ತಮಗಿಂತ ಕಡಿಮೆ ವಯಸ್ಸಿನ ಪುರುಷರನ್ನು ವಿವಾಹವಾದ ಬಾಲಿವುಡ್ ಬೆಡಗಿಯರು: ಎಷ್ಟಿದೆ ವಯಸ್ಸಿನ ಅಂತರ??

Written by Soma Shekar

Published on:

---Join Our Channel---

ಬಾಲಿವುಡ್ ನಟಿಯರಲ್ಲಿ ಸ್ಟಾರ್ ನಟಿಯರಾಗಿ ಮೆರೆದ ಕೆಲವು ನಟಿಯರು ತಮ್ಮ ಮದುವೆಯ ವಿಚಾರದಲ್ಲಿ ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ಮದುವೆಯಾಗುವ ಮೂಲಕ ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದಾರೆ.‌ ಈಗ ಇದೇ ಸಾಲಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ. ಅವರೇ ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮೆರೆದ ಕತ್ರಿನಾ ಕೈಫ್. ಈ ನಟಿಯ ಮದುವೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಜೊತೆಗೆ ನಡೆದಿದ್ದು, ಇವರ ಅದ್ದೂರಿ ಮದುವೆಯ ವಿಚಾರಗಳು ಕಳೆದೆರಡು ದಿನಗಳಿಂದಲೂ ಮಾಧ್ಯಮಗಳ ಪ್ರಮುಖ ಸುದ್ದಿಗಳಲ್ಲಿ ಹರಿದಾಡಿದೆ.

ಇನ್ನು ವಯಸ್ಸಿನ ವಿಚಾರಕ್ಕೆ ಬರುವುದಾದರೆ ವಿಕ್ಕಿ ಕೌಶಲ್ ನಟಿ ಕತ್ರಿನಾಗಿಂತ ಐದು ವರ್ಷ ಚಿಕ್ಕವರಾಗಿದ್ದಾರೆ. ಚಿತ್ರರಂಗದ ಯಶಸ್ವಿ ಮಹಿಳೆಯರು ಹೀಗೆ ಕಿರಿಯ ವಯಸ್ಸಿನವರನ್ನು ಮದುವೆಯಾಗಿರುವುದು ಇದೇ ಮೊದಲೇನಲ್ಲ. ಕೆಲವೇ ದಿನಗಳ ಹಿಂದೆಯಷ್ಟೇ ನಟಿ ಕಂಗನಾ ರಣಾವತ್ ಕೂಡಾ ಇದೇ ವಿಚಾರವಾಗಿ ಯಾರ ಹೆಸರನ್ನು ಹೇಳದೇ, ಸಿನಿ ರಂಗದ ಯಶಸ್ವಿ ಮಹಿಳೆಯರು ತಮಗಿಂತ ಕಿರಿಯವರನ್ನು ಮದುವೆಯಾಗುವುದು ನೋಡಲು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದರು.

ಹಾಗಾದರೆ ಬಾಲಿವುಡ್ ನಲ್ಲಿ ವಯಸ್ಸಿನಲ್ಲಿ ತಮಗಿಂತಲೂ ಕಿರಿಯರನ್ನು ಮದುವೆಯಾದ ಕೆಲವು ಸ್ಟಾರ್ ನಟಿಯರು ಯಾರೆನ್ನುವ ವಿಚಾರವನ್ನು ಒಮ್ಮೆ ಗಮನಿಸೋಣ. ನಟಿ ಕತ್ರಿನಾ ಕೈಫ್ ಅವರಿಗೆ ಈಗ 39 ವರ್ಷ ವಯಸ್ಸು, ಅವರ ಪತಿ ವಿಕ್ಕಿ ಕೌಶಲ್ ರವರಿಗೆ 33 ವರ್ಷ ವಯಸ್ಸು. ಇನ್ನು ಬಾಲಿವುಡ್ ಸ್ಟಾರ್ ಆಗಿ, ಇದೀಗ ಹಾಲಿವುಡ್ ನಲ್ಲೂ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ತನಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಕಿರಿಯವರಾದ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದಾರೆ. ಪ್ರಿಯಾಂಕಾಗೆ ಈಗ 39 ವರ್ಷ ವಯಸ್ಸಾದರೆ, ಅವರ ಪತಿಗೆ 29 ವರ್ಷ ವಯಸ್ಸಾಗಿದೆ.

