ತನ್ನ ಸಿನಿಮಾ ಕನ್ನಡಕ್ಕೆ ಡಬ್ ಮಾಡಲ್ಲ ಅಂದ ನಟನ ಮೇಲೆ ಕನ್ನಡಿಗರು ಗರಂ!! ಕ್ಷಮೆ ಕೇಳಿದ ನಟ

Entertainment Featured-Articles News

ತೆಲುಗಿನ ನಟ ನಾನಿ ತಮ್ಮ ಹೊಸ ಸಿನಿಮಾ ಅಂಟೇ ಸುಂದರಾನಿಕಿ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಆದರೆ ಈ ಸಿನಿಮಾ ವಿಚಾರವಾಗಿ ನಾನಿ ಕನ್ನಡಿಗರ ಸಿಟ್ಟು ಮತ್ತು ಅಸಮಾಧಾನಕ್ಕೆ ಕಾರಣವಾಗಿದ್ದಾರೆ. ಹೌದು ನಾನಿ ಅವರ ಅಭಿನಯದ ಈ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ನಲ್ಲಿ ತೆರೆಗೆ ಬರುತ್ತಿದೆ, ಆದರೆ ಸಿನಿಮಾ ಕನ್ನಡಕ್ಕೆ ಡಬ್ ಆಗಿಲ್ಲ. ಸಿನಿಮಾ ಟೀಸರ್ ಬಿಡುಗಡೆ ವೇಳೆ ನಾನಿ ಸಿನಿಮಾವನ್ನು ಏಕೆ ಕನ್ನಡಕ್ಕೆ ಡಬ್ ಮಾಡಿಲ್ಲ ಎನ್ನುವ ಕಾರಣವನ್ನು ಸಹಾ ತಿಳಿಸಿದ್ದರು. ಅವರು ನೀಡಿದ ಕಾರಣವೇ ಅನೇಕರ ಅಸಮಾಧಾನಕ್ಕೆ ಕಾರಣವಾಯಿತು.

ನಟ ನಾನಿ, ಬಹುತೇಕ ಕನ್ನಡಿಗರಿಗೆ ತೆಲುಗು ಅರ್ಥವಾಗುತ್ತದೆ. ಈ ಹಿಂದೆಯೂ ಹಲವು ತೆಲುಗು ಸಿನಿಮಾಗಳು ತೆಲುಗು ಭಾಷೆಯಲ್ಲಿಯೇ ಕರ್ನಾಟಕದಲ್ಲಿ ಗೆಲುವನ್ನು ಪಡೆದಿವೆ. ಅವರು ತೆಲುಗಿನಲ್ಲಿಯೇ ಸಿನಿಮಾವನ್ನು ನೋಡಲು ಇಷ್ಟಪಡುತ್ತಾರೆ. ಆದ್ದರಿಂದಲೇ ನಮ್ಮ‌ ಸಿನಿಮಾವನ್ನು ಸಹಾ ಕನ್ನಡಿಗರು ತೆಲುಗು ಭಾಷೆಯಲ್ಲಿಯೇ ನೋಡುತ್ತಾರೆ ಎನ್ನುವ ಮೂಲಕ ಕನ್ನಡಕ್ಕೆ ಏಕೆ ಡಬ್ ಮಾಡಿಲ್ಲ ಎನ್ನುವುದರ ಸ್ಪಷ್ಟನೆಯನ್ನು ನೀಡಿದ್ದರು.

ಆದರೆ ನಾನಿ ಹೇಳಿದ ಮಾತುಗಳು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ನಾನಿ ಮಾತಿಗೆ ವಿ ರೋ ಧ ವನ್ನು ವ್ಯಕ್ತಪಡಿಸಿದ್ದಾರೆ. ನಾವು ನಿಮ್ಮ‌ ಸಿನಿಮಾ ಕನ್ನಡದಲ್ಲಿ ಡಬ್ ಆದರೆ ಮಾತ್ರ ನೋಡುತ್ತೇವೆ. ಇಲ್ಲದಿದ್ದರೆ ಸಿನಿಮಾ ನೋಡೋದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ನಮಗೆ ತೆಲುಗು ಅರ್ಥವಾಗುವುದಿಲ್ಲ. ನಾವು ತೆಲುಗಿನಲ್ಲಿ ಸಿನಿಮಾ‌ ನೋಡಲು ಇಷ್ಟಪಡುವುದಿಲ್ಲ ಎಂದು ಸಹಾ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಕನ್ನಡಿಗರು ಈ ಪರಿಯಾಗಿ ಸಿಟ್ಟಾಗಿದ್ದನ್ನು ಕಂಡು ನಟ ನಾನಿ ಈಗ ಕ್ಷಮೆ ಯಾಚಿಸಿದ್ದಾರೆ. ಡಬ್ಬಿಂಗ್ ಇಲ್ಲದೇ ಇರುವಾಗಲೂ ಅನೇಕ ಕನ್ನಡದ ಕುಟುಂಬಗಳು ನಮ್ಮ ತೆಲುಗು ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿವೆ ಎನ್ನುವುದಷ್ಟೇ ನನ್ನ ಮಾತಿನ ಅರ್ಥವಾಗಿತ್ತು. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಅದು ಬೇರೆಯದ್ದೇ ರೂಪವನ್ನು ಪಡೆದುಕೊಂಡಿದೆ. ಸರಿಯಾಗಿ ಹೇಳಲು ಸಾಧ್ಯವಾಗದಿದ್ದಕ್ಕೆ ಕ್ಷಮೆ‌ ಕೇಳುತ್ತೇನೆ. ಕನ್ನಡ ಸಿನಿಮಾಗಳು ಗಡಿಯ ಹೊರಗೆ ಮಾಡುತ್ತಿರುವ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

Leave a Reply

Your email address will not be published.