ಮಗ ಶಾಸಕನಾದ್ರೂ, ಕೈಯಲ್ಲಿ ಪೊರಕೆ ಹಿಡಿದು ಶಾಲೆ ಸ್ವಚ್ಛ ಮಾಡುವ ಕೆಲಸಕ್ಕೆ ಹೊರಟ ಮಹಾ ತಾಯಿ!!

0 6

ಮನೆಯಲ್ಲಿ ಯಾರಾದರೂ ಒಬ್ಬರು ಗ್ರಾಮ ಪಂಚಾಯಿತಿ ಸದಸ್ಯರೋ ಅಥವಾ ಪುರಸಭೆ ಸದಸ್ಯರಾದರೂ ಈ ಕಾಲದಲ್ಲಿ ಕುಟುಂಬದ ಸದಸ್ಯರು ಗರ್ವದಿಂದ, ಅಧಿಕಾರದ ಮದವನ್ನು ಪ್ರದರ್ಶಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಇನ್ನು ಎಂಎಲ್ಎ, ಎಂಪಿ, ಮಂತ್ರಿಗಳ ಕುಟುಂಬದವರಾದರೆ ಯಾವ ಸೆಲೆಬ್ರಿಟಿಗಳಿಗಿಂತ ಕಡಿಮೆ ಇಲ್ಲ ಎನ್ನುವ ವರ್ತನೆಯನ್ನು ತೋರುತ್ತಾರೆ. ಅಧಿಕಾರ ಎನ್ನುವುದು ಜನರಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಇಂತಹ ಉದಾಹರಣೆಗಳು ಆಗಾಗ ನಮ್ಮ ಮುಂದೆ ಬರುತ್ತಲೇ ಇರುತ್ತವೆ.

ಆದರೆ ಇದೆಲ್ಲದಕ್ಕಿಂತ ಭಿನ್ನವಾಗಿ ಈಗ ನಾವು ಹೇಳಲು ಹೊರಟಿರುವ ಒಬ್ಬ ಮಹಿಳೆಯು ತಮ್ಮ ಮಗನು ಶಾಸಕನಾಗಿದ್ದರೂ ಸಹಾ ಸ್ವಚ್ಚತಾ ಕರ್ಮಚಾರಿಯಾಗಿ ತಾನು ಮಾಡುತ್ತಿರುವ ಕೆಲಸವನ್ನು ಮಾತ್ರ ಮುಂದುವರೆಸುತ್ತಾ, ಯಾವುದೇ ಗತ್ತು, ಗಮ್ಮತ್ತು , ಶಾಸಕನ ತಾಯಿ ಎನ್ನುವ ಗರ್ವ ಇಲ್ಲದೇ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಾಗಾದರೆ ಯಾರು ಆ ಮಹಿಳೆ? ಯಾವ ಶಾಸಕನ ತಾಯಿ ಈಕೆ? ಎನ್ನುವ ಆಸಕ್ತಿ ನಿಮಗೆ ಇದ್ದರೆ ಬನ್ನಿ ನಾವು ಕೂಡಾ ತಿಳಿದು ಒಂದು ಮೆಚ್ಚುಗೆ ತಪ್ಪದೇ ನೀಡೋಣ.

ಇತ್ತೀಚಿಗೆ ನಡೆದ ಪಂಜಾಬ್ ವಿಧಾನ ಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡಿರುವ ಆಮ್ ಆದ್ಮಿ ಪಾರ್ಟಿ ಅಧಿಕಾರವನ್ನು ಪಡೆಯುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ. 117 ಕ್ಷೇತ್ರಗಳಲ್ಲಿ 92 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷವು ಗೆಲುವನ್ನು ಸಾಧಿಸಿದೆ. ಇವೆಲ್ಲವುಗಳ ನಡುವೆ ಗಮನಿಸಬೇಕಾದ ವಿಷಯ ಏನೆಂದರೆ, ಘಟಾನುಘಟಿ ರಾಜಕೀಯ ನಾಯಕರನ್ನು ಸಾಮಾನ್ಯ ಅಭ್ಯರ್ಥಿಗಳು ಸೋಲಿಸಿ, ಗೆಲುವಿನ ನಗೆಯನ್ನು ಬೀರಿ, ಹೊಸ ಇತಿಹಾಸವನ್ನು ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಪಂಜಾಬ್ ನ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ವಿ ರು ದ್ಧ ಒಬ್ಬ ಮೊಬೈಲ್ ರಿಪೇರಿ ಅಂಗಡಿ ಕೆಲಸಗಾರನಾದ ಲಾಭ್ ಸಿಂಗ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಇವರ ತಾಯಿ ಬಲ್ದೇವ್ ಕೌರ್ ಅವರು ಒಂದು ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕರ್ಮಚಾರಿಯಾಗಿ ಕೆಲಸವನ್ನು ಮಾಡುತ್ತಿದ್ದಾರೆ. ಮಗ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದರೂ ಸಹಾ ತಾಯಿ ಮಾತ್ರ ಯಾವುದೇ ಬಿಗುಮಾನ ಇಲ್ಲದೇ, ಶಾಲೆಗೆ ತೆರಳಿ ಪೊರಕೆ ಹಿಡಿದು ಶಾಲೆ ಸ್ವಚ್ಛ ಮಾಡುವ ಕೆಲಸ ಮುಂದುವರೆಸಿದ್ದಾರೆ.

ಪಂಜಾಬಿನ ಬದೌರ್ ಕ್ಷೇತ್ರದಲ್ಲಿ ಗೆದ್ದಿರುವ ಲಾಭ್ ಸಿಂಗ್ ಉಗೋಕೆ ಅವರ ತಂದೆ ಡ್ರೈವರ್ ಆಗಿದ್ದಾರೆ. ಅವರ ತಾಯಿ ಮಗನ ಗೆಲುವಿನ ಖುಷಿ ಖಂಡಿತ ಇದೆ. ಆದರೆ ಇಷ್ಟು ದಿನ ಕಷ್ಟಪಟ್ಟು ದುಡಿದ ಹಣದಿಂದ ಜೀವನ ನಡೆಸಿದ್ದು, ಅದನ್ನೇ ತಾನು ಮುಂದುವರೆಸುವುದಾಗಿ ಹೇಳಿದ್ದು, ಮಗನಿಂದ ಜನ ಸಾಮಾನ್ಯರಿಗೆ ಒಳ್ಳೆಯದಾದರೆ ಅದೇ ಸಾಕು ಎನ್ನುವ ಮಾತುಗಳನ್ನು ಆಕೆ ಮಾದ್ಯಮವೊಂದರ ಜೊತೆಗೆ ಹಂಚಿಕೊಂಡಿದ್ದಾರೆ.

Leave A Reply

Your email address will not be published.