆ ಆಲಿಯಾ ಭಟ್ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ.

Leave a Reply

Your email address will not be published.