ಇತ್ತೀಚಿಗೆ ಹಾಲಿವುಡ್ ತನ್ನ ಮಹತ್ವಾಕಾಂಕ್ಷೆ ಪ್ರಾಜೆಕ್ಟ್ ಗಳಿಗಾಗಿ ತನ್ನ ನೋಟವನ್ನು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಗಳು ಎನಿಸಿಕೊಂಡ ನಟರ ಕಡೆಗೆ ತನ್ನ ಗಮನವನ್ನು ಹರಿಸುತ್ತಿದೆ ಎನ್ನುವುದು ವಾಸ್ತವವಾಗಿದೆ. ಹಾಲಿವುಡ್ ಸಿನಿಮಾಗಳ ಏಜೆಂಟ್ ಗಳು ಭಾರತೀಯ ಸ್ಟಾರ್ ಗಳ ಗಮನವನ್ನು ಹರಿಸುವ ವೇಳೆಯಲ್ಲಿ ಅವರ ದೃಷ್ಟಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮೇಲೆ ಬೀಳದಿರಲು ಹೇಗೆ ತಾನೇ ಸಾಧ್ಯ ಹೇಳಿ. ಹೌದು ಇತ್ತೀಚಿಗೆ ಬಂದಿರುವ ಕೆಲವು ಸುದ್ದಿಗಳ ಪ್ರಕಾರ ಒಂದು ವಿಶೇಷವಾದ ಪ್ರಾಜೆಕ್ಟ್ ಗಾಗಿ ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಖ್ಯಾತಿಯ ಪ್ರಭಾಸ್ ಅವರನ್ನು ಸಂಪರ್ಕಿಸಲಾಗಿದೆ ಎನ್ನಲಾಗಿದ್ದು, ಈ ವಿಷಯವು ಅಭಿಮಾನಿಗಳಿಗೆ ವಿಶೇಷವಾದ ಆಸಕ್ತಿಯನ್ನು ಕೆರಳಿಸಿದೆ.
ನಟ ಪ್ರಭಾಸ್ ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಇದ್ದು, ಅಸಂಖ್ಯಾತ ಅಭಿಮಾನಿಗಳನ್ನು ಅವರು ಪಡೆದುಕೊಂಡಿದ್ದಾರೆ. ಆದರೆ ರಾಜಮೌಳಿ ನಿರ್ದೇಶನದ ಬಾಹುಬಲಿ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಿದ ಮೇಲೆ ಪ್ರಭಾಸ್ ಅವರ ಅದು ಸ್ಟಾರ್ ರೇಂಜನ್ನು ಇನ್ನಷ್ಟು ಹೆಚ್ಚಿಸಿದ್ದು ಪ್ರಭಾಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ನನ್ನಾಗಿ ಮಾಡಿದೆ. ಅದಾದ ನಂತರ ಪ್ರಭಾಸ್ ಅವರು ಬಾಲಿವುಡ್ ಗೆ ಎಂಟ್ರಿ ನೀಡಿದರು. ಪ್ರಸ್ತುತ ಸಹಾ ಅವರು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಹಿಂದೆ ಪ್ರಭಾಸ್ ಟಾಮ್ ಕ್ರೂಸ್ ಅವರ ಮಿಷನ್ ಇಂಪಾಸಿಬಲ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಹರಡಿತ್ತು, ಅನಂತರ ಅದು ಸುಳ್ಳು ಸುದ್ದಿ ಎಂದು ತಿಳಿದು ಬಂದಿತ್ತು.
ಇದೀಗ ಹೊಸ ಸುದ್ದಿಯೊಂದು ಹೊರ ಬಂದಿದ್ದು ನಟ ಪ್ರಭಾಸ್ ಅವರಿಗೊಂದು ಹಾಲಿವುಡ್ ಸಿನಿಮಾದ ಅವಕಾಶವು ಅರಸಿ ಬಂದಿದೆ ಎನ್ನಲಾಗಿದೆ. ಮಾದ್ಯಮವೊಂದರ ವರದಿಯ ಪ್ರಕಾರ ಹಾಲಿವುಡ್ ನ ಒಂದು ದೊಡ್ಡ ನಿರ್ಮಾಣ ಸಂಸ್ಥೆಯಿಂದ ಪ್ರಭಾಸ್ ಅವರಿಗೆ ಅವಕಾಶ ಬಂದಿದ್ದು, ರಾಧೇ ಶ್ಯಾಮ್ ನಟ ನನ್ನು ಹಾಲಿವುಡ್ ನ ಹಾರರ್ ಸಿನಿಮಾವೊಂದಕ್ಕೆ ಅವಕಾಶವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಸಿನಿಮಾದ ಸ್ಕ್ರಿಪ್ಟ್ ಅನ್ನು ಪ್ರಭಾಸ್ ಅವರಿಗೆ ನೀಡಲಾಗಿದ್ದು, ನಟ ಅದನ್ನು ಓದಿ ಒಪ್ಪಿದರೆ ಮುಂದಿನ ಮಾತುಕತೆ ನಡೆಯುವುದು ಎನ್ನಲಾಗಿದೆ. ಇನ್ನು ಈ ವಿಷಯ ಏನಾಗುವುದು ಎನ್ನುವುದಕ್ಕೆ ಕಾದು ನೋಡಬೇಕಾಗಿದೆ.
ನಟ ಪ್ರಭಾಸ್ ಅವರಿಗೆ ಹಾರರ್ ಸಿನಿಮಾಗಳು, ಹಾರರ್ ಕಥೆಗಳು ಎಂದರೆ ಸ್ವಲ್ಪ ಹೆದರಿಕೆಯನ್ನು ತೋರುತ್ತಾರೆ ಎನ್ನಲಾಗಿದ್ದು, ಅವರು ಅಂತಹ ಕಥೆಗಳಿಂದ ಸದಾ ಒಂದು ಹೆಜ್ಜೆ ಹಿಂದೆ ಇದ್ದಾರೆ ಎನ್ನಲಾಗಿದೆ. ಆದರೆ ಈಗ ಅಂತಹುದೇ ಕಥೆಯು ಪ್ರಭಾಸ್ ಅವರನ್ನು ಅರಸಿ ಹಾಲಿವುಡ್ ನಿಂದ ಬಂದಿರುವುದಕ್ಕೆ ಪ್ರಭಾಸ್ ಅವರ ಉತ್ತರ ಏನಾಗಲಿದೆ? ಸದ್ಯಕ್ಕಂತೂ ಈ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲ. ಒಂದು ವೇಳೆ ಪ್ರಭಾಸ್ ಅವರು ಒಪ್ಪಿದರೆ ಅವರ ಎಂಟ್ರಿ ಹಾಲಿವುಡ್ ಗೆ ಆಗಬಹುದು ಎನ್ನುವ ನಿರೀಕ್ಷೆ ಖಂಡಿತ ಇದೆ.