ತಲೆಕೆಳಗಾಯ್ತು ಎಲ್ಲರ ಊಹೆ: ಜೊತೆ ಜೊತೆಯಲಿ ಸೀರಿಯಲ್ ತಂಡ ನೀಡಿದೆ ಪ್ರೇಕ್ಷಕರ ಊಹೆಗೂ ಮೀರಿದ ಶಾ ಕ್
ಜೊತೆ ಜೊತೆಯಲಿ ಸೀರಿಯಲ್ ಇತ್ತೀಚಿಗೆ ಸಖತ್ ಸದ್ದು ಮಾಡಿರೋದು ಅಲ್ಲಿ ಎದ್ದ ಒಂದು ಸಮಸ್ಯೆಯಿಂದಾಗಿ. ಹೌದು, ಧಾರಾವಾಹಿ ತಂಡವು ಸೀರಿಯಲ್ ನ ನಾಯಕ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದು ನಟ ಅನಿರುದ್ಧ್ ಅವರ ಅಸಹಕಾರ ಹೆಚ್ಚಾಗಿದೆಯೆಂದೂ, ಅವರಿಂದ ಸಾಕಷ್ಟು ಸಮಸ್ಯೆಗಳಾಗಿವೆ ಎಂದು ಕಾರಣವನ್ನು ನೀಡಿ ಅವರನ್ನು ಸೀರಿಯಲ್ ನಿಂದ ಕೈ ಬಿಟ್ಟಿದೆ. ಇದಾದ ನಂತರ ಸೀರಿಯಲ್ ನಿರ್ಮಾಪಕರ ಸಂಘ ಸಹಾ ಅನಿರುದ್ಧ್ ಅವರನ್ನು ಯಾವುದೇ ಸೀರಿಯಲ್, ರಿಯಾಲಿಟಿ ಶೋ ಗಳಿಗೆ ಆಯ್ಕೆ ಮಾಡಬಾರದು ಎಂದು ಸೂಚನೆಯನ್ನು ಹೊರಡಿಸಿತ್ತು. ಇದೆಲ್ಲಾ ವಿಷಯಗಳು ಮಾದ್ಯಮಗಳಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಪ್ರೇಕ್ಷಕರು ಅನಿರುದ್ಧ್ ಅವರಿಲ್ಲದ ಸೀರಿಯಲ್ ನೋಡಲ್ಲ ಎಂದು ಅಭಿಪ್ರಾಯಗಳನ್ನು ಹಂಚಿಕೊಂಡರು.
ಈಗ ಇವೆಲ್ಲವುಗಳ ನಡುವೆ ಬಹುವಾಗಿ ಚರ್ಚೆ ನಡೆದಿದ್ದು ಮಾತ್ರ ಆರ್ಯವರ್ಧನ್ ಪಾತ್ರಕ್ಕೆ ಹಾಗಾದರೆ ಯಾವ ನಟ ಬರ್ತಾರೆ ಅನ್ನೋದು? ಹೌದು, ಆರ್ಯವರ್ಧನ್ ಪಾತ್ರಕ್ಕೆ ಜೀವ ನೀಡಿದ್ದವರು ಅನಿರುದ್ಧ್, ಆದ್ದರಿಂದಲೇ ಜನರಿಗೆ ಆ ಪಾತ್ರದಲ್ಲಿ ಬೇರೆ ನಟನನ್ನು ನೋಡಲು ಸಿದ್ಧರಿಲ್ಲ. ಆದರೆ ವಾಹಿನಿ ಮತ್ತು ಧಾರಾವಾಹಿ ತಂಡವು ಅನಿರುದ್ಧ್ ಅವರನ್ನು ಕೈ ಬಿಟ್ಟ ವಿಚಾರವನ್ನು ಅಧಿಕೃತವಾಗಿ ಘೋಷಣೆ ಸಹಾ ಮಾಡಿಯಾಗಿದೆ. ಆದ್ದರಿಂದಲೇ ಆರ್ಯವರ್ಧನ್ ಪಾತ್ರಕ್ಕೆ ಬರುವ ನಟ ಯಾರು? ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಅದಕ್ಕೆ ತಕ್ಕ ಉತ್ತರ ಅನ್ನೋ ಹಾಗೆ ಒಂದಷ್ಟು ಜನಪ್ರಿಯ ನಟರ ಹೆಸರುಗಳು ಆರ್ಯವರ್ಧನ್ ಪಾತ್ರಕ್ಕೆ ಹರಿದಾಡಿದವು.
