ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಘೋರ ಮದುವೆ: ಇದು ಸಾಮಾನ್ಯ ಮದುವೆ ಖಂಡಿತ ಅಲ್ಲ

Written by Soma Shekar

Published on:

---Join Our Channel---

ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿನ ಅರಿಯಮಂಗಳಂ ಗೆ ಸೇರಿದ ವ್ಯಕ್ತಿ ಮಣಿಕಂಠನ್. ಈತ ಕಾಶಿ ಯಲ್ಲಿ ಅಘೋರಾ ಉಪಾಸನೆಯನ್ನು ಮಾಡಿ, ತಾನೊಬ್ಬ ಅಘೋರನಾಗಿ ಪರಿವರ್ತನೆ ಹೊಂದಿದ ನಂತರ ತನ್ನ ಗ್ರಾಮಕ್ಕೆ ಮರಳಿ ಬಂದು, ಜೈ ಅಘೋರಾ ಕಾಳಿ ಮಾತ ವಿಗ್ರಹವನ್ನು ಸ್ಥಾಪನೆ ಮಾಡಿ ಸ್ವಗ್ರಾಮದಲ್ಲಿ ದೇವತಾರಾಧನೆಯನ್ನು ಮಾಡುತ್ತಿದ್ದರು ಹಾಗೂ ತಮ್ಮ ಶಿಷ್ಯರಿಗೆ ಅಘೋರ ಉಪಾಸನೆಯನ್ನು ಹಾಗೂ ಅದರ ಆಚರಣೆಯ ವಿಧಿ ವಿಧಾನಗಳ ಕುರಿತಾಗಿ ತಮ್ಮ ಶಿಷ್ಯರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದರು. ಈಗ ಈ ಅಘೋರಾ ಮಣಿಕಂಠನ್ ಅವರ ಮದುವೆ ತಮಿಳಿನಾಡಿನಲ್ಲಿ ಸಂಚಲನಕ್ಕೆ ಕಾರಣವಾಗಿದೆ.

ಹೌದು, ಅಘೋರಾ ಮಣಿಕಂಠನ್ ತನ್ನ ಬಳಿ ಶಿಷ್ಯಳಾಗಿದ್ದ ಮಹಿಳಾ ಅಘೋರಿಯನ್ನು ವಿವಾಹವಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಅಘೋರಿಣಿಗೆ ಮಾಂಗಲ್ಯ ಕಟ್ಟುವ ಮೂಲಕ ತನ್ನ ಸಹ ಧರ್ಮಚಾರಿಣಿಯಾಗಿ ಸ್ವೀಕರಿಸಿದ್ದು, ಈ ಅಘೋರಿ ಜೋಡಿಯ ಮದುವೆ ಸುದ್ದಿ ಬಹಳ ದೊಡ್ಡ ಸದ್ದನ್ನು ಮಾಡಿದೆ. ಮೂರು ವರ್ಷಗಳ ಹಿಂದೆ ತನ್ನ ಮೃತ ತಾಯಿಯ ದೇಹದ ಮೇಲೆ ಕೂತು ಆತ್ಮ ಶಾಂತಿಗಾಗಿ ಪ್ರಾರ್ಥನೆ ಮಾಡಿ ಮಣಿಕಂಠನ್ ಸುದ್ದಿಯಾಗಿದ್ದರು.

ಇದಾದ ನಂತರ ಕೆಲವೇ ದಿನಗಳ ಹಿಂದೆ ಅಗ್ನಿ ಪ್ರಮಾದವೊಂದರಲ್ಲಿ ಮರಣಿಸಿದ ತನ್ನ ಶಿಷ್ಯನೊಬ್ಬನ ದೇಹದ ಮೇಲೆ ಕೂತು ಧ್ಯಾನ, ಪೂಜೆ ಮಾಡಿದ ವಿಷಯ ಕೂಡಾ ಸುದ್ದಿಯಾಗಿತ್ತು ಎನ್ನಲಾಗಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ತನ್ನ ಅಘೋರಿ ಶಿಷ್ಯಳನ್ನು ಮದುವೆಯಾಗುವ ಮೂಲಕ ಮಣಿಕಂಠನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ತನ್ನ ಶಿಷ್ಯೆಯಾಗಿದ್ದ ಕೊಲ್ಕತ್ತಾ ಮೂಲದ ಸ್ತ್ರೀ ಅಘೋರಿಯನ್ನು ಮಣಿಕಂಠನ್ ಮದುವೆಯಾಗಿದ್ದಾರೆ.

ಈಕೆಯ ಹೆಸರು ಪ್ರಿಯಾಂಕ. ಮಣಿಕಂಠನ್ ಬಳಿ ಕಳೆದ ಎಂಟು ವರ್ಷಗಳಿಂದ ಶಿಷ್ಯ ವೃತ್ತಿಯನ್ನು ಮಾಡುತ್ತಿದ್ದ ಪ್ರಿಯಾಂಕ, ಆತನ ಜೊತೆಗೆ ಸೇರಿ ಅಘೋರಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಿದ್ದರು. ಮಣಿಕಂಠನ್ ಮದುವೆ ನಿನ್ನೆ ಮುಂಜಾನೆ ನಡೆದಿದ್ದು, ಮದುವೆಯ ವೇಳೆಯಲ್ಲೂ ಮೈಯಲ್ಲಾ ಭಸ್ಮಧಾರಣೆ ಮಾಡಿದ್ದ ಈ ಅಘೋರಿ ಜೋಡಿ, ವಿವಾಹ ವಿಧಿಗಳನ್ನು ಮುಗಿಸಿದ ನಂತರ ಕರುಪ್ಪಸ್ವಾಮಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ್ದಾರೆ. ಮಣಿಕಂಠನ್ ಮದುವೆ ಅವರ ಗುರು ಸಿದ್ಧಾರ್ಥ್ ವೇ ಮಧುರೈಪಾಲ್ಸಾಮಿ ಅವರ ಉಪಸ್ಥಿತಿಯಲ್ಲಿ ನಡೆದಿದೆ.

Leave a Comment