ತಾಕತ್ತಿದ್ರೆ ಈ ಚಿತ್ರದಲ್ಲಿ ಅಡಗಿರುವ ರಿಮೋಟ್ ಎಲ್ಲಿದೆ ಹೇಳಿ ಎಂದು ಸವಾಲೆಸೆದ ಚಿತ್ರ: 1% ಜನ ಮಾತ್ರ ಉತ್ತರಿಸಿದ್ದಾರೆ

0 2

ಪ್ರತಿಯೊಬ್ಬರ ಮನೆಯಲ್ಲೂ ರಿಮೋಟ್ ಇಂದು ಒಂದು ಸಾಮಾನ್ಯ ವಸ್ತುವಾಗಿದೆ. ಅಲ್ಲದೇ ಅನೇಕ ಸಂದರ್ಭಗಳಲ್ಲಿ ಟಿ ವಿ ಆನ್ ಮಾಡಲು ಹೋದಾಗ ನಮಗೆ ರಿಮೋಟ್ ನಮ್ಮ ಕೈಗೆ ತಟ್ಟನೆ ಸಿಗುವುದೇ ಇಲ್ಲ. ಆಗ ಅದು ನಮ್ಮ ಕೈಗೆ ಸಿಗುವ ವೇಳೆಗೆ ನಾವು ಒಂದು ಕಾಮೆಂಟ್ ಗಳನ್ನು ಪಾಸ್ ಮಾಡುತ್ತಾ, ಗೊಣಗಾಡುತ್ತಾ ರಿಮೋಟ್ ಅನ್ನು ಹುಡುಕುವ ಕಾಯಕ ಮಾಡುತ್ತೇವೆ. ಕಡೆಗೆ ಅದು ನಮಗೆ ತಿಳಿದಿರುವ ಜಾಗದಲ್ಲೇ ಇರುವುದನ್ನು ನೋಡಿ, ಅಯ್ಯೋ ಇಲ್ಲೇ ಇತ್ತಾ? ಎಂದು ನಿಟ್ಟುಸಿರು ಬಿಟ್ಟ ನೂರು ಅನುಭವಗಳು ಸಹಾ ಆಗಿದ್ದರೂ ಆಗಿರಬಹುದು.

ಆಪ್ಟಿಕಲ್ ಇಲ್ಯೂಷನ್ ಅಥವಾ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಫೋಟೋಗಳು ಸದ್ಯಕ್ಕೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿದೆ. ಇವು ಜನರ ಬುದ್ಧಿಗೆ ಮತ್ತು ದೃಷ್ಟಿಗೆ ಸವಾಲನ್ನು ಹಾಕುತ್ತಿವೆ‌. ಈ ಚಿತ್ರಗಳಲ್ಲಿ ಅಡಗಿದ ವಸ್ತುವನ್ನು ಕಂಡು ಹಿಡಿಯಲು ತೊಡಗಿಕೊಂಡಾಗ ಜನರಿಗೆ ಟೈಮ್ ಪಾಸ್ ಆಗುವುದರ ಜೊತೆಗೆ ಅವರು ದೃಷ್ಟಿ ಮತ್ತು ಮೆದುಳಿಗೆ ಕೆಲಸವನ್ನು ನೀಡಿದಂತಾಗುತ್ತದೆ. ಅವರ ಬುದ್ಧಿಮತ್ತೆಯನ್ನು ಹೆಚ್ಚಿಸಲು ಇಂತಹ ಚಿತ್ರಗಳು ನೆರವಾಗುತ್ತದೆ.

ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ, ಕೇವಲ 20 ಸೆಕೆಂಡುಗಳಲ್ಲಿ ನೀವು ಪೀಠೋಪಕರಣಗಳ ರಾಶಿಯ ನಡುವೆ ಅಡಗಿಕೊಂಡಿರುವ ರಿಮೋಟ್ ಅನ್ನು ಪತ್ತೆ ಹಚ್ಚಬೇಕಾಗಿದೆ‌.‌‌ ಒಂದು ವೇಳೆ ನೀವು ಹುಡುಕಿದರೆ ಈಗಾಗಲೇ ಉತ್ತರ ನೀಡಿದ ಕೇವಲ 1% ಬುದ್ಧಿವಂತ ಜನರ ಸಾಲಿಗೆ ನೀವೂ ಸಹಾ ಸೇರುವಿರಿ. ಹಾಗಾದರೆ ಇನ್ನೇಕೆ ತಡ, ಈ ಚಿತ್ರದಲ್ಲಿ ಅಡಗಿ ಕುಳಿತಿರುವ ರಿಮೋಟ್ ಎಲ್ಲಿದೆ ಎನ್ನುವುದನ್ನು ಪತ್ತೆ ಮಾಡುವ ಕೆಲಸವನ್ನು ಈಗಲೇ ಆರಂಭಿಸಿ, ಉತ್ತರ ಕಂಡು ಹಿಡಿಯಿರಿ.

