ತನ್ನ ಸಿನಿಮಾದಿಂದ ಹಾಸ್ಯ ನಟ ಬ್ರಹ್ಮಾನಂದಂರನ್ನೇ ಹೊರಹಾಕಿದ ನಟ ನಿತಿನ್: ಅಲ್ಲಿ ನಡೆದಿದ್ದು ಏನು??

Entertainment Featured-Articles News
91 Views

ಹಾಸ್ಯನಟ ಬ್ರಹ್ಮಾನಂದಂ ಎಂದರೆ ದಕ್ಷಿಣ ಸಿನಿಮಾ ರಂಗದಲ್ಲಿ ಇದೊಂದು ದೊಡ್ಡ ಹೆಸರು. ಹಾಸ್ಯ ನಟ ಬ್ರಹ್ಮಾನಂದಂ ಎಂದರೆ ಈ ಹೆಸರು ತಿಳಿಯದೇ ಇರುವವರೇ ಇಲ್ಲ ಎನ್ನುವಷ್ಟು ಹೆಸರು ಮಾಡಿರುವ ಈ ನಟನನ್ನು ತೆಲುಗು ಚಿತ್ರರಂಗದಲ್ಲಿ ಹಾಸ್ಯ ಬ್ರಹ್ಮ ಎಂದೇ ಕರೆಯಲಾಗುತ್ತದೆ. ತೆಲುಗು ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ ಕೂಡಾ ಆಗಿದ್ದಾರೆ ಬ್ರಹ್ಮಾನಂದಂ. ತೆಲಗು ಸಿನಿಮಾ ರಂಗದಲ್ಲಿ ಬಹಳ ಹಿಂದಿನಿಂದಲೂ ಸಹಾ ಹಾಸ್ಯ ನಟರಿಗೆ ತಮ್ಮದೇ ಆದ ವಿಶೇಷ ಸ್ಥಾನವಿದೆ. ಅದರಲ್ಲಿ ದಿಗ್ಗಜ ಸ್ಥಾನ ಪಡೆದು ಹಾಸ್ಯ ಕಲಾವಿದರಿದ್ದಾರೆ.

ತೆಲುಗು ಸಿನಿಮಾ ರಂಗದಲ್ಲಿ ಹಿಂದಿನಿಂದ ಇಂದಿನವರೆಗೂ ಸಹಾ ಹಾಸ್ಯಕ್ಕೆ ಇರುವ ವಿಶೇಷ ಪ್ರಾಮುಖ್ಯತೆಯಿಂದಾಗಿಯೇ ಸ್ಟಾರ್ ನಟರಷ್ಟೇ ಹಾಸ್ಯ ನಟರೂ ಫೇಮಸ್ ಆಗಿದ್ದಾರೆ. ಅಲ್ಲದೇ ಕೆಲವು ನಿರ್ದೇಶಕರು ಹಾಸ್ಯ ನಟರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿನಿಮಾ ಕಥೆಗಳನ್ನು‌ ಹಾಗೂ ಪಾತ್ರಗಳನ್ನು ಸೃಷ್ಟಿಸಿರುವುದುಂಟು. ದಶಕಗಳೇ ಕಳೆದರೂ ಸಹಾ ಬ್ರಹ್ಮಾನಂದಂ ಅವರ ಬೇಡಿಕೆ ಮಾತ್ರ ಇಂದಿಗೂ ತಗ್ಗಿಲ್ಲ.‌ ಆದರೆ ಇತ್ತೀಚಿನ ದಿನಗಳಲ್ಲಿ ಬ್ರಹ್ಮಾನಂದಂ ಅವರೇ ತಮ್ಮ ವಯಸ್ಸಿನ ಕಾರಣದಿಂದ ಸಿನಿಮಾಗಳ ಸಂಖ್ಯೆ ಮಾಡಿದ್ದಾರೆ.

