ನಟಿ ರಶ್ಮಿಕಾ ಮಂದಣ್ಣ ಎಂದರೆ ಈಗ ಅವರು ಸ್ಟಾರ್ ನಟಿ, ಬಹುಭಾಷಾ ನಟಿ, ಹೆಚ್ಚು ಬೇಡಿಕೆಯನ್ನು ತನ್ನದಾಗಿಸಿಕೊಂಡಿರುವ ನಟಿ. ದಕ್ಷಿಣದ ಸಿನಿಮಾಗಳ ಜೊತೆಗೆ ಈಗಾಗಲೇ ಬಾಲಿವುಡ್ ಗೂ ಈಗಾಗಲೇ ರಶ್ಮಿಕಾ ಎಂಟ್ರಿ ನೀಡಿಯಾಗಿದೆ. ರಶ್ಮಿಕಾ ಹೀಗೆ ಬೆಳೆಯುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸುತ್ತಾ ಅವರಿಗೆ ಪ್ರೋತ್ಸಾಹವನ್ನು ನೀಡುವಾಗಲೇ, ಮತ್ತೊಂದು ಕಡೆ ರಶ್ಮಿಕ ತೀವ್ರವಾಗಿ ಟ್ರೋಲ್ ಗೆ ಗುರಿಯಾಗುವುದು ಕೂಡಾ ಸಾಮಾನ್ಯ ಎನ್ನುವಂತಾಗಿದೆ. ಅಂತಹದೇ ಟ್ರೋಲಿಗನೊಬ್ಬನ ಕಾಮೆಂಟ್ ಗೆ ರಶ್ಮಿಕ ನೀಡಿರುವ ಉತ್ತರ ಇದೀಗ ವೈರಲ್ ಆಗಿದೆ.
ರಶ್ಮಿಕಾ ನೀಡಿದ ಖಡಕ್ ಉತ್ತರವನ್ನು ಕಂಡು ಬಹಳಷ್ಟು ಜನ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವ ಹೊಸ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಯಿತು. ಈ ಪೋಸ್ಟರ್ ಬಿಡುಗಡೆಯ ನಂತರ ವ್ಯಕ್ತಿಯೊಬ್ಬರು ಅದಕ್ಕೆ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. “ಪದೇ ಪದೇ ಟಾಲಿವುಡ್ ಮಂದಿ ತಮ್ಮ ಸಿನಿಮಾಗಳಿಗೆ ರಶ್ಮಿಕ ಅವರನ್ನೇ ಆಯ್ಕೆ ಮಾಡುತ್ತಿರುವುದು ಏಕೆ? ಎಂದು ಆದ ಕಾಮೆಂಟ್ ಮಾಡಿ ಪ್ರಶ್ನೆ ಮಾಡಿದ್ದಾನೆ. ಆತ ಮಾಡಿದ ಈ ಪ್ರಶ್ನೆಗೆ ನಟಿ ರಶ್ಮಿಕಾ ಮಂದಣ್ಣ ಅವರ ಒಂದೇ ಒಂದು ಸಾಲಿನಲ್ಲಿ ಉತ್ತರವನ್ನು ನೀಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ರಶ್ಮಿಕಾ, ತಮ್ಮ ಪ್ರತಿಕ್ರಿಯೆಯಲ್ಲಿ ಅವರನ್ನು ಏಕೆ ಪದೇ ಪದೇ ಆಯ್ಕೆಮಾಡಲಾಗುತ್ತದೆ ಎನ್ನುವುದಕ್ಕೆ ಉತ್ತರಿಸುತ್ತಾರೆ, “ನನ್ನ ನಟನೆ ಗೋಸ್ಕರ” ಎಂದು ಉತ್ತರವನ್ನು ನೀಡಿದ್ದಾರೆ. ರಶ್ಮಿಕಾ ಮಾಡಿದ ಈ ಕಾಮೆಂಟ್ ವೈರಲ್ ಆಗಿದೆ. ರಶ್ಮಿಕಾ ಮಂದಣ್ಣ ಅಭಿಮಾನಿಗಳು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ರಶ್ಮಿಕಾ ಅಭಿಮಾನಿಗಳು ವೈವಿಧ್ಯಮಯವಾದ ಮೀಮ್ಸ್ ಗಳನ್ನು ಮಾಡುವ ಮೂಲಕ ಕಾಮೆಂಟ್ ಮಾಡಿ ರಶ್ಮಿಕಾ ಕಾಲೆಳೆಯುವ ಪ್ರಯತ್ನ ಮಾಡಿದ ಟ್ರೋಲಿಗನಿಗೆ ಸರಿಯಾದ ಪಾಠವನ್ನು ಕಲಿಸಿದ್ದಾರೆ.
ತಾನು ಮಾಡಿದ ಒಂದು ಕಾಮೆಂಟ್ ನಿಂದ ತಾನೇ ಟ್ರೋಲಿಗೆ ಗುರಿಯಾಗುತ್ತಿರುವುದು ನೋಡಿದ ಆ ವ್ಯಕ್ತಿ, ಕಡೆಗೆ ಬೇರೆ ದಾರಿಯಿಲ್ಲದೆ ರಶ್ಮಿಕಾ ಅವರನ್ನು ವ್ಯಂಗ್ಯ ಮಾಡಲು ತಾನು ಹಾಕಿದ್ದ ಕಮೆಂಟನ್ನು ಡಿಲೀಟ್ ಮಾಡಿದ್ದಾನೆ. ಒಟ್ಟಾರೆ ತನ್ನನ್ನು ಟ್ರೋಲ್ ಮಾಡುವವರನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ರಶ್ಮಿಕಾ ಕೂಡಾ ಕಲಿತಿರುವ ಹಾಗೆ ಕಾಣುತ್ತಿದೆ. ಪ್ರಸ್ತುತ ರಶ್ಮಿಕಾ ಮಂದಣ್ಣ ಕೈಯಲ್ಲಿ ಹಲವು ಸಿನಿಮಾಗಳಿವೆ. ನಟ ಅಲ್ಲು ಅರ್ಜುನ್ ಜೊತೆಗೆ ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಪುಷ್ಪ ಇದೇ ಡಿಸೆಂಬರ್ 17ಕ್ಕೆ ಬಿಡುಗಡೆಗೆ ಸಜ್ಜಾಗಿದೆ.