ತನ್ನ ತಂದೆಯಂತೆ ಇನ್ನಾರೂ ಕಷ್ಟ ಪಡಬಾರದೆಂದು ತಾನೇ IAS ಅಧಿಕಾರಿಯಾದ ರೈತನ ಮಗಳು

Entertainment Featured-Articles News

ಯಾವುದೇ ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸಹಿ ಬೇಕು ಎಂದರೆ ಅದು ಸುಲಭವಾಗಿ ದೊರಕುವುದಿಲ್ಲ. ಒಂದು ಸಹಿಗಾಗಿ ತಿಂಗಳುಗಟ್ಟಲೆ ಸರ್ಕಾರಿ ಕಛೇರಿಗಳ ಸುತ್ತಾ ಅಲೆಯಬೇಕಾದ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಇದು ಬಹಳಷ್ಟು ಜನರಿಗೆ ಈಗಾಗಲೇ ಅನುಭವಕ್ಕೆ ಬಂದಿದೆ.‌ಯಾವುದೋ ಒಂದು ಪ್ರಮಾಣಪತ್ರಕ್ಕಾಗಿಯೋ ಅಥವಾ ಇನ್ನಾವುದೋ ಕಾರಣಕ್ಕಾಗಿಯೋ ಸರ್ಕಾರಿ ಅಧಿಕಾರಿಗಳ ಸಹಿ ಬೇಕು ಎಂದರೆ ಅಲ್ಲಿ, ಇಲ್ಲಿ ಎಂದು ಬಹಳಷ್ಟು ಅಲೆದಾಡಿದ ನಂತರವೇ ನಮಗೆ ಅಧಿಕಾರಿಗಳ ಸಹಿ ದೊರೆಯುತ್ತದೆ. ಅನೇಕ ಸಂದರ್ಭಗಳಲ್ಲಿ ಅಷ್ಟೆಲ್ಲಾ ಅಲೆದಾಡಿದ ನಂತರವೂ ಅಧಿಕಾರಿಗಳಿಂದ ಸಹಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿಗಳನ್ನು ಎದುರಿಸಬೇಕಾದರೂ ಅಚ್ಚರಿಯೇನಲ್ಲ.

ಇಂತಹ ಪರಿಸ್ಥಿತಿಗಳಲ್ಲಿ ತನ್ನ ತಂದೆ ಯಾವುದೋ ಒಂದು ಕೆಲಸಕ್ಕಾಗಿ ಸರ್ಕಾರಿ ಕಛೇರಿಗಳ ಸುತ್ತಲೂ ಅಲೆಯುವುದನ್ನು ಕಂಡ ಮಗಳೊಬ್ಬಳು ಬೇಸರಗೊಂಡು, ಅಂತಹ ಸಮಸ್ಯೆಗಳಿಗೆ ಒಂದು ಪರಿಹಾರವಾಗಬೇಕೆಂದು ತಾನೇ ಐಎಎಸ್ ಅಧಿಕಾರಿಯಾದ ಸ್ಫೂರ್ತಿಯ ಕಥೆಯನ್ನು ನಾವಿಂದು ನಿಮಗೆ ಹೇಳಲು ಹೊರಟಿದ್ದೇವೆ. ಹೌದು ಈ ಕಥೆಯು ನಿಜವಾಗಿಯೂ ಅನೇಕರಿಗೆ ಸ್ಫೂರ್ತಿಯಾಗಲಿದೆ. ವಿಶೇಷವಾಗಿ ಇಂದಿನ ಯುವಜನತೆಗೆ ಪ್ರೇರಣೆಯನ್ನು ನೀಡಲಿದೆ. ಇಂತಹ ಇಂದು ಸಾಧನೆ ಮಾಡಿದ ಅಂದಿನ ಬಾಲಕಿ, ಇಂದಿನ ಐಎಎಸ್ ಅಧಿಕಾರಿಯ ಹೆಸರು ರೋಹಿಣಿ.

ರೋಹಿಣಿ ಅವರು ಮೂಲತಃ ಮಹಾರಾಷ್ಟ್ರದ ಒಂದು ಕೃಷಿಕ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ಒಬ್ಬ ರೈತ. ರೋಹಿಣಿ ಅವರ ಆರಂಭಿಕ ಶಿಕ್ಷಣವು ಸರ್ಕಾರಿ ಶಾಲೆಯಲ್ಲಿ ನಡೆಯಿತು. ಅನಂತರ ಅವರು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಪಡೆಯುವಲ್ಲಿ ಯಶಸ್ಸನ್ನು ಪಡೆದುಕೊಂಡರು. ನಂತರ ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದರು. ಆಕೆ ತನ್ನ ಬಲ ಹಾಗೂ ಆತ್ಮವಿಶ್ವಾಸದೊಂದಿಗೆ ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ತಯಾರಿಯನ್ನು ನಡೆಸಿದ್ದು ನಿಜಕ್ಕೂ ಅದ್ಭುತ ಎನಿಸುತ್ತದೆ.

