ತಲೈವಿ ತಂಡದಿಂದ ಸಿಕ್ತು ಡಿಂಪಲ್ ಕ್ವೀನ್ ಗೆ ಸರ್ಪ್ರೈಸ್ ಗಿಫ್ಟ್: ರಚಿತಾ ರಾಮ್ ಗೆ ಏಕೆ ಈ ವಿಶೇಷ ಉಡುಗೊರೆ??

0 0

ಬಾಲಿವುಡ್ ನಟಿ ಕಂಗನಾ ರಣಾವತ್ ಬಹಳ ಖುಷಿಯಾಗಿದ್ದಾರೆ, ಇದಕ್ಕೆ ಮುಖ್ಯವಾದ ಕಾರಣ ಕಂಗನಾ ನಟನೆಯ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಕ್ಷಿಣ ಸಿನಿ ರಂಗದ ಖ್ಯಾತ ನಟಿಯೂ ಆಗಿದ್ದ ದಿವಂಗತ ಜಯಲಲಿತಾ ಅವರ ಜೀವನದ ಕಥೆಯನ್ನು ಆಧರಿಸಿ ಸಿದ್ಧವಾಗಿರುವ ತಲೈವಿ ಸಿನಿಮಾ‌ ಇದೇ ಸೆಪ್ಟೆಂಬರ್ 10 ರಂದು ತೆಲುಗು, ತಮಿಳು ಹಾಗೂ ಹಿಂದಿ ಮೂರು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆ. ಅಲ್ಲದೇ ಈ ಸಿನಿಮಾದ ಹಿಂದಿ ಆವೃತ್ತಿಯ ಸಿನಿಮಾ ಪ್ರೀಮಿಯರ್ ಶೋ ಆಗಿದ್ದು, ಬಾಲಿವುಡ್ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ ಎನ್ನಲಾಗಿದೆ‌.

ತಲೈವಿ ಸಿನಿಮಾವನ್ನು ಎಎಲ್ ವಿಜಯ್ ಅವರು ನಿರ್ದೇಶನ ಮಾಡಿದ್ದು, ನಟಿ ಕಂಗನಾ ಹಾಗೂ ತಮಿಳಿನ ಪ್ರಖ್ಯಾತ ನಟ ಅರವಿಂದ್ ಸ್ವಾಮಿ ಅವರು ಈ ಸಿನಿಮಾದ ಪ್ರಮುಖವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನ ಕಂಗನಾ ಜಯಲಲಿತಾ ಅವರ ಸಮಾಧಿಗೆ ಭೇಟಿ ನೀಡಿ ವಂದಿಸಿದ್ದ ಫೋಟೋ ಹಾಗೂ ವೀಡಿಯೋ ವೈರಲ್ ಆಗಿ, ಜನರ ಮೆಚ್ಚುಗೆಯನ್ನು ಸಹಾ ಪಡೆದಿತ್ತು. ಈಗ ತಲೈವಿ ಸಿನಿಮಾ ಬಿಡುಗಡೇ ವೇಳೆಯಲ್ಲಿ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ಕೂಡಾ ಖುಷಿಯಾಗಿದ್ದಾರೆ.

ತಲೈವಿ ಸಿನಿಮಾ ಬಿಡುಗಡೆಗೂ, ರಚಿತಾ ರಾಮ್ ಅವರ ಖುಷಿಗೂ ಏನು ಸಂಬಂಧ ಎನ್ನುವಿರಾ?? ಖಂಡಿತ ಒಂದು ಕಾರಣ ಇದೆ. ತಲೈವಿ ಸಿನಿಮಾ ತಂಡದ ಕಡೆಯಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಸರ್ಪ್ರೈಸ್ ಎನ್ನುವಂತೆ ಒಂದು ವಿಶೇಷ ಉಡಗೊರೆ ಸಿಕ್ಕಿದ್ದು, ರಚಿತಾ ರಾಮ್ ಬಹಳ ಖುಷಿಪಟ್ಟಿದ್ದು, ಈ ಸಂತೋಷದ ವಿಷಯವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ ಹಾಗೂ ಉಡುಗೊರೆ ಬಗ್ಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ.

ಹೌದು ತಲೈವಿ ಚಿತ್ರತಂಡದ ಕಡೆಯಿಂದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ದಕ್ಕಿರುವ ಆ ಸರ್ಪ್ರೈಸ್ ಗಿಫ್ಟ್ ಏನು ಎನ್ನುವುದಾದರೆ, ಅದೊಂದು ಕಾಂಚೀಪುರಂ ಸೀರೆಯಾಗಿದೆ. ಇದರ ಫೋಟೋವನ್ನು ನಟಿ ರಚಿತಾ ರಾಮ್ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದು, “ತಲೈವಿ ತಂಡದಿಂದ ಅದ್ಬುತವಾದ ಉಡುಗೊರೆ ದೊರೆತಿದೆ. ಬೃಂದಾ ಪ್ರಸಾದ್ ಮತ್ತು ವಿಷ್ಣು ಇಂದುರಿ ಅವರಿಗೆ ಧನ್ಯವಾದಗಳು. ಇದು ಬಹಳ ವಿಶೇಷ, ತಲೈವಿ ತಂಡಕ್ಕೆ ಆಲ್ ದಿ ಬೆಸ್ಟ್ ” ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.

ಇನ್ನು ತಲೈವಿ ಚಿತ್ರ ತಂಡ ರಚಿತಾ ರಾಮ್ ಅವರಿಗೆ ಸೀರೆ ಉಡುಗೊರೆ ನೀಡಿರುವ ಕಾರಣ ಏನೆಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಖಂಡಿತ ಒಂದು ವಿಶೇಷ ಕಾರಣ ಇದ್ದೇ ಇರುತ್ತದೆ ಎನ್ನುವುದು ನಿಜ. ತಲೈವಿ ತಂಡ ಮತ್ತೋರ್ವ ದಕ್ಷಿಣದ ಖ್ಯಾತ ನಟಿ ಸಮಂತ ಅವರಿಗೂ ಸಹಾ ಸೀರೆ ಉಡುಗೊರೆ ನೀಡಿದ್ದು ಅವರು ಸಹಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಷಯ ಹಂಚಿಕೊಂಡು ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

Leave A Reply

Your email address will not be published.