ತಮಿಳು ಸ್ಟಾರ್ ನಟ ಧನುಷ್ ಮೇಲೆ ಕೇಸ್: ಸಮನ್ಸ್ ಜಾರಿ ಮಾಡಿದ ಮದ್ರಾಸ್ ಹೈಕೋರ್ಟ್

Entertainment Featured-Articles News

ತಮಿಳು ಚಿತ್ರರಂಗದ ಪ್ರಖ್ಯಾತ ನಟ ಧನುಷ್ ಅವರು ಮತ್ತೊಮ್ಮೆ ಮಾದ್ಯಮಗಳ ಪ್ರಮುಖ ಸುದ್ದಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ತಮ್ಮ ವಿಚ್ಚೇದನದ ವಿಷಯವಾಗಿ ಭಾರೀ ಸುದ್ದಿಯಾಗಿದ್ದ, ನಟ ಧನುಷ್ ಅವರ ಅಸಲಿ ತಂದೆ-ತಾಯಿ ಯಾರು ? ಎನ್ನುವ ವಿಚಾರವಾಗಿ ಇದೀಗ ದೊಡ್ಡ ಚರ್ಚೆಯೊಂದು ಪ್ರಾರಂಭವಾಗಿದೆ. ನಟ ಧನುಷ್ ತಮ್ಮ ಮಗನೆಂದು ಹೇಳಿಕೊಂಡು ವೃದ್ಧ ದಂಪತಿಯೊಂದು ಕೋರ್ಟ್ ಮೆಟ್ಟಿಲನ್ನು ಏರಿದೆ. ವೃದ್ಧ ದಂಪತಿಗಳು ನೀಡಿರುವ ದೂರಿನ ಆಧಾರದಲ್ಲಿ, ಮದ್ರಾಸ್ ಹೈಕೋರ್ಟ್ ತಮಿಳಿನ ಸ್ಟಾರ್ ನಟ ಧನುಷ್ ಅವರಿಗೆ ಸಮನ್ಸ್ ಕೂಡಾ ಜಾರಿ ಮಾಡಿದೆ.

ಕಥಿರೇಸನ್ ಮತ್ತು ಮೀನಾಕ್ಷಿ ಹೆಸರಿನ ವೃದ್ಧ ದಂಪತಿಯು ಸ್ಟಾರ್ ನಟ ಎನಿಸಿಕೊಂಡಿರುವ ಧನುಷ್ ತಮ್ಮ ಮಗನೆಂದು ಹೇಳಿರುವುದು ಮಾತ್ರವೇ ಅಲ್ಲದೇ ಕಳೆದ ಆರು ವರ್ಷಗಳ ಹಿಂದೆ ಅವರು ಮಧುರೈ ಜಿಲ್ಲೆಯ ಮೆಲೂರ್ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಿದ್ದರು. ಅವರು ತಮ್ಮ ಜೀವನ ನಿರ್ವಹಣೆಗೆ ಮಗನಾಗಿರುವ ನಟ ಧನುಷ್ ಮಾಸಿಕ 65 ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಮನವಿಯನ್ನು ಮಾಡಿಕೊಂಡಿದ್ದರು.

ಕಳೆದ ಆರು ವರ್ಷಗಳಿಂದ ಕೂಡ ಈ ಪ್ರಕರಣವು ಸಾಗುತ್ತಲೇ ಇದೆ. ಕಥಿರೇಸನ್ ಮತ್ತು ಮೀನಾಕ್ಷಿ ದಂಪತಿ ನಟ ಧನುಷ್ ತಮ್ಮ ಮೂರನೆಯ ಮಗನೆಂದು ಹೇಳಿದ್ದು, ಆತ ನಟನಾಗಬೇಕೆಂಬ ಉದ್ದೇಶದಿಂದ ಮನೆಯಿಂದ ಓಡಿ ಹೋಗಿದ್ದನು ಎಂದು ಹೇಳಿದ್ದಾರೆ. ಆತನ ನಿಜವಾದ ತಂದೆ-ತಾಯಿ ನಾವೇ ಎಂದು ಹೇಳಿರುವ ದಂಪತಿ, ಅದಕ್ಕೆ ಸಾಕ್ಷಿಯಾಗಿ ಜನನ ಪ್ರಮಾಣ ಪತ್ರ ಹಾಗೂ ಎಸೆಸೆಲ್ಸಿ ಮೆಮೊ ಗಳನ್ನು ನೀಡಿದ್ದಾರೆ. ಅಲ್ಲದೆ ಈ ವಿಚಾರವಾಗಿ ಪಿತೃತ್ವ ಪರೀಕ್ಷೆಯನ್ನು ಮಾಡಬೇಕೆಂದು ಬೇಡಿಕೆಯನ್ನು ಇಡಲಾಗಿತ್ತು.

ಆದರೆ ಆನಂತರ ಕೋರ್ಟ್ ಆದೇಶದ ಬಳಿಕ ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಪ್ರಕರಣವನ್ನು ವಜಾ ಮಾಡಲಾಗಿತ್ತು. ಅಲ್ಲದೇ 2020ರಲ್ಲಿ ಪ್ರಕರಣವನ್ನು ರದ್ದು ಮಾಡಲಾಗಿತ್ತು. ಆದರೆ ಇದೀಗ ವೃದ್ಧ ದಂಪತಿ ಕೋರ್ಟ್ ನ ಆದೇಶವನ್ನು ರದ್ದು ಮಾಡಬೇಕೆಂದು ಮತ್ತೊಮ್ಮೆ ಕೋರ್ಟ್ ಮೆಟ್ಟಿಲನ್ನೂ ಏರಿದ್ದಾರೆ. ಪ್ರಸ್ತುತ ಕೋರ್ಟ್ ನಟ ಧನುಷ್ ಅವರಿಗೆ ಸಮನ್ಸ್ ನೀಡಿರುವ ವಿಚಾರ ದೊಡ್ಡ ಸುದ್ದಿಯಾಗಿದ್ದು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ನಟ ಧನುಷ್ ಅವರು ತಮ್ಮ ನಿಲುವನ್ನು ಸಾಬೀತು ಮಾಡಲು ನೀಡಿರುವ ಸಾಕ್ಷಿಗಳನ್ನು ಪರಿಶೀಲನೆ ನಡೆಸುವಂತೆ ಕೋರ್ಟ್ ಪೊಲೀಸ್ ಇಲಾಖೆಗೆ ಆದೇಶವನ್ನು ನೀಡಿದೆ. ನಟ ಧನುಷ್ ಅವರ ವಿಚಾರವಾಗಿ ಎದ್ದಿರುವ ಈ ವಿ ವಾ ದವು ಎಷ್ಟು ಸುಳ್ಳು ಅಥವಾ ಎಷ್ಟು ನಿಜ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಇದಕ್ಕೆ ಸರಿಯಾದ ಉತ್ತರ ಸಿಗಬಹುದೆಂಬ ನಿರೀಕ್ಷೆ ಇದೆ.

Leave a Reply

Your email address will not be published.