ಅನಂತರ ಅದರಲ್ಲಿ ಒಂದು ಹೆಸರು, ನಟ ಹರೀಶ್ ರಾಜ್ ಅವರ ಹೆಸರು ಹೆಚ್ಚು ಸುದ್ದಿಯಾಗಿದೆ. ಅವರು ಬರೋದು ಬಹುತೇಕ ಪಕ್ಕಾ ಎನ್ನುವಾಗಲೇ ನಟ ಕೂಡಾ ಮಾದ್ಯಮಗಳಲ್ಲಿ ಹೌದು, ಕೆಲವೊಂದು ಷರತ್ತುಗಳ ಮೇಲೆ ತಾನು ಒಪ್ಪಿಕೊಂಡಿದ್ದೇನೆ ಎಂದಿದ್ದರೇ ಹೊರತು ತಾನು ಆರ್ಯವರ್ಧನ್ ಪಾತ್ರಕ್ಕೆ ಬರ್ತೀನಿ ಅಂತ ಅವರು ಹೇಳಿರಲಿಲ್ಲ. ಕೆಲವು ಮಾದ್ಯಮಗಳು ಅವರೇ ಆರ್ಯವರ್ಧನ್ ಎಂದು, ಇದಕ್ಕೆ ಜನರ ಅಭಿಪ್ರಾಯ ಏನು ಎಂದೆಲ್ಲಾ ಪ್ರಶ್ನೆಗಳನ್ನು ಕೇಳುವಾಗಲೇ ಸೀರಿಯಲ್ ತಂಡ ಎಲ್ಲರಿಗೂ ಭರ್ಜರಿಯಾಗಿ ಶಾ ಕ್ ನೀಡಿದೆ. ಹೊಸ ಪ್ರೋಮೋ ಈಗ ಸಖತ್ ಸೌಂಡ್ ಮಾಡ್ತಿದೆ.
ಹೌದು, ಇಂದಿನ ಎಪಿಸೋಡ್ ನ ಪ್ರೊಮೋ ಹೊರಗೆ ಬಂದಿದ್ದು, ಅದರಲ್ಲಿ ಹರೀಶ್ ರಾಜ್ ಅವರ ಎಂಟ್ರಿ ಕಂಡಿದೆ. ಆದರೆ ಅವರು ಬಂದಿರುವುದು ಆರ್ಯವರ್ಧನ್ ಆಗಿ ಅಲ್ಲ, ಬದಲಾಗಿ ಆರ್ಯವರ್ಧನ್ ಅವರ ತಾಯಿ ಪ್ರಿಯದರ್ಶಿನಿ ಅವರ ಇನ್ನೊಬ್ಬ ಮಗ ವಿಶ್ವಾಸ್ ದೇಸಾಯಿಯಾಗಿ ಅಂದರೆ ಆರ್ಯವರ್ಧನ್ ಗೆ ಸಹೋದರನಾಗಿ ಹರೀಶ್ ರಾಜ್ ಅವರು ಎಂಟ್ರಿ ನೀಡಿದ್ದಾರೆ. ಅಲ್ಲಿಗೆ ಅವರ ಪಾತ್ರ ಆರ್ಯವರ್ಧನ್ ಅಲ್ಲ ಅನ್ನೋದು ಸುಸ್ಪಷ್ಟವಾಗಿ ಗೊತ್ತಾಗಿದೆ. ಆರ್ಯನ ಸಹಾಯ ಪಡೆಯಲು, ಬ್ಯುಸಿನೆಸ್ ಲಾಸ್ ಮಾಡ್ಕೊಂಡು ತಮ್ಮ ಬಂದಿದ್ದಾನೆ.
ಈ ವೇಳೆ ಪ್ರಿಯದರ್ಶಿನಿ, ತಮ್ಮ ಎರಡನೇ ಮಗನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸೋ ವ್ಯಕ್ತಿ ಒಬ್ಬ ಇದ್ದಾನೆ ಅಂತ ಮಗನಿಗೆ ಭರವಸೆ ನೀಡಿದ್ದಾರೆ. ಅಂದ ಮೇಲೆ ಆರ್ಯವರ್ಧನ್ ಪಾತ್ರ ಇದೆ ಅಂತ ಆಗಿದೆ. ಈಗ ಮತ್ತೊಮ್ಮೆ ಎಲ್ಲರ ಪ್ರಶ್ನೆ ಮೊದಲಿಗೆ ಬಂದು ನಿಂತಿದೆ. ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಇಲ್ಲ ಎಂದರೆ ಮತ್ತೆ ಆರ್ಯವರ್ಧನ್ ಪಾತ್ರ ಮಾಡುವ ನಟ ಯಾರು? ಅಥವಾ ಆರ್ಯವರ್ಧನ್ ಇನ್ನು ಕೇವಲ ಒಂದು ಹೆಸರು ಮಾತ್ರವಾಗಿ ಉಳಿಯುತ್ತಾ? ಅಂತು ಜೊತೆ ಜೊತೆಯಲಿ ಸೀರಿಯಲ್ ಕಥೆಗಿಂತ ಪಾತ್ರದ ಔಚಿತ್ಯ ಈಗ ಹೆಚ್ಚು ಸದ್ದು ಮಾಡಿದೆ.