ತಾನು ತಾಯಿಯಾದ ವಿಚಾರ ವರ್ಷದ ನಂತರ ಬಹಿರಂಗ ಪಡಿಸಿದ ನಟಿ: ಸರ್ಪ್ರೈಸ್ ಮತ್ತು ಶಾಕ್ ಆದ ಅಭಿಮಾನಿಗಳು

0 0

ದಕ್ಷಿಣ ಸಿನಿರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯರ ಸಾಲಿಗೆ ಸೇರುತ್ತಾರೆ ಶ್ರೀಯಾ ಶರಣ್. ಈ ನಟಿ ದಕ್ಷಿಣ ಸಿನಿಮಾರಂಗದಲ್ಲಿ ಮಾತ್ರವೇ ಅಲ್ಲದೆ ಬಾಲಿವುಡ್‌ ನ ಕೆಲವು ಸಿನಿಮಾ ಗಳಲ್ಲಿ ಕೂಡಾ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲಿಯೂ ನಟಿ ಶ್ರೇಯಾ ಶರಣ್ ಕಾಣಿಸಿಕೊಳ್ಳುವುದುಂಟು. ಸುಮಾರು ಎರಡು ದಶಕಗಳ ಕಾಲದಿಂದ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದಾರೆ ಶ್ರಿಯಾ ಶರಣ್. ನಟಿ ಶ್ರೇಯಾ ವಿಶೇಷವಾಗಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿಯಾಗಿದ್ದಾರೆ.

ಇಷ್ಟಂ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಈ ನಟಿ ಕೆಲವೇ ವರ್ಷಗಳಲ್ಲಿ ಬಹು ಬೇಡಿಕೆಯ ನಟಿಯಾಗಿ, ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು. 2018ರಲ್ಲಿ ಶ್ರೀಯ ತಮ್ಮ ರಷ್ಯನ್ ಬಾಯ್ಫ್ರೆಂಡ್ ಆಂಡ್ರೆ ಕೊಶ್ಚೆವ್ ಜೊತೆ ವಿವಾಹ ಜೀವನಕ್ಕೆ ಅಡಿಯಿಟ್ಟರು. ಮದುವೆಯ ನಂತರವೂ ಅವರು ಅವರು ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ನಟಿ ಶ್ರೇಯಾ ಶರಣ್ ಇದೀಗ ತಮ್ಮ ಅಭಿಮಾನಿಗಳಿಗೆ ಒಂದು ಬಹುದೊಡ್ಡ ಸರ್ಪ್ರೈಸ್ ನೀಡಿದ್ದಾರೆ.

ಬರೋಬ್ಬರಿ ಒಂದು ವರ್ಷದ ಬಳಿಕ ತಾನು ತಾಯಾಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ ಶ್ರೀಯಾ. ಇಷ್ಟು ದಿನ ತಾನು ಹೆಣ್ಣುಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಅವರು ಹೇಳಿರಲಿಲ್ಲ. ಆದರೆ ಇದೀಗ ಸಣ್ಣ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಮುದ್ದು ಮಗುವನ್ನು ಎಲ್ಲರಿಗೂ ಪರಿಚಯಿಸಿದ್ದಾರೆ. ನಟಿ ಶ್ರೇಯಾ ತಮ್ಮ ಪೋಸ್ಟ್ ನಲ್ಲಿ 2020 ಕ್ವಾರಂಟೈನ್ ನಮಗೆ ಬಹಳ ಸುಂದರವಾಗಿತ್ತು. ಇಡಿ ವಿಶ್ವ ಸಂಕಷ್ಟದಲ್ಲಿ ಸಿಲುಕಿರುವ ಹೊತ್ತಿನಲ್ಲಿ ನಮ್ಮ ಜೀವನದಲ್ಲಿ ಒಂದು ಬದಲಾವಣೆಯಾಗಿತ್ತು.

ನಮಗೆ ಹೆಣ್ಣು ಮಗು ಜನಿಸಿತು ದೇವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ತಮ್ಮ ಮಗುವನ್ನು ಏನೆಂದರೇನೂ ಪರಿಚಯಿಸಿದ್ದಾರೆ. ನಟಿ ಶ್ರೀಯಾ ಶೇರ್ ಮಾಡಿಕೊಂಡ ವಿಡಿಯೋ ನೋಡಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಎಂದಿದ್ದಾರೆ ಅವರ ಅಭಿಮಾನಿಗಳು. ಶ್ರೀಯಾ ಅವರು ಹಂಚಿಕೊಂಡ ವೀಡಿಯೋ ನೋಡಿ ಬಹಳಷ್ಟು ಜನರು ಕಾಮೆಂಟ್ ಗಳ ಮೂಲಕ ನಟಿಗೆ ಶುಭ ಹಾರೈಸಿದ್ದು, ಅವರ ಮಗು ಬಹಳ ಮುದ್ದಾಗಿದೆ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

Leave A Reply

Your email address will not be published.