ತನ್ನ ಬಟ್ಟೆ ಬಗ್ಗೆ ಮಾತನಾಡಿದ ಹಿರಿಯ ನಟನಿಗೆ ಖಡಕ್ ಉತ್ತರ ನೀಡಿದ ನಟಿ/ನಿರೂಪಕಿ ಅನಸೂಯ

Written by Soma Shekar

Published on:

---Join Our Channel---

ಟಾಲಿವುಡ್ ಚಿತ್ರರಂಗದಲ್ಲಿ ಕೋಟಾ ಶ್ರೀನಿವಾಸ್ ರಾವ್ ಎಂದರೆ ನೂರಾರು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಅವರು.‌ ಅವರದ್ದೇ ಆದ ಸ್ಥಾನ ಮತ್ತು ವರ್ಚಸ್ಸನ್ನು ಅವರು ಹೊಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೋಟಾ ಶ್ರೀನಿವಾಸ ರಾವ್ ಅವರು ಹಲವು ವಿಚಾರಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೇ ಅವರು ಮಾ ಚುನಾವಣೆಯ ಕುರಿತಾಗಿ ಮಾತನಾಡುತ್ತಾ ಜಾತಿ ವಿಚಾರವನ್ನು ಅಲ್ಲಿ ಎಳೆದು ತಂದು ದೊಡ್ಡ ವಿ ವಾ ದ ವನ್ನೇ ಹುಟ್ಟು ಹಾಕಿದ್ದರು. ಈಗ ಅದರ ಬೆನ್ನಲ್ಲೇ ಮತ್ತೊಮ್ಮೆ ಕೋಟಾ ಸುದ್ದಿಯಾಗಿದ್ದಾರೆ.

ಕೋಟಾ ಶ್ರೀನಿವಾಸ ರಾವ್ ಅವರು ಕಿರುತೆರೆಯ ಸ್ಟಾರ್ ನಿರೂಪಕಿ ಹಾಗೂ ತೆಲುಗು ಸಿನಿಮಾಗಳಲ್ಲೂ ಸಹಾ ದೊಡ್ಡ ಹೆಸರು ಮಾಡುತ್ತಿರುವ ನಟಿ ಅನಸೂಯ ಭರಧ್ವಾಜ್ ಬಗ್ಗೆ ಮಾತನಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೋಟಾ ಅವರು ತನ್ನ ಬಗ್ಗೆ ಆಡಿದ ಮಾತಿಗೆ ನಟಿ ಕಮ್ ನಿರೂಪಕಿ ಅನಸೂಯ ಕೂಡಾ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೋಟಾ ಅವರನ್ನು ಇತ್ತೀಚಿನ ದಿನಗಳಲ್ಲಿ ಮನರಂಜನಾ ವಾಹಿನಿಗಳು ಯಾವ ರೀತಿ ಹಾಸ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ ಎನ್ನುವ ಪ್ರಶ್ನೆ ಕೇಳಲಾಯಿತು.

ಈ ವೇಳೆ ಅದಕ್ಕೆ ಉತ್ತರ ನೀಡುತ್ತಾ ಕೋಟಾ ಅವರು ಈ ಟಿವಿ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಕಾಮೆಡಿ ಶೋ ಜಬರ್ದಸ್ತ್ ಹೆಸರು ಉಲ್ಲೇಖ ಮಾಡುತ್ತಾ, ಇವು ಕಾಮೆಡಿ ಕಾರ್ಯಕ್ರಮಗಳಲ್ಲ, ಸರ್ಕಸ್ ನಂತೆ ಕಾಣುತ್ತಿವೆ. ಸದ್ಯಕ್ಕೆ ಅದನ್ನು ಜನರು ನೋಡುತ್ತಿರಬಹುದು. ಆದರೆ ಹೆಚ್ಚು ಕಾಲ ನೋಡುವುದಿಲ್ಲ ಎಂದು ಹೇಳುತ್ತಲೇ ಈ ಕಾರ್ಯಕ್ರಮದ ನಿರೂಪಕಿ ಅನಸೂಯ ಬಗ್ಗೆ, ಆಕೆಯ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಕೋಟಾ ಶ್ರೀನಿವಾಸ ರಾವ್ ಅವರು ಮಾತನಾಡಿದ್ದಾರೆ.

ಅನಸೂಯ ಒಳ್ಳೆಯ ನಟಿ, ನಿರೂಪಕಿ, ಅವರಲ್ಲಿ ಪ್ರತಿಭೆ ಇದೆ. ಆದರೆ ವೈಯಕ್ತಿಕವಾಗಿ ಅವರ ಡ್ರೆಸ್ ಇಷ್ಟವಾಗುವುದಿಲ್ಲ ಎಂದಿದ್ದಾರೆ. ಈ ಮಾತಿಗೆ ಅಸಮಾಧಾನ ಗೊಂಡ ಅನಸೂಯ ಅವರು ನನ್ನ ಡ್ರೆಸ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವುದು ಖುಷಿಯ ವಿಷಯ. ಆದರೆ ಅಂತಹ ಹಿರಿಯ, ಅನುಭವಿ ನಟ ಹೀಗೆ ಕೆಳಮಟ್ಟದ ಕಾಮೆಂಟ್ ಮಾಡಿದಾಗ ಬೇಸರ ಎನಿಸುತ್ತದೆ.‌ ಯಾವ ರೀತಿ ಬಟ್ಟೆ ಧರಿಸಬೇಕು ಎನ್ನುವುದು ಅವರ ವೈಯಕ್ತಿಯ ಆಯ್ಕೆ ಆಗಿರುತ್ತದೆ.

ಮದುವೆಯಾಗಿ, ಮಕ್ಕಳಿರುವ ನಟರೆಲ್ಲಾ ಶರ್ಟ್ ಬಿಚ್ಚಿಕೊಂಡು ತೆರೆಯ ಮೇಲೆ ನಟಿಯರ ಜೊತೆ ರೊಮ್ಯಾನ್ಸ್ ಮಾಡುವುದನ್ನು ಮಾತ್ರ ಏಕೆ ಯಾರೂ ಪ್ರಶ್ನೆ ಮಾಡುವುದಿಲ್ಲ ಎಂದು ತಿರುಗೇಟು ನೀಡಿರುವ ಅನಸೂಯ ತಮ್ಮ ಮಾತಿನಲ್ಲಿ ಎಲ್ಲಿಯೂ ಕೂಡಾ ಕೋಟಾ ಶ್ರೀನಿವಾಸ್ ರಾವ್ ಅವರ ಹೆಸರನ್ನು ಪ್ರಸ್ತಾಪ ಮಾಡದೆಯೇ ಅವರಿಗೆ ತನ್ನ ಉತ್ತರವನ್ನು ನೀಡಿದ್ದಾರೆ.

Leave a Comment