ತರಕಾರಿ ಮಾರಿ ಆಪರೇಷನ್ ಗಾಗಿ ಬೆವರು ಸುರಿಸಿ ಕೂಡಿಟ್ಟ ಹಣ: ಆದರೆ ಇಲಿಗಳು ಮಾಡಿದ ಕೆಲಸ ನೋಡಿ

0
203

ಮನೆಗಳಲ್ಲಿ ಅನೇಕ ಸಂದರ್ಭಗಳಲ್ಲಿ ಇಲಿ ಹಾಗೂ ಹೆಗ್ಗಣಗಳ ಕಾಟವನ್ನು ಅನೇಕರು ಎದುರಿಸುವುದು ಉಂಟು. ಅವು ಮನೆಯಲ್ಲಿ ಹಲವು ವಸ್ತುಗಳನ್ನು ಹಾಳು ಮಾಡುವುದು ಉಂಟು. ಇಂತಹ ಒಂದು ವಿಶಿಷ್ಠವಾದ ಪ್ರಕರಣವೊಂದು ತೆಲಂಗಾಣದಿಂದ ಹೊರ ಬಂದಿದ್ದು, ಅಲ್ಲೊಂದು ಕಡೆ ವ್ಯಕ್ತಿಯೊಬ್ಬರ ಬೆವರಿನ ದುಡಿಮೆ, ಅವರು ರಕ್ತ ಹರಿಸಿದ ಗಳಿಸಿದ ಸಂಪಾದನೆಯನ್ನು ಇಲಿಗಳು ಹಾಳು ಮಾಡಿರುವ ಘಟನೆಯೊಂದು ನಡೆದಿದೆ.‌ ಮಾಹಿತಿಗಳ ಪ್ರಕಾರ ತೆಲಂಗಾಣದ ಇಂದಿರಾನಗರ ತಾಂಡಾದ ವೇಮನೂರು ಗ್ರಾಮದಲ್ಲಿ ಇಂತಹುದೊಂದು ವಿಲಕ್ಷಣ ಘಟನೆಯು ನಡೆದಿದೆ. ಈ ಗ್ರಾಮದ ನಿವಾಸಿ ರೆಡ್ಡಿ ನಾಯಕ್ ಎನ್ನುವ ತರಕಾರಿ ವ್ಯಾಪಾರಿ.

ಅವರು ಇಲಿಗಳು ಮಾಡಿದ ತೊಂದರೆಯಿಂದಾಗಿ ಇದೀಗ ಸಮಸ್ಯೆಗಳ ಸುಳಿಗೆ ಸಿಲುಕಿದ್ದು, ತೀವ್ರ ಅಸಮಾಧಾನಗೊಂಡಿದ್ದಾರೆ. ಹಾಗಾದರೆ ಇಲ್ಲಿ ನಡೆದಿದ್ದೇನು?? ಇಲಿಗಳು ಮಾಡಿದ್ದೇನು?? ಎನ್ನುವ ವಿಚಾರಕ್ಕೆ ಬರುವುದಾದರೆ, ರೆಡ್ಡಿ ನಾಯಕ್ ಅವರಿಗೆ ಆರೋಗ್ಯದಲ್ಲಿ ಸಮಸ್ಯೆಯಿತ್ತು. ಅವರಿಗೆ ಚಿಕಿತ್ಸೆಗಾಗಿ ಒಂದಷ್ಟು ಹಣದ ಅವಶ್ಯಕತೆ ಕೂಡಾ ಇತ್ತು. ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಗಿದ್ದರಿಂದ ರೆಡ್ಡಿ ನಾಯಕ್ ತಾನು ತರಕಾರಿಗಳನ್ನು ಮಾರಾಟ ಮಾಡಿ ಗಳಿಸಿದ ಹಾಗೂ ಸಂಬಂಧಿಕರು ನೀಡಿದ ಹಣವನ್ನೆಲ್ಲಾ ಒಂದು ಚೀಲದಲ್ಲಿ ಇಟ್ಟು, ಬೀರುವಿನಲ್ಲಿ ಭದ್ರಪಡಿಸಿದ್ದರು.