ಈ ಚಿತ್ರದಲ್ಲಿ ನೀವು ಅನೇಕ ಪೀಠೋಪಕರಣಗಳ ಭಾಗಗಳನ್ನು ನೋಡುವಿರಿ. ಇಲ್ಲಿ ಸೋಫಾ ಸೆಟ್‌ಗಳು, ಕುರ್ಚಿಗಳು, ಕುಶನ್‌ಗಳು, ಸಸ್ಯಗಳು, ಹೂದಾನಿಗಳು ಮತ್ತು ದೀಪಗಳನ್ನು ನೀವು ಗಮನಿಸಬಹುದಾಗಿದೆ. ಅಲ್ಲದೇ ನೀವು ಚಿತ್ರದಲ್ಲಿ ಕಾರ್ಪೆಟ್‌ಗಳು, ಕನ್ನಡಿಗಳು, ಟಾರ್ಚ್‌ಗಳು ಮತ್ತು ಇನ್ನೂ ಹೆಚ್ಚಿನ ವಸ್ತುಗಳನ್ನು ಸಹಾ ಗಮನಿಸಬಹುದು. ಆದರೆ ಅಲ್ಲೇ ಅಡಗಿರುವ ರಿಮೋಟನ್ನು ನೀವು ನೋಡಿದಿರಾ?? 20 ಸೆಕೆಂಡ್ ಗಳಲ್ಲಿ ನಿಮಗೆ ರಿಮೋಟ್ ಸಿಗಬಹುದು ಎಂದು ನಾವು ಭಾವಿಸುತ್ತೇವೆ.

ನೀವು ಇಂತಹ ಚಿತ್ರಗಳ ಪರೀಕ್ಷೆಗಳಲ್ಲಿ ಉತ್ತರವನ್ನು ಕಂಡು ಹಿಡಿಯುವ ಟಾಸ್ಕ್ ಪ್ರಾರಂಭಿಸಿದಾಗ, ಮೊದಲು ಮೇಲಿನಿಂದ ಪ್ರಾರಂಭಿಸಲು ಸೂಚಿಸಲಾಗುತ್ತದೆ, ನಂತರ ನಿಮ್ಮ ದೃಷ್ಟಿಯನ್ನು ಕೆಳಕ್ಕೆ ವರ್ಗಾಯಿಸಿ ಮತ್ತು ಕೊನೆಯಲ್ಲಿ ಚಿತ್ರದ ಮಧ್ಯ ಭಾಗವನ್ನು ನೋಡಿ. ಈ ವಿಧಾನವನ್ನು ಅನುಸರಿಸಿ, ಸೂಕ್ಷ್ಮವಾಗಿ, ಗಮನವಿಟ್ಟು ನೋಡಿದಾಗ, ಇದು ಮೆದುಳಿಗೆ ಕಸರತ್ತು ನೀಡುವ ಜೊತೆಗೆ ನಿಮಗೆ ಚಿತ್ರದಲ್ಲಿ ಕಂಡು ಹಿಡಿಯಬೇಕಾದ ಉತ್ತರಗಳು ಸಿಗುತ್ತವೆ. ಆದ್ದರಿಂದಲೇ ಈ ಚಿತ್ರದೊಂದಿಗೆ ಈ ಟ್ರಿಕ್ ಬಳಸಿ ನೋಡಿ.

ಒಂದು ವೇಳೆ ನೀವು ಇನ್ನೂ ಉತ್ತರವನ್ನು ಹುಡುಕದೇ ಇದ್ದರೆ ಅಥವಾ ಉತ್ತರ ಸಿಗದೇ ಇದ್ದರೆ, ನೀವು ನಿಜವಾಗಿಯೂ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಕಳೆದುಹೋಗಿದ್ದೀರಿ ಎಂದರೆ, ರಿಮೋಟ್ ಚಿತ್ರದಲ್ಲಿ ಪೀಠೋಪಕರಣಗಳ ಕೆಳಗಿನ ಸಾಲಿನಲ್ಲಿ ಮರೆಯಾಗಿದೆ. ಈಗ ನೀವು ಅದನ್ನು ಗುರುತಿಸಬಹುದು. ಒಂದು ವೇಳೆ ಸಾಧ್ಯವಾಗಿಲ್ಲ ಎಂದರೆ ಉತ್ತರವು ಇರುವಂತಹ ಚಿತ್ರವನ್ನು ನೋಡಿದರೆ ಉತ್ತರ ಸಿಗುವುದು.

Leave A Reply

Your email address will not be published.