ತನ್ನ ಬಗ್ಗೆ ಒರಟಾಗಿ ಮಾಡಿದ ಕಾಮೆಂಟ್ ನೋಡಿ, ತನ್ನ ತಪ್ಪು ಒಪ್ಪಿಕೊಂಡ ಕಿಚ್ಚನಿಗೆ ನೆಟ್ಟಿಗರಿಂದ ಸಿಕ್ತು ಚಪ್ಪಾಳೆ

Entertainment Featured-Articles News
47 Views

ನಿನ್ನೆ ಭಾನುವಾರ ಆಗಸ್ಟ್ 15, ಭಾರತಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನವಾಗಿತ್ತು. ದೇಶದ ಎಲ್ಲೆಡೆಯಲ್ಲಿಯೂ ಸಹ ಸ್ವತಂತ್ರ ದಿನಾಚರಣೆಯನ್ನು ಕೊರೊನಾ ಆ ತಂ ಕ ದ ನಡುವೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಂಭ್ರಮ ಹಾಗೂ ಸಡಗರದಿಂದ ಆಚರಣೆಯನ್ನು ಮಾಡಲಾಗಿದೆ. ದೇಶದ ಎಲ್ಲ ಮೂಲೆಗಳಲ್ಲೂ ಸಹಾ ಜನರು ರಾಷ್ಟ್ರಧ್ವಜವನ್ನು ಹಾರಿಸಿ,‌ರಾಷ್ಟ್ರಗೀತೆಯನ್ನು ಹಾಡಿ, ದೇಶಕ್ಕಾಗಿ ತನು-ಮನ-ಧನ ಪ್ರಾಣವನ್ನು ಅರ್ಪಿಸಿದಂತಹ ಅಸಂಖ್ಯಾತ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಿದ್ದಾರೆ. ಸ್ವಾತಂತ್ರ್ಯ ದಿನದ ಸಂಭ್ರಮ ಆಚರಣೆಯಲ್ಲಿ ಸಿನಿಮಾ ತಾರೆಯರು ಹಿಂದೆ ಬಿದ್ದಿಲ್ಲ. ಅವರು ಸಹ ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರೆ. ಸೋಶಿಯಲ್ ಮೀಡಿಯಾ ಗಳ ಮೂಲಕ ಜನರಿಗೆ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿರುವ ನಟ ಕಿಚ್ಚ ಸುದೀಪ್ ಅವರು ರಾಷ್ಟ್ರಗೀತೆಯನ್ನು ಹಾಡಿ, ಆ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಭಿಮಾನ ನಟ ರಾಷ್ಟ್ರಗೀತೆಯನ್ನು ಹಾಡಿರುವ ವಿಡಿಯೋ ನೋಡಿ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಕಾಮೆಂಟ್ಗಳನ್ನು ಮಾಡುವ ಮೂಲಕ ಅಪಾರವಾದ ಮೆಚ್ಚುಗೆಯನ್ನು ಹರಿಸಿದ್ದಾರೆ. ಸುದೀಪ್ ಅವರು ರಾಷ್ಟ್ರಗೀತೆ ಹಾಡಿರುವುದು ಬಹಳಷ್ಟು ಜನರಿಗೆ ಖುಷಿ ನೀಡಿದೆ. ಆದರೆ ಇದೇ ವೇಳೆ ಕೆಲವರಿಗೆ ಅವರು ಹಾಡಿದ ರಾಷ್ಟ್ರಗೀತೆಯಲ್ಲಿ ತಪ್ಪೊಂದು ಕಂಡುಬಂದಿದೆ. ಸಾಮಾನ್ಯವಾಗಿ ರಾಷ್ಟ್ರಗೀತೆಯನ್ನು 48 ರಿಂದ 52 ಸೆಕೆಂಡ್ ಗಳ ಕಾಲದಲ್ಲಿ ಹಾಡಲಾಗುತ್ತದೆ. ಆದರೆ ಸುದೀಪ್ ಅವರು ಸುಮಾರು 65 ಸೆಕೆಂಡುಗಳ ಕಾಲ ರಾಷ್ಟ್ರಗೀತೆಯನ್ನು ಹಾಡಿದ್ದಾರೆ.

ಇದನ್ನು ಗಮನಿಸಿದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, “ಸರಿಯಾಗಿ ರಾಷ್ಟ್ರಗೀತೆ ಹಾಡಿ ಸರ್, ನಿಮ್ಮನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ನೀವು ಟಾಪ್ ನಟ ಆಗಿರಬಹುದು ಆದರೆ 48-52 ಸೆಕೆಂಡ್‍ಗಳ ಒಳಗೆ ರಾಷ್ಟ್ರ ಗೀತೆಯನ್ನು ಹಾಡಬೇಕು ಎನ್ನುವ ಕಾಮನ್ ಸೆನ್ಸ್ ಇಲ್ವಾ” ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟ ಕಿಚ್ಚ ಸುದೀಪ್ ಅವರು, “ಕಾಮೆಂಟ್ ತುಂಬಾ ಒರಟಾಗಿದೆ ಆದರೂ ನಾನು ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಮೇಲಿನ ಪ್ರೀತಿಯಿಂದ ಏನು ಅನ್ನಿಸುತ್ತೋ ಅದನ್ನು ಮಾಡಿದ್ದೇನೆ ” ಎಂದು ಉತ್ತರವನ್ನು ನೀಡಿದ್ದಾರೆ. ಸುದೀಪ್ ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರತಿಕ್ರಿಯೆ ನೀಡಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸುದೀಪ್ ಅವರ ಈ ನಡೆಯನ್ನು ಇನ್ನಷ್ಟು ಮೆಚ್ಚಿಕೊಂಡಿದ್ದಾರೆ.‌ ಇದು ನಿಜಕ್ಕೂ ನಿಮ್ಮ ದೊಡ್ಡ ಗುಣವಾಗಿದೆ, ನೀವೊಬ್ಬರು ಜೆಂಟಲ್ ಮ್ಯಾನ್ ಎಂದೆಲ್ಲ ಹೊಗಳಿಕೆಯನ್ನು ನೀಡುತ್ತಾ ಸಾಗಿದ್ದಾರೆ.

Leave a Reply

Your email address will not be published. Required fields are marked *