ಪ್ರತಿ ದಿನ ತನ್ನ ಟು ವೀಲರ್ ನಲ್ಲಿ ತರಕಾರಿಗಳನ್ನು ಮಾರಲು ಬೀದಿ ಬೀದಿ ಸುತ್ತುವ ರೆಡ್ಡಿ ನಾಯಕ್ ಅವರ ಜೀವನೋಪಾಯ ತರಕಾರಿ ಮಾರಾಟ ಬಿಟ್ಟು ಬೇರೇನೂ ಇಲ್ಲ. ಆದ್ದರಿಂದಲೇ ಬಹಳ ಶ್ರಮವಹಿಸಿ ಅವರು ಹಣವನ್ನು ಗಳಿಸಿ, ಚಿಕಿತ್ಸೆಗಾಗಿಯೂ ಒಂದಷ್ಟು ಹಣವನ್ನು ಕೂಡಿಡುತ್ತಿದ್ದರು. ಹೀಗಿರುವಾಗ ಒಂದು ದಿನ ಅವರು ಬೀರು ತೆಗೆದು, ಚೀಲದಲ್ಲಿ ತಾನು ಕೂಡಿಡುತ್ತಿದ್ದ ಹಣವನ್ನು ನೋಡಿ ಶಾ ಕ್ ಆಗಿದ್ದಾರೆ. ಹಣದ ಪರಿಸ್ಥಿತಿಯನ್ನು ರೆಡ್ಡಿ ನಾಯಕ್ ಒಂದು ಕ್ಷಣ ಕಂಗಲಾಗಿ ಹೋಗಿದ್ದಾರೆ.

ಹೌದು ರೆಡ್ಡಿ ನಾಯಕ್ ಅವರು ಚೀಲದಲ್ಲಿ ಇಟ್ಟಿದ್ದ ಹಣವನ್ನೆಲ್ಲಾ ಇಲಿಗಳು ಕಚ್ಚಿ ತುಂಡು ತುಂಡು ಮಾಡಿ, ಹಾಳು ಮಾಡಿದ್ದವು, ತನ್ನ ಶ್ರಮದ ಫಲವಾದ ಹಣವನ್ನು ಇಲಿಗಳು ಹೀಗೆ ಹಾಳು ಮಾಡಿರುವುದನ್ನು ಕಂಡು ರೆಡ್ಡಿ ನಾಯಕ್ ಗೆ ದಿಕ್ಕು ತೋಚದಂತಾಗಿದೆ. ರೆಡ್ಡಿ ನಾಯಕ್ ಹಾಳಾದ ನೋಟುಗಳನ್ನು ಹಿಡಿದು ಬ್ಯಾಂಕುಗಳಿಗೆ ಅಲೆದಿದ್ದಾರೆ. ಅದರ ಬದಲಾವಣೆ ಮಾಡಲು ಸಾಧ್ಯವಿದೆಯೇ ಎಂದು ವಿಚಾರಿಸಿದ್ದಾರೆ. ಆದರೆ ಬಹುತೇಕ ನೋಟುಗಳು ಹಾಳಾಗಿದ್ದ ಕಾರಣ ಯಾವುದೇ ಬ್ಯಾಂಕ್ ಕೂಡಾ ಆ ಹಣವನ್ನು ಸ್ವೀಕಾರ ಮಾಡಿಲ್ಲ.

ಹೀಗೆ ಇಲಿಗಳು ಮಾಡಿದ ಕೆಲಸದಿಂದ ತಾನು ತನ್ನ ಶಸ್ತ್ರಚಿಕಿತ್ಸೆ ಮಾಡಿಸಲೆಂದು ಕೂಡಿಟ್ಟ ಹಣವೆಲ್ಲಾ ವ್ಯರ್ಥವಾಗಿದ್ದು ಕಂಡು ರೆಡ್ಡಿ ನಾಯಕ್ ಪರಿಸ್ಥಿತಿ ಸುದ್ದಿಯಾಗಿದ್ದು, ಆತನ ಬಗ್ಗೆ ಜನರು ಸಹಾ ಮರುಕ ಪಟ್ಟಿದ್ದಾರೆ. ಆದರೆ ಇವೆಲ್ಲವುಗಳ ನಡುವೆ ಸ್ಥಳೀಯ ನಾಯಕರೊಬ್ಬರು ರೆಡ್ಡಿ ನಾಯಕ್ ಅವರ ಶಸ್ತ್ರಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಲು ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here