ತಮ್ಮಮಕ್ಕಳ ಭವಿಷ್ಯಕ್ಕಾಗಿ ಬಹುದೊಡ್ಡ ನಿರ್ಧಾರಕ್ಕೆ ಮುಂದಾಗೇ ಬಿಟ್ರ ನಟಿ ಶಿಲ್ಪಾ ಶೆಟ್ಟಿ??

Written by Soma Shekar

Published on:

---Join Our Channel---

ಉದ್ಯಮಿ ಹಾಗೂ ಬಾಲಿವುಡ್ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮಾಡಿಕೊಂಡಿರುವ ಎಡವಟ್ಟು, ಎದುರಾಗಿರುವ ಪರಿಸ್ಥಿತಿ ಬಗ್ಗೆ ಈಗಾಗಲೇ ಇಡೀ ದೇಶದಲ್ಲೇ ಸುದ್ದಿಯಾಗಿದೆ. ಅ ಶ್ಲೀ ಲ ಸಿನಿಮಾ ತಯಾರಿಕೆ ಮತ್ತು ಹಂಚಿಕೆ ವಿಚಾರದಲ್ಲಿ ರಾಜ್ ಕುಂದ್ರಾ ಈಗಾಗಲೇ ನ್ಯಾಯಾಂಗ ಬಂ ಧ ನವನ್ನು ಎದುರಿಸುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಅವರಿಗೆ ಜಾಮೀನು ದೊರೆಯುತ್ತಿಲ್ಲ. ಎಲ್ಲಾ ಸಾಕ್ಷ್ಯಗಳು ರಾಜ್ ಕುಂದ್ರಾ ವಿ ರು ದ್ಧ ವಾಗಿಯೇ ಇದ್ದು ಸಾಕ್ಷ್ಯಗಳ ನಾಶಕ್ಕೆ ಅವಕಾಶವಿದೆ ಎನ್ನುವ ಕಾರಣಕ್ಕೆ ಅವರಿಗೆ ಜಾಮೀನು ನೀಡುತ್ತಿಲ್ಲವೆನ್ನಲಾಗಿದೆ. ಪತಿಯ ಈ ಉದ್ಯಮದ ಬಗ್ಗೆ ಯಾವುದೇ ಅರಿವು ಶಿಲ್ಪ ಅವರಿಗೆ ಇರಲಿಲ್ಲ ಎನ್ನಲಾಗಿದ್ದು, ಪ್ರಕರಣ ಬಯಲಿಗೆ ಬಂದ ಮೇಲೆ ಶಿಲ್ಪಾ ಶೆಟ್ಟಿ ತೀವ್ರವಾದ ಮುಜುಗರಕ್ಕೆ ಒಳಗಾಗಿದ್ದಾರೆ. ಅಲ್ಲದೇ ಈಗ ಇವೆಲ್ಲವುಗಳ ಹಿನ್ನೆಲೆಯಲ್ಲಿ ಶಿಲ್ಪ ಶೆಟ್ಟಿ ಒಂದು ದೊಡ್ಡ ನಿರ್ಧಾರ ಮಾಡುವ ಕಡೆ ಮುಖ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ.

ಶಿಲ್ಪಾ ಶೆಟ್ಟಿ ಅವರ ಆಪ್ತರೊಬ್ಬರು ಶಿಲ್ಪಾ ತಮ್ಮ ಪತಿಯಿಂದ ದೂರಾಗುವ ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿಯನ್ನು ಮಾದ್ಯಮವೊಂದಕ್ಕೆ ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣದ ನಂತರ ರಾಜ್ ಕುಂದ್ರಾ ಬಗ್ಗೆ ಹೊರಬರುತ್ತಿರುವ ಹೊಸ ಹೊಸ ವಿಷಯಗಳಿಂದ ಶಿಲ್ಪಾ ಬಹಳ ವಿಚಲಿತರಾಗಿದ್ದಾರೆ, ಅವರ ಮಕ್ಕಳು ಇನ್ನೂ ಚಿಕ್ಕವರು, ಅಲ್ಲದೇ ತಮ್ಮ ಮಕ್ಕಳ ಉತ್ತಮವಾದ ಭವಿಷ್ಯಕ್ಕಾಗಿ ತಮ್ಮ ಪತಿಯಿಂದ ದೂರ ಉಳಿಯಬೇಕಾದಂತಹ ಒಂದು ಅನಿವಾರ್ಯತೆ ಈಗ ಅವರಿಗೆ ಎದುರಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸದ್ಯಕ್ಕೆ ರಾಜ್ ಕುಂದ್ರಾ ಇನ್ನೂ ಜೈಲಿನಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ.

ರಾಜ್ ಕುಂದ್ರಾ ಅವರ ಜಾಮೀನಿಗಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಿದ ಹೊರತಾಗಿಯೂ ಅವರಿಗೆ ಜಾಮೀನು ಸಿಗುತ್ತಿಲ್ಲ. ಅವರು ಜೈಲಿನಿಂದ ಹೊರ ಬಂದ ಕೂಡಲೇ ಶಿಲ್ಪಾ ಶೆಟ್ಟಿ ಅವರು ಪತಿಯೊಡನೆ ವಿಚ್ಛೇದನದ ಕುರಿತಾಗಿ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ. ಶಿಲ್ಪಾ ಅವರ ಈ ನಿರ್ಧಾರದ ಕುರಿತಾಗಿ ಮಾದ್ಯಮಗಳಲ್ಲಿ ಸುದ್ದಿಯಾಗಿದ್ದು, ಇದು ಅಧಿಕೃತವೋ ಅಲ್ಲವೋ ತಿಳಿಯಬೇಕಿದೆ. ಇನ್ನು ಬಾಲಿವುಡ್ ನಲ್ಲಿ ಸೆಲೆಬ್ರಿಟಿಗಳ ಜೀವನದಲ್ಲಿ ಮದುವೆ, ವಿಚ್ಚೇದನ ಎನ್ನುವುದು ತೀರಾ ಸಾಮಾನ್ಯ ಎನ್ನುವ ಮಟ್ಟಕ್ಕೆ ಬೆಳೆದಿದೆ. ಶಿಲ್ಪಾ ಶೆಟ್ಟಿ ಅವರ ಮುಂದಿನ ನಿರ್ಧಾರವೇನು?? ಅದಕ್ಕೆ ಅವರೇ ಉತ್ತರ ನೀಡಬೇಕಿದೆ.

Leave a Comment