ತಮ್ಮನ ಮದುವೆಯಲ್ಲಿ ಉಳಿದು ಹೋದ ಆಹಾರ: ಆದ್ರೆ ರಸ್ತೆಗಿಳಿದು ಈ ಮಹಿಳೆ ಮಾಡಿದ ಕೆಲಸ ರಿಯಲೀ ಗ್ರೇಟ್

Written by Soma Shekar

Published on:

---Join Our Channel---

ಭಾರತದಲ್ಲಿ ಮದುವೆಗಳ ಹೆಸರಿನಲ್ಲಿ ಹಣವನ್ನು ನೀರಿನಂತೆ ಹರಿಸಲಾಗುತ್ತದೆ. ಮದುವೆ ಮನೆಯ ಅಲಂಕಾರದಿಂದ ಹಿಡಿದು ಮದುವೆ ಊಟದವರೆಗೂ ಬಹಳ ಹಣವನ್ನು ಖರ್ಚು ಮಾಡಲಾಗುತ್ತದೆ. ಅದರಲ್ಲೂ ಶ್ರೀಮಂತರ ಮನೆ ಮದುವೆ ಎಂದರೆ ಎಲ್ಲೆಲ್ಲೂ ಅದ್ದೂರಿತನ ಕಾಣುತ್ತದೆ. ಮದುವೆ ಸೆಲೆಬ್ರಿಟಿಗಳದೇ ಆಗಿರಲಿ ಅಥವಾ ಸಾಮಾನ್ಯರದ್ದೇ ಆಗಿರಲಿ ಇಲ್ಲಿ ಆಹಾರ ವ್ಯರ್ಥವಾಗುವುದು ಮಾತ್ರ ಸಾಮಾನ್ಯವಾದ ವಿಷಯವೇ ಆಗಿದೆ. ಎಷ್ಟೇ ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರ ಕಳಕಳಿಯ ಹೊರತಾಗಿಯೂ ಅನ್ನ ವ್ಯರ್ಥವಾಗುತ್ತಿದೆ.

ಇಂತಹ ಒಂದು ಮದುವೆಯಲ್ಲಿ ಉಳಿದ ಆಹಾರವನ್ನು ಮದುವೆಗಾಗಿ ಅಲಂಕಾರಗೊಂಡಿದ್ದ ಮಹಿಳೆಯೊಬ್ಬರು, ಅಗತ್ಯ ಇರುವವರಿಗೆ ಹಂಚುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಎಲ್ಲಾ ಹರಿದಾಡುತ್ತಿರುವ ಈ ಫೋಟೋ ಕೊಲ್ಕೊತ್ತಾದ ರಾನಾಘಾಟ್ ಸ್ಟೇಷನ್ ನಲ್ಲಿ ನಡೆದ ಘಟನೆಯದ್ದು ಎನ್ನಲಾಗಿದ್ದು, ಮಹಿಳೆಯ ಈ ಕಾರ್ಯಕ್ಕೆ ದೇಶ ವ್ಯಾಪಿಯಾಗಿ ಮೆಚ್ಚುಗೆಗಳು ಹರಿದು ಬರುತ್ತಿದೆ.

ಫೋಟೋ ನೋಡಿದಾಗ ಮದುವೆಗಾಗಿ ಸಿಂಗರಿಸಿಕೊಂಡ ಮಹಿಳೆಯೊಬ್ಬರು, ದುಬಾರಿ ಸೀರೆ ಧರಿಸಿ, ಒಡವೆಗಳನ್ನು ತೊಟ್ಟು, ಒಂದು ಕಡೆ ಕುಳಿತು ದೊಡ್ಡ ಪಾತ್ರೆಗಳಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಇಟ್ಟು ಕೊಂಡು ಹಂಚುತ್ತಿರುವುದನ್ನು ನಾವು ನೋಡಬಹುದು. ಫೋಟೋಗ್ರಾಫರ್ ನೀಲಾಂಜನ್ ಮಂಡಲ್ ಅವದ ಕ್ಯಾಮೆರಾದಲ್ಲಿ ಈ ಮಾನವೀಯ ಕಾರ್ಯದ ಫೋಟೋ ಸೆರೆಯಾಗಿದೆ. ಇನ್ನು ಈ ಘಟನೆಯ ವಿವರಗಳು ಕೂಡಾ ಆಸಕ್ತಿಕರವಾಗಿದೆ.

ಆಹಾರ ಹಂಚುತ್ತಿರುವ ಮಹಿಳೆಯ ಸಹೋದರನ ಮದುವೆ ಆರತಕ್ಷತೆ ಸಮಾರಂಭ ಇತ್ತು ಎನ್ನಲಾಗಿದೆ, ಸಮಾರಂಭ ಮುಗಿದ ನಂತರ ಅಲ್ಲಿ ಅತಿಥಿಗಳಿಗಾಗಿ ಮಾಡಿಸಿದ್ದ ಆಹಾರ ಉಳಿದಿರುವುದನ್ನು ಕಂಡು ಆಕೆ ಅದನ್ನು ವ್ಯರ್ಥ ಮಾಡಬಾರದು ಎಂದು ರೈಲ್ವೆ ನಿಲ್ದಾಣದ ಬಳಿಗೆ ಅದನ್ನು ತಂದು ಹಸಿದವರಿಗೆ, ಅಗತ್ಯ ಇರುವವರಿಗೆ ಹಂಚಿದ್ದಾರೆ. ಇನ್ಸ್ಟಾಗ್ರಾಂ ನಲ್ಲಿ ಐಜಿ ಕಲ್ಕತ್ತಾ ಎನ್ನುವ ಖಾತೆಯಲ್ಲಿ ಮಹಿಳೆಯ ಈ ಫೋಟೋ ವೈರಲ್ ಆಗಿದೆ. ಅಸಂಖ್ಯಾತ ಜನರು ಕಾಮೆಂಟ್ ಮಾಡಿ ಮೆಚ್ಚುಗೆ ನೀಡುತ್ತಾ ಸಾಗಿದ್ದಾರೆ.

ತಮ್ಮನ ಮದುವೆಯ ರಿಸಪ್ಷನ್ ನಲ್ಲಿ ಉಳಿದು ವ್ಯರ್ಥ ಆಗಬೇಕಿದ್ದು ಆಹಾರವನ್ನು ಹಸಿದ ಹೊಟ್ಟೆಗಳಿಗೆ ಸೇರಿಸಲು ಈ ಮಹಿಳೆ ಮಾಡಿದ ಕಾರ್ಯ ನಿಜಕ್ಕೂ ಸ್ಪೂರ್ತಿದಾಯಕ ಹಾಗೂ ಆದರ್ಶನೀಯ. ಎಷ್ಟೋ ಜನ ವ್ಯರ್ಥ ಆಗುವುದನ್ನು ನೋಡಿ ಮರುಗುತ್ತಾರೆಯೇ ಹೊರತು ಅಗತ್ಯ ಇರುವವರಿಗೆ ಹಂಚಲು ಮುಂದಾಗುವುದಿಲ್ಲ. ಅಂತಹವರ ಮುಂದೆ ಈ ಮಹಿಳೆ ನಿಜಕ್ಕೂ ಗ್ರೇಟ್ ಅಲ್ಲವೇ??

Leave a Comment