ಬ್ರಹ್ಮಾನಂದಂ ಅವರು ಪ್ರಸ್ತುತ ನಿತಿನ್ ನಾಯಕನಾಗಿ ನಟಿಸಿರುವ, ರಾಜಶೇಖರ್ ನಿರ್ದೇಶನದ ಮಾಚರ್ಲ ನಿಯೋಜಕವರ್ಗಂ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು ಇದೀಗ ಈ ಸಿನಿಮಾದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡಿದೆ. ನಾಯಕ ನಟ ನಿತಿನ್ ಅವರ ನಿರ್ಮಾಣದ ಈ ಸಿನಿಮಾದಿಂದ ನಟ ನಿತಿನ್ ಅವರು ಬ್ರಹ್ಮಾನಂದಂ‌ ಅವರಿಗೆ ಕೊಕ್ ಕೊಟ್ಟಿದ್ದಾರೆ ಎನ್ನುವ ಸುದ್ದಿಯೊಂದು ಟಾಲಿವುಡ್ ನಲ್ಲಿ ಈಗ ಹಾಟ್ ಟಾಪಿಕ್ ಆಗಿದೆ.‌ ನಟ ನಿತಿನ್ ಬ್ರಹ್ಮಾನಂದಂ ಗೆ ಇಂತಹ ಶಾಕ್ ಕೊಡಲು ಕಾರಣವಾದರೂ ಏನೆಂಬುದು ಚರ್ಚೆಗೆ ಕಾರಣವಾಗಿದೆ.

ಸುದ್ದಿಗಳ ಪ್ರಕಾರ ನಿತಿನ್ ನಿರ್ಮಾಣದ ಮಾಚೆರ್ಲಾ ನಿಯೋಜಕವರ್ಗಂ ಸಿನಿಮಾದ ಪಾತ್ರಕ್ಕಾಗಿ ಬ್ರಹ್ಮಾನಂದಂ ಅವರಿಗೆ 10 ದಿನಗಳಿಗೆ ದಿನಕ್ಕೆ 5 ಲಕ್ಷದಂತೆ 50 ಲಕ್ಷ ರೂ. ಸಂಭಾವನೆ ಯನ್ನು ನಿತಿನ್ ಅವರು ಮುಂಗಡವಾಗಿಯೇ ನೀಡಿದ್ದರು ಎನ್ನಲಾಗಿದೆ. ಆದರೆ ಬ್ರಹ್ಮಾನಂದಂ ಅವರು ಹತ್ತು ದಿನಗಳ ಶೂಟಿಂಗ್ ಶೆಡ್ಯೂಲ್ ಗೆ ಸರಿಯಾದ ಸಮಯಕ್ಕೆ ಬಂದಿಲ್ಲ, ಬಂದ ಮೇಲೆ ಸಹಾ ನಿರ್ದೇಶಕರ ಜೊತೆಗೆ ಸಹಕರಿಸಿಲ್ಲ ಎನ್ನಲಾಗಿದೆ. ಇದರಿಂದಲೇ ನಿರ್ಮಾಪಕ ನಿತಿನ್ ಬೇಸತ್ತು ಬ್ರಹ್ಮಾನಂದಂ ಅವರಿಗೆ ಮನೆ ದಾರಿ ತೋರಿಸಿದ್ದಾರೆ ಎನ್ನಲಾಗಿದೆ.

ಕೊಟ್ಟಿರುವ ಹಣ ಹೋದರೂ ಪರವಾಗಿಲ್ಲ, ಆದರೆ ಬ್ರಹ್ಮಾನಂದಂ ಅವರ ನಡವಳಿಕೆಯನ್ನು ಸಹಿಸಿಕೊಳ್ಳುವುದು ಅಸಾಧ್ಯ ಎಂದು ನಿರ್ಮಾಪಕ ನಿತಿನ್ ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಓ ವಿಷಯದಲ್ಲಿ ಎಷ್ಟು ನಿಜವಿದೆ, ಹರಡಿರುವ ಈ ಸುದ್ದಿಯ ಸತ್ಯಾಸತ್ಯತೆಯ ಕುರಿತಾಗಿ ಮಾಚೆರ್ಲ‌ ನಿಯೋಜಕವರ್ಗಂ ಸಿನಿಮಾ ತಂಡ ಪ್ರತಿಕ್ರಿಯೆ ನೀಡಬೇಕಾಗಿದೆ. ಈ ಸುದ್ದಿ ಮಾತ್ರ ಇದೀಗ ಭಾರೀ ಕುತೂಹಲವನ್ನು ಸೃಷ್ಟಿಸಿದೆ.

Leave a Reply

Your email address will not be published. Required fields are marked *