ಐಎಎಸ್ ಮಾಡಲು ಕೋಚಿಂಗ್ ಬೇಕು ಎನ್ನುವವರ ನಡುವೆ ತನ್ನ ಸಾಮರ್ಥ್ಯದಿಂದಲೇ ಅಧ್ಯಯನ ನಡೆಸಿ ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಅವರ ಸಾಧನೆ ಅಕ್ಷರಶಃ ಒಂದು ಸ್ಪೂರ್ತಿಯಾಗಿದೆ.ರೋಹಿಣಿ ಅವರಿಗೆ 9 ವರ್ಷ ವಯಸ್ಸಾಗಿದ್ದಾಗ ಸರ್ಕಾರವು ರೈತರಿಗಾಗಿ ಕೆಲವು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿತ್ತು. ಆ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ರೋಹಿಣಿ ಅವರ ತಂದೆ ಹಲವು ಸರ್ಕಾರಿ ಅಧಿಕಾರಿಗಳ ಕಛೇರಿಗಳಿಗೆ ಅಲೆದಾಡಿದರು. ಆ ದಿನಗಳಲ್ಲಿ ತಂದೆ ಕಛೇರಿಗಳ ಸುತ್ತ ಅಲೆದಾಡಿ ಬರುವುದನ್ನು ರೋಹಿಣಿ ನೋಡುತ್ತಿದ್ದರು.

ಹಾಗೆ ಒಂದು ದಿನ ಸುತ್ತಾಡಿ ಮನೆಗೆ ಬಂದು ತಂದೆ ಆಯಾಸದಿಂದ ಕುಳಿತಿರುವುದನ್ನು ಕಂಡ ಮಗಳು, ತಂದೆಯ ಬಳಿ ಹೋಗಿ, ನೀವು ಏಕೆ ಇಷ್ಟೆಲ್ಲ ಓಡಾಡುತ್ತಿರುವಿರಿ, ಏಕೆ ಇಷ್ಟೊಂದು ಕಷ್ಟ ಪಡುತ್ತಿರುವಿರಿ. ಜನರ ಕಷ್ಟಗಳನ್ನು ಪರಿಹರಿಸುವುದು ಯಾವ ಅಧಿಕಾರಿಯ ಕೆಲಸ ಎಂದು ಕೇಳಿದಳು. ಆಗ ಅವರ ತಂದೆ ಒಂದೇ ಪದದಲ್ಲಿ ‘ಜಿಲ್ಲಾಧಿಕಾರಿ’ ಎನ್ನುವ ಉತ್ತರ ನೀಡಿದರು. ತಂದೆಯಿಂದ ಉತ್ತರವನ್ನು ಪಡೆದ ಮೇಲೆ ಜಿಲ್ಲಾಧಿಕಾರಿ ಪದವು ಬಾಲಕಿ ರೋಹಿಣಿಯ ಮೆದುಳಿನಲ್ಲಿ, ಆಲೋಚನೆಯಲ್ಲಿ ಬಲವಾಗಿ ಮುದ್ರಿತವಾಯಿತು.

ಆಗಲೇ ಬಾಲಕಿ ರೋಹಿಣಿಯು ತಾನು ಕಷ್ಟಪಟ್ಟು ಓದಿ ಜಿಲ್ಲಾಧಿಕಾರಿಯಾಗಬೇಕೆಂದು ನಿರ್ಧರಿಸಿದಳು. ಮಗಳ ನಿರ್ಧಾರವನ್ನು ಕೇಳಿ ಅವರ ತಂದೆಗೆ ಬಹಳ ಸಂತೋಷವಾಯಿತು. ಅವರು ಮಗಳಿಗೆ ಸಲಹೆ ನೀಡುತ್ತಾ, ನೀನು ಜಿಲ್ಲಾಧಿಕಾರಿ ಆದರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕು, ಅವರಿಗೆ ಅಗತ್ಯವಿರುವ ನೆರವನ್ನು ನೀಡಬೇಕು ಎಂದು ಹೇಳಿದರು. ಸ್ವತಃ ಒಬ್ಬ ಸ್ವಯಂಸೇವಕನಾಗಿದ್ದ ಅವರಿಗೆ ಸರ್ಕಾರಿ ಕಛೇರಿಗಳಲ್ಲಿ ಅಧಿಕಾರಿಗಳ ಸಹಿ ಪಡೆಯಲು ಪಡುವ ಕಷ್ಟವನ್ನು ಬಹಳ ಚೆನ್ನಾಗಿ ಅರಿತುಕೊಂಡಿದ್ದರು.

ರೋಹಿಣಿ ತಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. ತಮ್ಮ ಜಿಲ್ಲೆಯ ಮೊದಲ ಮಹಿಳಾ ಐಎಎಸ್ ಅಧಿಕಾರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಐಎಎಸ್ ತರಬೇತಿಯ ನಂತರ ಅವರನ್ನು ಮೊದಲು ಮಧುರೈನ ಗ್ರಾಮೀಣ ವಿಕಾಸ ಯೋಜನೆ ಅಡಿಯಲ್ಲಿ ಕಲೆಕ್ಟರ್ ಮತ್ತು ಯೋಚನೆ ಅಧಿಕಾರಿಯಾಗಿ ನೇಮಕ ಮಾಡಲಾಯಿತು. ತನ್ನ ದಕ್ಷ ಕಾರ್ಯದಿಂದ ಜನರ ಮೆಚ್ಚುಗೆಯನ್ನು ಪಡೆದ ಅವರು ತಮಿಳು ಮಾತನಾಡುವುದನ್ನು ಕಲಿತಿದ್ದಾರೆ. ತನ್ನ ತಂದೆಯಂತೆ ಬೇರೆಯವರು ಅಧಿಕಾರಿಗಳ ಸಹಿಗಾಗಿ ಅಲೆಯಬಾರದು ಎಂದು ತಾನು ಕರ್ತವ್ಯ ನಿರ್ವಹಿಸುವ ಕಡೆ ಬಹಳ ಎಚ್ಚರಿಕೆ ವಹಿಸುತ್ತಾರೆ.

Leave a Reply

Your email address will not be published.