ಮಾಜಿ ಭುವನ ಸುಂದರಿ ಹಾಗೂ ಬಾಲಿವುಡ್ ಸ್ಟಾರ್ ನಟಿಯಾಗಿ ಮೆರೆದ ಐಶ್ವರ್ಯ ರೈ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಸೊಸೆ, ಅಭಿಷೇಕ್ ಬಚ್ಚನ್ ಅವರ ಪತ್ನಿಯಾಗಿದ್ದಾರೆ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಅವರಿಗಿಂತ ಮೂರು ವರ್ಷ ಕಿರಿಯವರಾಗಿದ್ದಾರೆ. ಪ್ರಸ್ತುತ ನಟಿ ಐಶ್ವರ್ಯ ಅವರಿಗೆ 48 ವರ್ಷ ವಯಸ್ಸಾಗಿದ್ದು ಅಭಿಷೇಕ್ ಬಚ್ಚನ್ ಅವರ ವಯಸ್ಸು 45 ಆಗಿದೆ. ಬಾಲಿವುಡ್ ನಲ್ಲಿ ಮೆರೆದ ಕೃಷ್ಣ ಸುಂದರಿ ನಟಿ ಬಿಪಾಶಾ ಬಸು ತನಗಿಂತ ಮೂರು ವರ್ಷ ಕಿರಿಯರಾದ ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾದರು.

ಬಿಪಾಶ ಗೆ ಈಗ 42 ವರ್ಷ ವಯಸ್ಸಾಗಿದ್ದು, ಅವರ ಪತಿ ಕರಣ್ ಗೆ 39 ವರ್ಷ. ಟಾಲಿವುಡ್ ನಲ್ಲಿ ಪ್ರಿನ್ಸ್ ಎನ್ನುವ ಖ್ಯಾತಿ ಪಡೆದಿರುವ ನಟ ಮಹೇಶ್ ಬಾಬು ಅವರ ಪತ್ನಿ ಕೂಡಾ ಬಾಲಿವುಡ್ ನಟಿ. ನಮ್ರತಾ ಶಿರೋಡ್ಕರ್ ಹಾಗೂ ಮಹೇಶ್ ಬಾಬು ನಡುವೆ ಮೂರು ವರ್ಷಗಳ ವಯಸ್ಸಿನ ಅಂತರವಿದೆ. ನಮ್ರತಾ ಶಿರೋಡ್ಕರ್ ಅವರಿಗೆ ಈಗ 49 ವಯಸ್ಸು ಮಹೇಶ್ ಬಾಬು ಅವರಿಗೆ 46 ವರ್ಷ ವಯಸ್ಸಾಗಿದೆ. ಇನ್ನು ಬಾಲಿವುಡ್ ನ ಮತ್ತೊಬ್ಬ ಹಿರಿಯ ನಟ ಸ್ಟಾರ್ ನಟ ಸೈಫ್ ಆಲಿಖಾನ್.

ಸೈಫ್ ಗೆ ಈಗ 51 ವರ್ಷ ವಯಸ್ಸಾಗಿದೆ. ಆದರೆ ಅವರ ಮೊದಲ ಪತ್ನಿ ಅಮೃತಾ ಸಿಂಗ್ ಅವರಿಗೆ ಈಗ 63 ವರ್ಷ ವಯಸ್ಸಾಗಿದೆ. ನನಗಿಂತ 12 ವರ್ಷ ನಟಿಯನ್ನು ಮದುವೆಯಾಗಿದ್ದರು ಸೈಫ್. ನಟಿ ನೇಹಾ ಧೂಪಿಯ ಸಹಾ ತಮ್ಮ‌ ಪತಿ ಅಂಗದ್ ಬೇಡಿಗಿಂತ ಮೂರು ವರ್ಷ ದೊಡ್ಡವರು. ಹೀಗೆ ಚಿತ್ರರಂಗದಲ್ಲಿ ಯಶಸ್ಸನ್ನು ಪಡೆದ ಕೆಲವು ನಟಿಯರು ವೈಯಕ್ತಿಕ ಜೀವನದಲ್ಲಿ ತಮಗಿಂತ ಕಿರಿಯ ನಟರನ್ನು ಮದುವೆಯಾಗಿರುವುದು ವಿಶೇಷವಾಗಿದೆ. ಅದರಲ್ಲಿ ಕೆಲವು ನಟಿಯರು ಅತ್ಯಂತ ಸಂತೋಷವಾದ ಜೀವನವನ್ನು ನಡೆಸುವ ಮೂಲಕ ಉತ್ತಮವಾದ ಬಾಂಧವ್ಯ ಹಾಗೂ ಪ್ರೀತಿಗೆ ವಯಸ್ಸು ಎಂದಿಗೂ ಅಡ್ಡಿಯಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

Leave a Comment