ತನ್ನ ವೃತ್ತಿ ಜೀವನದ ಮೈಲಿಗಲ್ಲಾದ ಸಿನಿಮಾಕ್ಕೆ 13 ವರ್ಷ: ಕನ್ನಡತಿ ಅನುಷ್ಕಾ ಶೆಟ್ಟಿ ಹೇಳಿದ್ದೇನು??

0
137

ದಕ್ಷಿಣ ಸಿನಿಮಾ ರಂಗದ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಸಿನಿ ಪ್ರೇಮಿಗಳಿಗೆ ಚಿರಪರಿಚಿತ. ತೆಲುಗು ಮತ್ತು ತಮಿಳು ಸಿನಿಮಾ ರಂಗಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಈ ಕರಾವಳಿ ಬೆಡಗಿ ತೆಲುಗು ಸಿನಿಮಾ ರಂಗದಲ್ಲಿ ಪಡೆದಿರುವ ಸ್ಥಾನ, ವರ್ಚಸ್ಸು ಹಾಗೂ ಅಭಿಮಾನಿಗಳ ಆದರವು ಮತ್ತೊಂದು ಹಂತಕ್ಕೆ ಇದೆ. ವೈವಿದ್ಯಮಯ ಪಾತ್ರಗಳ ಮೂಲಕ ಸಿನಿಮಾ ಪ್ರೇಮಿಗಳನ್ನು ರಂಜಿಸಿರುವ ನಟಿ ಅನುಷ್ಕಾ ಶೆಟ್ಟಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ತನ್ನದೇ ಆದ ಹೆಸರನ್ನು ಪಡೆದಿದ್ದಾರೆ. ಸಿನಿಮಾ ರಂಗದಿಂದ ಸದ್ಯಕ್ಕೆ ವಿರಾಮ ಪಡೆದಿದ್ದರೂ ತೆಲುಗಿನ ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಎನ್ನುವುದರಲ್ಲಿ ಅನುಮಾನ ಇಲ್ಲ.

ನಟಿ ಅನುಷ್ಕಾ ಶೆಟ್ಟಿ 2009 ರಲ್ಲಿ ನಟ ನಾಗಾರ್ಜುನ ನಾಯಕನಾಗಿದ್ದ ಸೂಪರ್ ಸಿನಿಮಾದ ಮೂಲಕ ತೆಲುಗು ಸಿನಿರಂಗಕ್ಕೆ ಪ್ರವೇಶ ಮಾಡಿದರು. ನಂತರ ರಾಜಮೌಳಿ ನಿರ್ದೇಶನದ ನಟ ರವಿತೇಜ ನಾಯಕನಾಗಿದ್ದ ವಿಕ್ರಮಾರ್ಕುಡು ಸಿನಿಮಾದ ದೊಡ್ಡ ಯಶಸ್ಸು ಅನುಷ್ಕಾ ಜನಪ್ರಿಯತೆಯನ್ನು ದುಪ್ಪಟ್ಟು ಮಾಡಿತು. ಆದರೆ ಅನುಷ್ಕಾ ಅವರ ವೃತ್ತಿ ಜೀವನದಲ್ಲಿ ಮೈಲುಗಲ್ಲಾಗಿ ನಿಂತ ಸಿನಿಮಾ ಮಾತ್ರ ‘ಅರುಂಧತಿ’. ನಿರ್ದೇಶಕ ಕೋಡಿ ರಾಮಕೃಷ್ಣ ಅವರ ನಿರ್ದೇಶನದ ಈ ಸಿನಿಮಾ ಹೊಸ ದಾಖಲೆಯೊಂದನ್ನು ಬರೆಯಿತು.

ಅರುಂಧತಿ ಮೂಲಕ ದಕ್ಷಿಣ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ನಟಿ ಅನುಷ್ಕಾ ಅವರ ಈ ಸಿನಿಮಾ ಬಿಡುಗಡೆಗೊಂಡು ನಿನ್ನೆಗೆ ಬರೋಬ್ಬರಿ ಹದಿಮೂರು ವರ್ಷಗಳು ಕಳೆದಿವೆ. ಆದರೆ ಅರುಂಧತಿ ಸೃಷ್ಟಿಸಿದ ಜಾದೂ ಮಾತ್ರ ಇನ್ನೂ ಮಾಸಿಲ್ಲ. ತನ್ನ ವೃತ್ತಿ ಜೀವನದಲ್ಲಿ ಮೈಲಿಗಲ್ಲಾದ ಈ ಅದ್ಭುತ ಫ್ಯಾಂಟಸಿ ಸಿನಿಮಾ ನಿರ್ಮಾಣಕ್ಕೆ ಕಾರಣರಾದವರಿಗೆ ನಟಿ ಅನುಷ್ಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅನುಷ್ಕಾ ಶೆಟ್ಟಿ ಅವರು ತಮ್ಮ ಪೋಸ್ಟ್ ನಲ್ಲಿ, ಅರುಂಧತಿ ನನ್ನ ಸಿನಿಮಾ ಜೀವನವನ್ನೇ ಬದಲಿಸಿದ ಸಿನಿಮಾ, ಅರುಂಧತಿಗೆ ಪ್ರೇಕ್ಷಕರು ನೀಡಿದ ಬೆಂಬಲಕ್ಕೆ ಧನ್ಯವಾದಗಳು. ಈ ಸಿನಿಮಾ ಸದಾ ನನ್ನ ಮನಸ್ಸಿಗೆ ಹತ್ತಿರವಾಗಿರುತ್ತದೆ ಎಂದು ಬರೆದುಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ. ಪ್ರಸ್ತುತ ನಿಶ್ಯಬ್ದಂ ಸಿ‌ನಿಮಾದ ನಂತರ ಅನುಷ್ಕಾ ಶೆಟ್ಟಿ ಸಿ‌ನಿಮಾಗಳನ್ನು ಮಾಡಿಲ್ಲ. ಅವರ ಕಮ್ ಬ್ಯಾಕ್ ಗಾಗಿ ಅಭಿಮಾನಿಗಳು ಸಹಾ ಬಹಳ ಕಾತುರರಾಗಿದ್ದು, ಅನುಷ್ಕಾ ಹೊಸ ಸಿನಿಮಾ ಯಾವುದು ? ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

LEAVE A REPLY

Please enter your comment!
Please enter your name here