ತಮ್ಮ ಅವಳಿ ಜವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ಪಾರು ಸೀರಿಯಲ್ ನಟಿ: ಹಂಚಿಕೊಂಡರು ಅಂದವಾದ ಫೋಟೋ

0 5

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಧಾರಾವಾಹಿ ಕೂಡಾ ಒಂದಾಗಿದೆ. ಈ ಧಾರವಾಹಿ ಯಲ್ಲಿ ಎಲ್ಲಾ ಪಾತ್ರಗಳು ಕೂಡಾ ವಿಶೇಷವಾದ ಮನ್ನಣೆ ಹಾಗೂ ಜನಪ್ರಿಯತೆ ಪಡೆದುಕೊಂಡಿದೆ. ಈ ಸೀರಿಯಲ್ ನ ಆರಂಭದಲ್ಲಿ ದಿಶಾ ಎನ್ನುವ ನೆಗೆಟಿವ್ ಶೇಡ್ ಇರುವ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ನಟಿ ಶಾಂಭವಿ ಅವರು. ಇವರು ನಿಗೂಢ ರಾತ್ರಿ ಧಾರಾವಾಹಿಯಲ್ಲಿ ಮಂದಾಕಿನಿಯ ಪಾತ್ರದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾದವರು. ನಟಿ ಶಾಂಭವಿ ಅವರ ಬಗ್ಗೆ ಪ್ರತ್ಯೇಕವಾದ ಪರಿಚಯದ ಅಗತ್ಯ ಇಲ್ಲ ಎನ್ನುವಷ್ಟು ಜನಪ್ರಿಯತೆಯನ್ನು ಅವರು ಪಡೆದುಕೊಂಡಿದ್ದಾರೆ ಮಾತ್ರವೇ ಅಲ್ಲದೇ ತಮಿಳಿನ ಧಾರಾವಾಹಿಗಳಲ್ಲಿ ಕೂಡಾ ನಟಿಸುವ ಮೂಲಕ ಅವರು ಕಿರುತೆರೆ ಲೋಕದ ಜನಪ್ರಿಯ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ. ಇನ್ನು ಶಾಂಭವಿ ಅವರು ಕಿರುತೆರೆ ಮಾತ್ರವೇ ಅಲ್ಲದೆ ಸಿನಿಮಾವೊಂದರಲ್ಲಿ ನಟಿಸುವ ಮೂಲಕ ಚಿತ್ರಜಗತ್ತಿಗೆ ಸಹಾ ಎಂಟ್ರಿ ನೀಡಿದ್ದಾಗಿದೆ.

ಕನ್ನಡದಲ್ಲಿ ಮಾತ್ರವೇ ಅಲ್ಲದೆ ಇಡೀ ಭಾರತದ ಸಿನಿಮಾರಂಗದ ಗಮನವನ್ನು ಸೆಳೆದಂತಹ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್ ಸಿನಿಮಾದಲ್ಲಿ ಶಾಂಭವಿ ಅವರು ಒಂದು ಸಣ್ಣ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಶಾಂಭವಿ ಅವರು ಕಿರುತೆರೆಯಲ್ಲಿ ಸಾಕಷ್ಟು ಚಟುವಟಿಕೆಯಿಂದ ತೊಡಗಿಕೊಂಡಿದ್ದರು, ಆದರೆ ಸದ್ಯಕ್ಕೆ ಶಾಂಭವಿ ಅವರು ಸ್ವಲ್ಪ ಕಾಲದಿಂದಲೂ ನಟನೆಯಿಂದ ಒಂದು ಬ್ರೇಕ್ ಪಡೆದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಕುಟುಂಬ ಹಾಗೂ ಅವರ ಮುದ್ದಾದ ಅವಳಿ ಜವಳಿ ಮಕ್ಕಳು. ಹೌದು ಶಾಂಭವಿ ಅವರು ಮುದ್ದಾದ ಅವಳಿ ಜವಳಿ ಮಕ್ಕಳಿಗೆ ತಾಯಿಯಾಗಿದ್ದು, ತಮ್ಮ ಮಕ್ಕಳ ಆರೈಕೆಯಲ್ಲಿ ಸಂತಸದ ದಿನಗಳನ್ನು ಕಳೆಯುತ್ತಿದ್ದಾರೆ.

ಶಾಂಭವಿ ಅವರು ಪತಿ ಹಾಗೂ ಮುದ್ದಾದ ಎರಡು ಮಕ್ಕಳ ಜೊತೆ ಅಂದವಾದ ಫೋಟೋ ಶೂಟ್ ಮಾಡಿಸಿ, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಇಬ್ಬರು ಮಕ್ಕಳನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈಗ ಇವೆಲ್ಲವುಗಳ ಬೆನ್ನಲ್ಲೇ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಮಾಡಿರುವ ಶಾಂಭವಿ ಅವರು ತಮ್ಮ ಇಬ್ಬರು ಮಕ್ಕಳ ಹೆಸರುಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಅವಳಿ ಜವಳಿ ಮಕ್ಕಳಲ್ಲಿ ಗಂಡು ಮಗುವಿಗೆ ದುಶ್ಯಂತ್ ಚಕ್ರವರ್ತಿ ಹಾಗೂ ಹೆಣ್ಣು ಮಗುವಿಗೆ ದುರ್ಗಾ ಭಗವತಿ ಎನ್ನುವ ಹೆಸರುಗಳನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ. ಶಾಂಭವಿ ಅವರು ಮಾಡಿರುವ ಪೋಸ್ಟಿಗೆ ಅವರ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸುತ್ತಾ, ಮಕ್ಕಳ ಹೆಸರು ಬಹಳ ಸುಂದರವಾಗಿದೆ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Leave A Reply

Your email address will not be published.